ವಿಜಯಪುರ: ಸಾಲಾಗಿ ಕಟ್ಟಿ ಹಾಕಿರೋ ಎತ್ತುಗಳು. ಕ್ರಯ ಕೊಟ್ಟು ಖರೀದಿಸಲು ಮುಂದಾಗಿರೋ ರೈತರು. ಇನ್ನು ದನಗಳ ಪಾಲಿಗೆ ಬೇಕಾದ ಅಲಂಕಾರಿಕ ವಸ್ತುಗಳಿಗೆ ಸಿಕ್ತು ಸಖತ್ ಡಿಮ್ಯಾಂಡ್. ಅಂದಹಾಗೆ ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು ವಿಜಯಪುರದಲ್ಲಿ (Vijayapura Cattle Fair) ನಡೆದ ದನಗಳ ಜಾತ್ರೆಯಲ್ಲಿ.
ದನಗಳ ಜಾತ್ರೆ
ಮುದ್ದೇಬಿಹಾಳ ರಸ್ತೆಯಲ್ಲಿ ಆರಂಭವಾದ ದನಗಳ ಜಾತ್ರೆಗೆ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ಕಳೆದ ಬಾರಿಯಂತೆ ಈ ಬಾರಿ ದನಗಳ ಜಾತ್ರೆಗೆ ನಿಷೇಧ ಇಲ್ದೇ ಇರೋದ್ರಿಂದ ಜನರು ಹುಮ್ಮಸ್ಸಿನಿಂದ ಪಾಲ್ಗೊಂಡರು. ಕಳೆದ ಬಾರಿ ಚರ್ಮಗಂಟು ರೋಗದಿಂದಾಗಿ ಜಾನುವಾರು ಸಾಗಾಟಕ್ಕೆ ನಿಷೇಧವಿತ್ತು.
ಭರ್ಜರಿ ವಹಿವಾಟು
ಎರಡು ದಿನಗಳ ಜಾತ್ರೆಗೆ ಬಾಗಲಕೋಟೆ, ವಿಜಯಪುರ, ಮುದ್ದೇಬಿಹಾಳ, ಹುನಗುಂದ, ಬಾದಾಮಿ, ಇಳಕಲ್, ಗೋಕಾಕ್ ಹೀಗೆ ಹಲವಾರು ಗ್ರಾಮಗಳಿಂದ ಆಗಮಿಸಿದ ರೈತರು ತಮ್ಮಿಷ್ಟದ ದನಗಳನ್ನ ಖರೀದಿಸಿದರು. ಪ್ರತಿ ಜೋಡಿ ಎತ್ತುಗಳು 50 ಸಾವಿರದಿಂದ ಹಿಡಿದು 1 ಲಕ್ಷದವರೆಗೆ ಮಾರಾಟವಾದವು. ಹೀಗಾಗಿ ಮಾರಾಟಗಾರರು ಖುಷಿಯಾದರು.
ಇದನ್ನೂ ಓದಿ: Success Story: 40 ಸಾವಿರ ಖರ್ಚು, ಒಂದೂವರೆ ಲಕ್ಷ ಆದಾಯ! ಜೇಬು ತುಂಬಿಸುತ್ತಿದೆ ಈ ಬೆಳೆ
ಅಲಂಕಾರಿಕಾ ವಸ್ತುಗಳಿಗೆ ಡಿಮ್ಯಾಂಡ್
ರೈತರು ಎತ್ತುಗಳನ್ನ ಖರೀದಿಸಿದ ಬಳಿಕ ದನಕರುಗಳಿಗೆ ಜೂಲ, ಗುಮರಿ, ಗಂಟೆ, ಬಾರಕೋಲು, ಗೆಜ್ಜೆ, ಚೈನ್ಲು ಹೀಗೆ ಅಲಂಕಾರಿಕ ವಸ್ತುಗಳನ್ನ ಖರೀದಿಸಲು ಮುಗಿಬಿದ್ದ ದೃಶ್ಯಗಳು ಕೂಡಾ ಕಂಡು ಬಂದವು.
ಇದನ್ನೂ ಓದಿ: Vijayapura: ಇಡೀ ವರ್ಷ ಹೆಸರಿಲ್ಲದೇ ಬೆಳೆಯುವ ಮಕ್ಕಳು!
ಒಟ್ಟಿನಲ್ಲಿ ದನಗಳ ಜಾತ್ರೆಯಲ್ಲಿ ರೈತರು, ಮಾರಾಟಗಾರರು ಭಾರೀ ಹುಮ್ಮಸ್ಸಿನಿಂದ ಪಾಲ್ಗೊಂಡರು. ಒಳ್ಳೆಯ ಕ್ರಯ ಸಿಕ್ಕ ಖುಷಿ ಮಾರಾಟಗಾರರಿಗಾದರೆ, ಒಳ್ಳೆಯ ಎತ್ತು, ದನಗಳು ಸಿಕ್ಕ ಖುಷಿಯಲ್ಲಿ ಖರೀದಿದಾರರು ನಿರ್ಗಮಿಸಿದರು.
ವರದಿ: ಪ್ರಶಾಂತ ಹೂಗಾರ್, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ