ವಿಜಯಪುರ: ಇನ್ನೇನು ಕರ್ನಾಟಕ ವಿಧಾನಸಭಾ (Karnataka Assembly Elections 2023) ಚುನಾವಣೆಯ ದಿನ ಹತ್ತಿರ ಬರುತ್ತಿದೆ. ಅಧಿಕೃತ ದಿನಾಂಕ ಸದ್ಯದಲ್ಲೇ ಘೋಷಣೆಯಾಗುವ ಸಾಧ್ಯತೆಯಿದೆ. ಚುನಾವಣಾ ಆಯೋಗ ಚುನಾವಣೆ ನಡೆಸಲು ವೇಗದ ತಯಾರಿ ನಡೆಸುತ್ತಿದೆ. ಹೀಗಾಗಿ ವಿಜಯಪುರ ಉಪ ವಿಭಾಗದ ವ್ಯಾಪ್ತಿಯ ಮತದಾರರಿಗೆ (Vijayapura Voters List) ಚುನಾವಣಾ ಆಯೋಗ ಸೂಚನೆಯೊಂದನ್ನು ನೀಡಿದೆ.
ವಿಜಯಪುರ ಉಪ ವಿಭಾಗದ ವ್ಯಾಪ್ತಿಯ ಮುದ್ದೇಬಿಹಾಳ, ಬಸವನ ಬಾಗೇವಾಡಿ, ಬಬಲೇಶ್ವರ, ಬಿಜಾಪುರ ನಗರ ಹಾಗೂ ನಾಗಠಾಣ ವಿಧಾನಸಭಾ ಮತಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅಂತಿಮ ಮತದಾರರ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ.
ಮತದಾರರು ಮಾಡಬೇಕಿರುವುದೇನು?
ವಿಜಯಪುರ ಉಪ ವಿಭಾಗದ ಕಚೇರಿಯೂ ಸೇರಿದಂತೆ, ತಹಶೀಲ್ದಾರ, ಕಚೇರಿಗಳಲ್ಲಿ , ಗ್ರಾಮ ಆಡಳಿತಾಧಿಕಾರಿಗಳ (ಚಾವಡಿ) ಹಾಗೂ ಸಂಬಂಧಿಸಿದ ಮತಗಟ್ಟೆಗಳಲ್ಲಿ ಈ ವಿವರ ಲಭ್ಯವಿದೆ. ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಪರಿಶೀಲಿಸಿಕೊಳ್ಳುವಂತೆ ವಿಜಯಪುರ ಉಪ ವಿಭಾಗದ ಮತದಾರರ ನೋಂದಣಾಧಿಕಾರಿಗಳೂ ಆದ ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅವರು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: Vijayapura: ಜೇನು ಮಾರಿ ತಿಂಗಳಿಗೆ ಲಕ್ಷ ಲಕ್ಷ ಗಳಿಸುತ್ತಿರುವ ವಿಜಯಪುರದ ಯುವಕ!
ನಿಮ್ಮ ಹೆಸರನ್ನು ಖಚಿತಪಡಿಸಿಕೊಳ್ಳಿ
ಸಾರ್ವಜನಿಕರು ಗ್ರಾಮದ ಆಡಳಿತ ಅಧಿಕಾರಿಗಳ ಕಚೇರಿ (ಗ್ರಾಮ ಲೆಕ್ಕಾಧಿಕಾರಿ) ಹಾಗೂ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್ಒ) ಇವರಲ್ಲಿ ಇರುವ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕಿದೆ.
ಇದನ್ನೂ ಓದಿ: Vijayapura: ಇಲ್ಲಿ ಐದು ರೂಪಾಯಿಗೆ ಸಿಗುತ್ತೆ ಬೆಳಗಿನ ತಿಂಡಿ! ಜನ ನೋಡಿದ್ರೆ ಜಾತ್ರೆ ನೆನಪಾಗುತ್ತೆ!
ನಿಮ್ಮ ಹೆಸರು ಇಲ್ಲದಿದ್ದರೆ ಹೀಗೆ ಮಾಡಿ
ಒಂದು ವೇಳೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿದ್ದರೆ ತಮ್ಮ ವ್ಯಾಪ್ತಿಯ ಗ್ರಾಮ ಆಡಳಿತ ಅಧಿಕಾರಿಗಳ ( ಗ್ರಾಮ ಲೆಕ್ಕಾಧಿಕಾರಿ ) ಅಥವಾ ಬಿಎಲ್ಒ ಅವರನ್ನು ಸಂಪರ್ಕಿಸಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರ್ಪಡೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ