• Home
  • »
  • News
  • »
  • vijayapura
  • »
  • Emotional Video: 12 ವರ್ಷಗಳ ನಂತರ ಒಂದಾದ ನೂರಾರು ವಿದ್ಯಾರ್ಥಿಗಳು!

Emotional Video: 12 ವರ್ಷಗಳ ನಂತರ ಒಂದಾದ ನೂರಾರು ವಿದ್ಯಾರ್ಥಿಗಳು!

X
ಇಲ್ಲಿದೆ ಭಾವನಾತ್ಮಕ ವಿಡಿಯೋ

"ಇಲ್ಲಿದೆ ಭಾವನಾತ್ಮಕ ವಿಡಿಯೋ"

ಹಳೆ ವಿದ್ಯಾರ್ಥಿಗಳು ತಮ್ಮ ಬಾಲ್ಯದ ನೆನಪುಗಳನ್ನು ಪ್ರಸ್ತುತಪಡಿಸಿದರೆ, ಸನ್ಮಾನ ಸ್ವೀಕರಿಸಿದ ಶಿಕ್ಷಕರು ವಿದ್ಯಾರ್ಥಿಗಳ ಪ್ರೀತಿಗೆ ಖುಷಿಪಟ್ಟರು.

  • Share this:

    ವಿದ್ಯಾರ್ಥಿಗಳು ಹೆಂಡ್ತಿ ಜೊತೆ ಬಂದ್ರೆ, ವಿದ್ಯಾರ್ಥಿನಿಯರು ಗಂಡ, ಮಕ್ಕಳ ಜೊತೆ ಬಂದಿದ್ರು. ಯೂನಿಫಾರಂ ಬದಲು ಸೀರೆ, ಪ್ಯಾಂಟ್ ಶರ್ಟ್ ಧರಿಸಿ ಕುಟುಂಬ ಶಾಲೆಗೆ ಬಂದ ಅವರಿಗೆಲ್ಲ ಟೀಚರ್ಸ್ ಕಂಡು ಮಮಕಾರವಿತ್ತೇ ವಿನಃ ಆತಂಕವಿರಲಿಲ್ಲ. ಒಂದೊಂದೇ ನೆನಪುಗಳು ಮೆಲುಕು ಹಾಕುತ್ತಾ ಭಾವುಕರಾದರೆ, ಶಿಕ್ಷಕರಿಗಂತೂ (Teachers Emotional Video) ಅವಿಸ್ಮರಣೀಯ ಕ್ಷಣವದು. ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು, ಬಾಗಲಕೋಟೆ ಜಿಲ್ಲೆಯ (Bagalkot News) ಶಿರೂರ ಪಟ್ಟಣದ ಶ್ರೀಸಿದ್ಧೇಶ್ವರ ಪ್ರೌಢಶಾಲೆಯಲ್ಲಿ.


    ಯೆಸ್, ಹೀಗೆ ಈ ಹುಡುಗ, ಹುಡುಗಿಯರು ಬಾಲ್ಯದಲ್ಲಿ ತುಂಟಾಟ ಮಾಡಿ ನಕ್ಕು, ನಲಿದ ಈ ಶಾಲೆಯಲ್ಲಿ ಬರೋಬ್ಬರಿ 12 ವರ್ಷಗಳ ನಂತರ ಒಂದಾಗಿದ್ದರು. ಪಾಠ ಮಾಡಿ ಜೀವನದ ದಾರಿ ತೋರಿಸಿಕೊಟ್ಟ ಗುರುಗಳನ್ನ ಕಂಡು ಹಳೆಯ ವಿದ್ಯಾರ್ಥಿಗಳಿಗೆ ಸಂಭ್ರಮ, ಸಂತೋಷ ಇಮ್ಮಡಿಸಿತ್ತು.


    ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ವಿದ್ಯಾರ್ಥಿಗಳು
    ಈ ಎಲ್ಲ ವಿದ್ಯಾರ್ಥಿಗಳು ಈ ಗ್ರಾಮದ ಸರ್ಕಾರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ಕ್ಲಾಸ್​ವರೆಗೆ ಓದಿ ಶ್ರೀಸಿದ್ಧೇಶ್ವರ ಪ್ರೌಢ ಶಾಲೆಯಲ್ಲಿ ಹೈಸ್ಕೂಲ್ ಮುಗಿಸಿದವರು. ಈಗ ಜೀವನದಲ್ಲಿ ಒಂದು ಹಂತ ತಲುಪಿದವರು. ಭಾರತೀಯ ಸೇನೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಖಾಸಗಿ ಕಂಪೆನಿಗಳಲ್ಲಿ ದುಡಿಯುತ್ತಿರುವ ಇವರೆಲ್ಲರೂ ಒಂದುಗೂಡಿದ್ದರು.


    ಶ್ರೀಸಿದ್ಧೇಶ್ವರ ಪ್ರೌಢಶಾಲಾ ಆವರಣದಲ್ಲಿ ಅರ್ಥಪೂರ್ಣ ಗುರುವಂದನೆ ನಡೆಸಿ ಶಿಕ್ಷಕರನ್ನು ಸನ್ಮಾನಿಸಲಾಯ್ತು. ಕೆಲವರಂತೂ ತಮ್ಮಿಷ್ಟದ ಶಿಕ್ಷಕರನ್ನು ಕಂಡು ಭಾವುಕರಾದರು, ಇನ್ನು ಫೋಟೋಗಳನ್ನು ಕ್ಲಿಕ್ಕಿಸಿ ಸಂಭ್ರಮಿಸಿದರು. ಸನ್ಮಾನ ಸ್ವೀಕರಿಸಿದ ಗುರುಗಳ ಕಣ್ಣಂಚಿನಲ್ಲಿ ಉರುಳಿದ ಹನಿಭಾಷ್ಪಗಳೇ ಎಲ್ಲವನ್ನೂ ಬಿಡಿಸಿ ಹೇಳಿತ್ತು.


    ಇದನ್ನೂ ಓದಿ: Positive Story: 12 ವರ್ಷಗಳಿಂದ ಸೈಕಲ್ಲೇ ಇವರ ವಾಹನ! ಪಾಕಿಸ್ತಾನಕ್ಕೂ ಭೇಟಿ ನೀಡುವ ಆಸೆ


    ವಿವಿಧ ವಿನೋದಾವಳಿ ನಡೆಸಿ ಖುಷಿ
    ಹಳೆ ವಿದ್ಯಾರ್ಥಿಗಳು ತಮ್ಮ ಬಾಲ್ಯದ ನೆನಪುಗಳನ್ನು ಪ್ರಸ್ತುತಪಡಿಸಿದರೆ, ಸನ್ಮಾನ ಸ್ವೀಕರಿಸಿದ ಶಿಕ್ಷಕರು ವಿದ್ಯಾರ್ಥಿಗಳ ಪ್ರೀತಿಗೆ ಖುಷಿಪಟ್ಟರು. ಎಲ್ಲ ಶಿಕ್ಷಕರನ್ನು ಒಂದುಗೂಡಿಸಿ ಸಿದ್ದೇಶ್ವರ ಹೈಸ್ಕೂಲ್ ಹಳೆ ವಿದ್ಯಾರ್ಥಿಗಳು ಸಂಭ್ರಮಿಸಿದರು. ವಿವಿಧ ವಿನೋದಾವಳಿಗಳನ್ನು ಕೂಡಾ ಆಯೋಜಿಸುವ ಮೂಲಕ ಕಾರ್ಯಕ್ರಮವನ್ನು ಸವಿ ನೆನಪಿನಲ್ಲಿ ಇರುವಂತೆ ಮಾಡಿದರು.


    ಇದನ್ನೂ ಓದಿ: Communal Harmony: ಹನುಮ ಮಾಲಾಧಾರಿ ಸ್ವಾಮಿ ಜಾಫರ್! ಮುಸ್ಲಿಂ ವ್ಯಕ್ತಿಯ ಭಾವೈಕ್ಯತೆಯ ಮಂತ್ರ


    ಒಟ್ಟಿನಲ್ಲಿ ಹನ್ನೆರಡು ವರ್ಷಗಳ ಬಳಿಕ ತಮಗೆ ಕಲಿಸಿದ ಗುರುಗಳನ್ನು ಅದೇ ಶಾಲೆಯಲ್ಲಿ ಒಂದುಗೂಡಿಸಿ ನಡೆಸಿದ ಗುರುವಂದನಾ ಕಾರ್ಯಕ್ರಮ ಗುರು ಶಿಷ್ಯರ ನಡುವಿನ ಮಹತ್ವವನ್ನು ಸಾರಿ ಹೇಳಿದಂತಿತ್ತು.


    ವರದಿ: ಪ್ರಶಾಂತ್ ಹೂಗಾರ, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: