• ಹೋಂ
  • »
  • ನ್ಯೂಸ್
  • »
  • ವಿಜಯಪುರ
  • »
  • Vijayapura Success Story: 'ಆಗದು ಎಂದು ಕೈ ಕಟ್ಟಿ ಕುಳಿತರೆ..' ಅಣ್ಣಾವ್ರು ಹೇಳಿದಂತೆ ಸಕ್ಸಸ್ ಕಂಡ ಕೃಷಿಕ!

Vijayapura Success Story: 'ಆಗದು ಎಂದು ಕೈ ಕಟ್ಟಿ ಕುಳಿತರೆ..' ಅಣ್ಣಾವ್ರು ಹೇಳಿದಂತೆ ಸಕ್ಸಸ್ ಕಂಡ ಕೃಷಿಕ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ದಾಳಿಂಬೆಗಳ ಭರ್ಜರಿ ಫಸಲು ತೆಗೆಯುವಲ್ಲಿ ಬರದ ನಾಡಿನ ರೈತರೊಬ್ಬರು ಯಶಸ್ವಿಯಾಗಿದ್ದಾರೆ. ದಾಳಿಂಬೆ, ಪೇರಲೆ ಕೃಷಿ ಮಾಡಿ ಸೈ ಎನಿಸಿಕೊಂಡಿದ್ದಾರೆ.

  • News18 Kannada
  • 4-MIN READ
  • Last Updated :
  • Bijapur, India
  • Share this:

ವಿಜಯಪುರ: ಹಸಿರ ಮರೆಯಲ್ಲಿ ಅರಳಿವೆ ಕೆಂಪು ದಾಳಿಂಬೆಗಳು! (Pomegranate). ಬರದ ನಾಡಿನ ಮಣ್ಣಿನಲ್ಲಿ ಹಸಿರ ಪೇರಲೆಯ ಸೊಬಗು. ನೀರು ಸಿಗದ ಜಮೀನಿನಲ್ಲಿ ಈಗ ಎಲ್ಲಿ ನೋಡಿದ್ರಲ್ಲಿ ಹಚ್ಚ ಹಸಿರ ಫಲಗಳ ಫಸಲು. ಇದೆಲ್ಲವೂ ಸಾಧ್ಯವಾಗಿದ್ದಾದ್ರೂ (Success Story) ಹೇಗೆ ಅಂತೀರ? ಈ ಸ್ಟೋರಿ ನೋಡಿ.


ಯೆಸ್, ಬರದ ನಾಡು ಎಂಬ ಹೆಸರಿದ್ರೂ ವಿಜಯಪುರದ ಮಣ್ಣಿಗೆ ಬೆಳೆಗಳನ್ನ ಒಗ್ಗಿಸಿಕೊಳ್ಳುವಲ್ಲಿ ಅಲ್ಲಿನ ರೈತರು ಯಶಸ್ವಿಯಾಗಿದ್ದಾರೆ ಅನ್ನೋದಕ್ಕೆ ಮುದ್ದೇಬಿಹಾಳ ಪಟ್ಟಣದ ನಿವಾಸಿ ರಾಜೇಂದ್ರ ಅವರೇ ಸಾಕ್ಷಿಯಾಗಿದ್ದಾರೆ.




ಬಿ.ಕಾಂ ಪದವೀಧರನಾಗಿರುವ ಅವರು, ಸಾವಯವ ಪದ್ಧತಿ ಅಳವಡಿಸಿಕೊಂಡು ವಿವಿಧ ತೋಟಗಾರಿಕೆ ಬೆಳೆಗಳನ್ನ ಬೆಳೆದು ಅಧಿಕ ಲಾಭ ಪಡೆದುಕೊಂಡು ಇನ್ನುಳಿದ ರೈತರಿಗೂ ಮಾದರಿಯಾಗಿದ್ದಾರೆ.



ರಕ್ತ ಚಂದನ ನಾಟಿ
ವಿಶೇಷವಾಗಿ ಕಲ್ಲು ಭೂಮಿಯಲ್ಲಿ ಏಕದಳ ಮತ್ತು ದ್ವಿದಳ ಬೆಳೆಗಳನ್ನ ಬಿತ್ತನೆ ಮಾಡಿರುವ ಇವರು, ಗುಜರಾತ್​ನಿಂದ 40 ರೂ. ನಂತೆ 1,500 ರಕ್ತ ಚಂದನ ಸಸಿಗಳನ್ನ ಖರೀದಿಸಿ ತಂದು ನಾಟಿ ಮಾಡಿದ್ದಾರೆ.‌ ಇದರ ಮಧ್ಯೆ ದಾಳಿಂಬೆ, ಪೇರಲೆ ಕೃಷಿಯನ್ನ ಮಾಡಿ ಸೈ ಎನಿಸಿಕೊಂಡಿದ್ದಾರೆ.




ಲಕ್ಷಾಂತರ ರೂಪಾಯಿ ನಷ್ಟ
ಅಚ್ಚರಿ ಅಂದ್ರೆ, ರಾಜೇಂದ್ರ ಅವರು 4 ಎಕರೆ ಬರಡು ಭೂಮಿಯಲ್ಲಿ ಅಂದಾಜು 15 ಕೊಳವೆ ಬಾವಿಯನ್ನ ಕೊರೆಸಿ ಲಕ್ಷಾಂತರ ರೂ. ನಷ್ಟ ಅನುಭವಿಸಿದ್ದರು. ಇಷ್ಟಾದ್ರೂ ಧೃತಿಗೆಡದೆ ಮತ್ತೆ ಆ ಕಲ್ಲು ಭೂಮಿಯಲ್ಲಿ ಕೊಳವೆ ಬಾವಿ ತೆಗಸಲು ಮುಂದಾಗುತ್ತಾರೆ. ಕೊನೆಯ ಪ್ರಯತ್ನದಲ್ಲಿ 2 ಇಂಚಿನಷ್ಟು ನೀರು ಸಿಗುತ್ತದೆ. ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ತೋಟದ ತುಂಬೆಲ್ಲ ಹನಿ ನೀರಾವರಿ ಪದ್ಧತಿಯನ್ನ ಅಳವಡಿಸಿಕೊಂಡಿದ್ದಾರೆ.




ಇದನ್ನೂ ಓದಿ: Vijayapura Shiva Temple: ತಲೆಯ ಮೇಲೆ ಶ್ರೀ ಚಕ್ರ ಹೊಂದಿರುವ ಅಪರೂಪದ ಶಿವಲಿಂಗ!


ಜೀವಾಮೃತ ಬಳಕೆ
ಏಕದಳ ಮತ್ತು ದ್ವಿದಳ ಬೆಳೆಗಳನ್ನ ಬಿತ್ತನೆ ಮಾಡಿದ್ದಾರೆ. 1,500 ದಾಳಿಂಬೆ ಸಸಿಗಳನ್ನ ಬೆಳೆದಿದ್ದಾರೆ. ಜೊತೆಗೆ ಪೇರಲೆ, ಇತರೆ ತರಕಾರಿಗಳು ಅಷ್ಟೇ ಸೊಂಪಾಗಿ ಬೆಳೆದಿವೆ. ಸಂಪದ್ಭರಿತ ಫಲ ಬರೋದಕ್ಕೆ ರಾಜೇಂದ್ರ ಅವರು ಯಾವುದೇ ಬೆಳೆಗೆ ರಸಾಯನಿಕ ಗೊಬ್ಬರ, ಕ್ರಿಮಿನಾಶಕವನ್ನ ಸಿಂಪಡಣೆ ಮಾಡದೆ, ಅದರ ಬದಲು ತಿಪ್ಪೆ ಗೊಬ್ಬರ, ಗೋಮೂತ್ರ ಸೇರಿದಂತೆ ಬೆಳೆಗಳಿಗೆ ಜೀವಾಮೃತವನ್ನ ನೀಡುತ್ತಾ ಬಂದಿದ್ದಾರೆ.




ಭರ್ಜರಿ ಮಾರಾಟ
ಸದ್ಯ ದಾಳಿಂಬೆ ಕಟಾವಿಗೆ ಬಂದಿದ್ದು ಪ್ರತಿಗಿಡದಲ್ಲೂ 10 ರಿಂದ 15 ಕೆಜಿ ಅಷ್ಟು ದಾಳಿಂಬೆ ಹಣ್ಣು ಬಿಟ್ಟಿದ್ದು, ಚೆನ್ನೈಗೆ ಪ್ರತಿ ಕೆಜಿಗೆ 70 ರಿಂದ 80 ರೂ. ನಂತೆ ಮಾರಾಟ ಮಾಡಲು ಮುಂದಾಗಿದ್ದಾರೆ. ಅಂದಾಜು 10 ರಿಂದ 12 ಲಕ್ಷ ಆದಾಯ ಬರುವ ನಿರೀಕ್ಷೆಯೂ ರಾಜೇಂದ್ರ ಅವರಿಗಿದೆ.‌


ಇದನ್ನೂ ಓದಿ: Bagalkote Anjaneya Temple: ತಿರುಪತಿ ತಿಮ್ಮಪ್ಪನ ಪ್ರತಿರೂಪ ಈ ಹನುಮಂತ!


ಒಟ್ಟಿನಲ್ಲಿ ಬರದ ನಾಡಿನಲ್ಲಿ ಅದಕ್ಕೆ ವಿರುದ್ಧವಾಗಿ ಫಸಲು ತೆಗೆಯುವಲ್ಲಿ ರಾಜೇಂದ್ರ ಅವರು ಸಕ್ಸಸ್ ಆಗೋದರ ಜೊತೆಗೆ,‌ಇತರರಿಗೂ ಮಾದರಿಯಾಗಿದ್ದಾರೆ‌.

top videos


    ವರದಿ: ಪ್ರಶಾಂತ ಹೂಗಾರ್, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ

    First published: