• ಹೋಂ
  • »
  • ನ್ಯೂಸ್
  • »
  • ವಿಜಯಪುರ
  • »
  • Vijayapura: ಇಲ್ಲಿ ಐದು ರೂಪಾಯಿಗೆ ಸಿಗುತ್ತೆ ಬೆಳಗಿನ ತಿಂಡಿ! ಜನ ನೋಡಿದ್ರೆ ಜಾತ್ರೆ ನೆನಪಾಗುತ್ತೆ!

Vijayapura: ಇಲ್ಲಿ ಐದು ರೂಪಾಯಿಗೆ ಸಿಗುತ್ತೆ ಬೆಳಗಿನ ತಿಂಡಿ! ಜನ ನೋಡಿದ್ರೆ ಜಾತ್ರೆ ನೆನಪಾಗುತ್ತೆ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಇದು ವಿಜಯಪುರ ನಗರದ ವಿಠ್ಠಲ ಮಂದಿರ ರಸ್ತೆ. ಇಲ್ಲಿ ಪ್ರತಿದಿನ ಬೆಳಗಾದರೆ ಸಾಕು, ವಿದ್ಯಾರ್ಥಿಗಳು, ಕಾರ್ಮಿಕರು, ಸಾರ್ವಜನಿಕರ ಗುಂಪು ಕಂಡುಬರುತ್ತೆ!

  • News18 Kannada
  • 2-MIN READ
  • Last Updated :
  • Bijapur, India
  • Share this:

    ವಿಜಯಪುರ: ಇದೇನಿದು ಜಾತ್ರೆ ಊಟಾನಾ? ಇಲ್ಲೇನಾದ್ರೂ ಉತ್ಸವವೇನಾದ್ರೂ ನಡೆಯುತ್ತಿದೆಯಾ? ಖರೆ ಕಣ್ರೀ, ಇಂತ ಪ್ರಶ್ನೆ ಯಾರಾದ್ರೂ ಕೇಳೇ ಕೇಳ್ತಾರೆ. ಯಾಕಂದ್ರೆ ಇಲ್ಲಿ ಎಷ್ಟೊತ್ತಿಗೆ ಬಂದ್ರೂ ಜನ ಜಂಗುಳಿ, ಲಗು ಬಗೆಯ ತಿಂಡಿ ತಿನಿಸುಗಳು (Variety Of Foods) ಕಂಡುಬರುತ್ತೆ. ಹಾಗಿದ್ರೆ ಇಲ್ಲೇನು ವಿಶೇಷ (Vijayapura Special Food) ಅಂತಾ ಕೇಳ್ತೀರ? ಹೇಳ್ತೀವಿ ನೋಡಿ.


    ಫುಡ್ ಸ್ಟ್ರೀಟ್
    ಯೆಸ್, ಇದು ವಿಜಯಪುರ ನಗರದ ವಿಠ್ಠಲ ಮಂದಿರ ರಸ್ತೆ. ಇಲ್ಲಿ ಪ್ರತಿದಿನ ಬೆಳಗಾದರೆ ಸಾಕು ವಿದ್ಯಾರ್ಥಿಗಳು, ಕಾರ್ಮಿಕರು, ಸಾರ್ವಜನಿಕರ ಗುಂಪು ಕಂಡುಬರುತ್ತೆ. ಇವ್ರೆಲ್ಲ ತಮ್ಮ ಹೊಟ್ಟೆ ಹಸಿವು ತಣಿಸೋಕೆ ಬರುವವರು. ಬದಲಿಗೆ ಇಲ್ಲಿ ಯಾವುದೇ ಉತ್ಸವವೂ ಇಲ್ಲ, ಜಾತ್ರೆನೂಇಲ್ಲ. ರಸ್ತೆಯಲ್ಲಿರೋ ಹತ್ತಾರು ಪುಟ್​ಪಾತ್ ಅಂಗಡಿಗಳಲ್ಲಿ ಸಿಗುವ ತಿಂಡಿ ತಿನಿಸುಗಳು ಅದೆಷ್ಟು ರುಚಿಯೋ ಅಷ್ಟೇ ಚೀಪ್ ಕೂಡಾ. ಅದಕ್ಕಾಗಿ ವಿದ್ಯಾರ್ಥಿಗಳು, ಜನಸಾಮಾನ್ಯರು ಬೆಳಗಿನ ಉಪಹಾರ, ಮಧ್ಯಾಹ್ನದ ಊಟಕ್ಕಾಗಿ ಮುಗಿಬೀಳುತ್ತಾರೆ.


    ವಿದ್ಯಾರ್ಥಿಗಳಿಗೆ ಅನುಕೂಲ
    ವಿಶೇಷವೆಂದರೆ ರಾಜ್ಯದ ಹಲವಾರು ಜಿಲ್ಲೆಗಳಿಂದ ಉನ್ನತ ವ್ಯಾಸಂಗ ಮತ್ತು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗೆ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ವಿಜಯಪುರ ನಗರಕ್ಕೆ ಆಗಮಿಸುವುದುಂಟು.ಇಲ್ಲಿಗೆ ಬಂದವರು ಪಿಜಿಗಳಲ್ಲಿ ಉಳಿದುಕೊಳ್ಳುತ್ತಾರೆ. ಆದ್ರೆ ಬೆಳಗಿನ ತಿಂಡಿ ಮಧ್ಯಾಹ್ನದ ಉಪಹಾರಕ್ಕೆ ಅಂಗಡಿಗಳ ಮೊರೆ ಹೋಗುತ್ತಾರೆ.


    ಇದನ್ನೂ ಓದಿ: Vijayapura: ಜೇನು ಮಾರಿ ತಿಂಗಳಿಗೆ ಲಕ್ಷ ಲಕ್ಷ ಗಳಿಸುತ್ತಿರುವ ವಿಜಯಪುರದ ಯುವಕ!

    ₹5 ತಿಂಡಿ ತಿನಿಸುಗಳು
    ಇಲ್ಲಿ ಸಿಗೋ ರುಚಿ ರುಚಿ ತಿಂಡಿಗಳ ರೇಟು ಅಷ್ಟೇ, ಕೇವಲ 5 ರೂಪಾಯಿ! ಇಡ್ಲಿ, ಉಪ್ಪಿಟ್ಟು, ಪಲಾವು, ದೋಸೆ, ಸಜ್ಜಕ, ಸೀರಾ, ಅವಲಕ್ಕಿ ಒಂದಾ ಎರಡಾ ಹೀಗೆ ಹತ್ತಾರು ಬಗೆಯ ತಿಂಡಿಗಳು ಕೇವಲ 5 ರೂಪಾಯಿಗೆ ಇಲ್ಲಿ ಸಿಗುತ್ತವೆ. ಬೆಳಗ್ಗೆ 7 ಗಂಟೆಗೆ ತೆರೆಯುವ ಅಂಗಡಿಗಳು ಮಧ್ಯಾಹ್ನದವರೆಗೂ ತೆರೆದಿರುತ್ತೆ. ಇಲ್ಲಿಗೆ ಬರುವ ಬಡ ವಿದ್ಯಾರ್ಥಿಗಳಿಗೆ ಮತ್ತು ಕೂಲಿ ಕಾರ್ಮಿಕರಿಗೆ ಇದರಿಂದ ಬಹಳಷ್ಟು ಉಪಯೋಗವಾಗಿದೆ.


    ಇದನ್ನೂ ಓದಿ: Vijayapura: ವಿಜಯಪುರದಲ್ಲಿ ಇಸ್ರೇಲ್ ಮಾದರಿ ಕೃಷಿ! ಯಶಸ್ಸು ಕಂಡ ಐಟಿ ಉದ್ಯೋಗಿ

    ಒಟ್ಟಿನಲ್ಲಿ ವಿಜಯಪುರದ ವಿಠಲ ಮಂದಿರ ರಸ್ತೆ ಸದಾ ಗಿಜಿಗುಡುತ್ತಿರುತ್ತೆ. ಜೊತೆಗೆ ಕಡಿಮೆ ರೇಟಿಗೆ ಸ್ವಾದಿಷ್ಟ ಆಹಾರ ನೀಡುವ ಮೂಲಕ ಸರ್ವ ಜನರಿಗೂ ಉಪಕಾರಿಯೂ ಆಗಿದೆ.


    ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು