Vijayapura Cashew Farming: ಕೃಷ್ಣಾ ನದಿ ತೀರದ ರೈತರ ಖುಷಿ ಹೆಚ್ಚಿಸಿದ ಗೋಡಂಬಿ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಗುಮ್ಮಟ ನಗರಿಯ ಕೃಷ್ಣಾ ನದಿ ತೀರದಲ್ಲಿ ಇದೀಗ ಗೋಡಂಬಿ ಕೃಷಿ ಭಾರೀ ಲಾಭದಾಯಕವೆನಿಸಿದೆ. ಮೊದಲೆಲ್ಲಾ ಗೋಡಂಬಿ ಕೃಷಿಯ ಗೊಡವೆ ಬೇಡ ಎಂದವರೀಗ ಗೋಡಂಬಿಯಿಂದಲೇ ಹಣ ಸಂಪಾದಿಸುತ್ತಿದ್ದಾರೆ.

  • News18 Kannada
  • 2-MIN READ
  • Last Updated :
  • Bijapur, India
  • Share this:

ವಿಜಯಪುರ: ಕೆಂಪು ಕೆಂಪಾಗಿರೋ ಗೇರು ಹಣ್ಣು ನೋಡ್ತಾ ಇದು ಎಲ್ಲೋ ಮಲೆನಾಡೋ, ಕರಾವಳಿಯಲ್ಲೋ ಅಂದ್ಕೋಬೇಡಿ. ಈಗ ಬರದನಾಡಲ್ಲೂ ಗೋಡಂಬಿ ಘಮಲು ಹೆಚ್ಚಾಗಿದೆ. ಗೋಡಂಬಿ (Cashew) ಬಗ್ಗೆ ಅಷ್ಟಾಗಿ ತಿಳಿಯದೇ ಇದ್ದವರು, ಈಗ ಗೇರು ಬೀಜ ಕೃಷಿ ಮೂಲಕ ಸಾವಿರಾರು ರೂಪಾಯಿ ಲಾಭ ಪಡೆಯುತ್ತಿದ್ದಾರೆ. ಹೀಗೆ ಕೃಷ್ಣಾ ನದಿ (Krishna River) ತೀರದಲ್ಲಿ ಸದ್ಯ ಗೇರು ಬೀಜದ (Cashew Farmers) ಘಮಲು ರೈತರ ಆದಾಯ ಹೆಚ್ಚಿಸಿದೆ.


ವಿಜಯಪುರ ಜಿಲ್ಲೆಯ ಆಲಮಟ್ಟಿ ಎಡದಂಡೆ ಕಾಲುವೆಗುಂಟದ ಬೇನಾಳ ತಾಂಡಾದ ರಾಠೋಡ ಮನೆತನದವರಿಗೆ ಸೇರಿದ ಅಂದಾಜು 60 ಎಕರೆ ಪ್ರದೇಶದಲ್ಲಿ ಗೋಡಂಬಿ ಕೃಷಿ ಕೈಗೊಳ್ಳಲಾಗಿದೆ.




ಅನೇಕ ವರ್ಷಗಳ ಹಿಂದೆಯೇ ಗೋಡಂಬಿ ಜತೆಗೆ ಮಾವು ಕೃಷಿ ಕೈಗೊಂಡಿದ್ದಾರೆ. ಸದ್ಯ ಗೋಡಂಬಿ ಸಮೃದ್ಧವಾಗಿದ್ದರಿಂದ ಕಾಲುವೆಗುಂಟ ಸಾಗುವವರೆಲ್ಲ ಗೋಡಂಬಿ ಘಮಲಿಗೆ ಮಾರು ಹೋಗುತ್ತಿದ್ದಾರೆ.


ಗೋಡಂಬಿ ಬಗ್ಗೆ ನಿರಾಸಕ್ತಿ
ಅಚ್ಚರಿ ಅಂದ್ರೆ ಈ ಗೋಡಂಬಿ ಲಾಭದ ಕುರಿತು ಹೆಚ್ಚಿನ ಮಾಹಿತಿ ಬೆಳೆಗಾರರಿಗೆ ಇರಲಿಲ್ಲ. ಹೀಗಾಗಿ ಮೊದಲೆಲ್ಲಾ ಗಿಡದಲ್ಲಿನ ಗೋಡಂಬಿ ದಾರಿಹೋಕರಿಗೆ ಮತ್ತು ಜಾನುವಾರು ಕಾಯಲು ಬಂದವರಿಗೆ ಮೀಸಲಾಗುತ್ತಿತ್ತು. ಉಳಿದ ಅಲ್ಪಸ್ವಲ್ಪ ಇಳುವರಿಯನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಸಿಕ್ಕಷ್ಟು ಹಣ ಪಡೆಯುತ್ತಿದ್ದರು.




ಉತ್ತಮ ಲಾಭ
ಇದೀಗ ಕೆಲ ವರ್ಷಗಳಿಂದ ವೈಜ್ಞಾನಿಕ ಪದ್ದತಿಗಳನ್ನು ಅಳವಡಿಸಿಕೊಂಡಿದ್ದರಿಂದ ಉತ್ತಮವಾಗಿ ಇಳುವರಿ ಬರುತ್ತಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿದೆ. ಮೊದಲೆಲ್ಲಾ ಗೋಡಂಬಿ ಕೃಷಿಯ ಗೊಡವೆ ಬೇಡ ಎಂದವರೀಗ ಗೋಡಂಬಿಯಿಂದಲೇ ಹಣ ಸಂಪಾದಿಸುತ್ತಿದ್ದಾರೆ. ನೂರಾರು ರೂಪಾಯಿ ಪಡೆಯುತ್ತಿದ್ದವರೀಗ ಸಾವಿರಾರು ರೂಪಾಯಿ ಲಾಭ ಗಳಿಸುತ್ತಿದ್ದಾರೆ.


ಇದನ್ನೂ ಓದಿ: Vijayapura Travel Plan: ಲಕ್ಷ ಲಕ್ಷ ಬೆಲೆಯ ಮೀನುಗಳನ್ನ ನೋಡ್ಬೇಕಿದ್ರೆ ಇಲ್ಲಿಗೆ ಬನ್ನಿ!


ಗೋವಾದಲ್ಲಿ ಮಾರ್ಕೆಟಿಂಗ್!
ಮೊದಲೆಲ್ಲಾ ಸ್ಥಳೀಯ ಮಾರುಕಟ್ಟೆಗೆ ಕಳುಹಿಸುತ್ತಿದ್ದ ರಾಠೋಡ ಕುಟುಂಬದ ರೈತರೆಲ್ಲಾ ಕಳೆದ ಮೂರು ನಾಲ್ಕು ವರ್ಷಗಳಿಂದ ಗೋವಾ ಮಾರುಕಟ್ಟೆಗೆ ಸರಬರಾಜು ಮಾಡುತ್ತಿದ್ದಾರೆ.




ಇದನ್ನೂ ಓದಿ: Sapota Farmers: ರಸ್ತೆ ಬದಿ ಚಿಕ್ಕು ಮಾರಿ ಸಖತ್ ಆದಾಯ, ಈ ರೈತರ ಸಕ್ಸಸ್ ಸ್ಟೋರಿ ಕೇಳಿ


ನದಿ ತೀರ, ಉತ್ತಮ ಹವಾಗುಣ ಗೋಡಂಬಿಗೆ ವಿಜಯಪುರದ ಈ ಭೂಮಿಯಲ್ಲಿ ನೆಲೆ ಕಲ್ಪಿಸಿದೆ. ಜೊತೆಗೆ ಬೆಳೆಗಾರನ ಆದಾಯವನ್ನೂ ಹೆಚ್ಚಿಸಿದೆ. ಮಲೆನಾಡು, ಕರಾವಳಿಯಲ್ಲಿ ವ್ಯಾಪಕವಾಗಿರುವ ಗೇರುಬೀಜ ಕೃಷಿ ಈಗಲೂ ಗುಮ್ಮಟ ನಗರಿಯಲ್ಲೂ ಸಖತ್ ಸದ್ದು ಮಾಡ್ತಿದೆ.


ವರದಿ: ಪ್ರಶಾಂತ ಹೂಗಾರ್, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ

First published: