Bagalkote: ಬರಡು ಭೂಮಿ ಈಗ ಹಚ್ಚ ಹಸಿರಿನ ಕಾಡು! ಈ ಜಾದೂ ಹಿಂದಿನ ಮಾಂತ್ರಿಕ ಇವರೇ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಬೇವು, ಹುಣಸೆ, ಪೇರು, ಮಾವು, ಶ್ರೀಗಂಧ, ರಾಮಫಲ, ಸಾಗುವಾನಿ, ತೆಂಗು, ಹಲಸು ಸೇರಿದಂತೆ ನೂರಕ್ಕೂ ಹೆಚ್ಚು ಜಾತಿಯ ಮರಗಳನ್ನ ಬೆಳೆದು ನೋಡಿದರು. ಮುಂದೆ ವರ್ಷಗಳು ಉರುಳುತ್ತಲೇ ಕಾಡಿನ ವಾತಾವರಣ ತಲೆ ಎತ್ತಿತು.

  • News18 Kannada
  • 3-MIN READ
  • Last Updated :
  • Bagalkot, India
  • Share this:

    ಬಾಗಲಕೋಟೆ: ಚೆನ್ನಾಗಿ ಬೆಳೆದು ಹಣ್ಣಾಗಲು ರೆಡಿಯಾಗಿರೋ ಹಲಸು, ಸೀತಾಫಲ. ಬಿಸಿಲ ವಾತಾವರಣವಿದ್ರೂ ಸೊಂಪಾಗಿ ಬೆಳೆದಿರೋ ಶ್ರೀಗಂಧ, ಸಾಗುವಾನಿ, ಮಾವು. ಕೃಷಿಕರ (Farmers) ಪಾಲಿಗೆ ವರವಾಯಿತು ಸ್ವಾಮೀಜಿಗಳ (Swamiji) ಸಲಹೆ. ಹೀಗೆ ಬರಡು ಭೂಮಿಯಲ್ಲಿ ಸಂಪದ್ಭರಿತ ಫಸಲು (Positive Story) ಮೂಡಿದ ಕಥೆಯಿದು.


    ಬರಡು ಬಂಜರು ಭೂಮಿ
    ಯೆಸ್‌, ಬಾಗಲಕೋಟೆ ನಗರದಿಂದ ಹುನಗುಂದ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯೆ ಶಿರೂರ ಬಳಿ ಈ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ವರ್ತಿಕಟ್ಟೆ ಅಥವಾ ಚಿತ್ತರಗಿ ವಿಜಯಮಹಾಂತ ತೀರ್ಥ ಸಿಗುತ್ತೆ. ಸುಮಾರು ವರ್ಷಗಳ ಹಿಂದೆ ಈ ಪ್ರದೇಶಕ್ಕೆ ಚಿತ್ತರಗಿ ವಿಜಯ ಮಹಾಂತಪ್ಪರು ಆಕಸ್ಮಿಕವಾಗಿ ಭೇಟಿ ನೀಡ್ತಾರೆ. ಆ ಸಂದರ್ಭದಲ್ಲಿ ಇಲ್ಲಿನ ಪ್ರದೇಶ ಹಸಿರಿಲ್ಲದೆ ಬರಡಾಗಿ ಕಾಣುತ್ತಿತ್ತು.




    ಶ್ರೀಗಳು ಹೇಳಿದ ಸಲಹೆ
    ಆ ಸಂದರ್ಭದಲ್ಲಿ ಮಹಾಂತಪ್ಪರು ಈ ಪ್ರದೇಶದಲ್ಲಿ ಸಾಕಷ್ಟು ನೀರಿನ ಸೆಲೆ ಇದೆ ಎಂದು ನುಡಿದಿದ್ದರು. ಶ್ರೀಗಳ ಮಾತಿನಂತೆ ರೈತರು ತಮ್ಮ ತಮ್ಮ ಜಮೀನುಗಳಲ್ಲಿ ಕೊಳವೆ ಬಾವಿಯನ್ನ ಕೊರೆಸಿದರು. ಅದರ ಫಲವಾಗಿ ಇಂದು ರೈತರು ಉತ್ತಮ ಬೆಳೆಯನ್ನ ಪಡೆಯುತ್ತಿದ್ದಾರೆ. ಹೀಗೆ ಸ್ವಾಮೀಜಿಗಳ ಮಾತಿನಂತೆ ರೈತರಲ್ಲಿ ಹಸಿರೀಕರಣಕ್ಕೆ ಮುಂದಾದರು.


    ಬದಲಾದ ಬರಡು ಭೂಮಿ
    ಬೇವು, ಹುಣಸೆ, ಪೇರು, ಮಾವು, ಶ್ರೀಗಂಧ, ರಾಮಫಲ, ಸಾಗುವಾನಿ, ತೆಂಗು, ಹಲಸು ಸೇರಿದಂತೆ ನೂರಕ್ಕೂ ಹೆಚ್ಚು ಜಾತಿಯ ಮರಗಳನ್ನ ಬೆಳೆದು ನೋಡಿದರು. ಮುಂದೆ ವರ್ಷಗಳು ಉರುಳುತ್ತಲೇ ಕಾಡಿನ ವಾತಾವರಣ ತಲೆ ಎತ್ತಿತು. ಯಾವೊಂದು ಗಿಡವೂ ಬೆಳೆಯಲಾಗದೇ ಹೋಗಿದ್ದ ಬರಡು ಭೂಮಿಯಲ್ಲಿ ಹಚ್ಚ ಹಸಿರು ಇದೀಗ ನಳನಳಿಸುತ್ತಿದೆ.


    ಇದನ್ನೂ ಓದಿ: Vijayapura: ಬೆಟ್ಟದ ಮೇಲಿನ ಗುಹೆಯಲ್ಲಿ ಸಿದ್ದರಾಮೇಶ್ವರನ ನೆಲೆ, ದರ್ಶನ ಪಡೆಯೋದೇ ಸೌಭಾಗ್ಯ!


    ಪ್ರಕೃತಿ ಚಿಕಿತ್ಸಾ ಕೇಂದ್ರ
    ವಿಶೇಷವೆಂದರೆ ಈ ಸ್ಥಳದಲ್ಲಿ ಡಾ.ಬಸವಲಿಂಗ ಸ್ವಾಮೀಜಿಯವರು ಪ್ರಕೃತಿ ಚಿಕಿತ್ಸಾ ಕೇಂದ್ರವನ್ನ ಆರಂಭಿಸಿ ನೂರಾರು ಬಗೆಯ ಸಸಿಗಳನ್ನ ತಂದು ನಾಟಿ ಮಾಡಿ ಬೆಳೆಸಿದರು. ಇಂದು ಮರವಾಗಿ ಬೆಳೆದಿದ್ದು ಹೂವು, ಹಣ್ಣು, ಕಾಯಿ ಬಿಟ್ಟು ಆಕರ್ಷಿಸುತ್ತಿವೆ.




    ಇದನ್ನೂ ಓದಿ: Vijayapura: ಇಡೀ ಊರಿಗೇ ಭರ್ಜರಿ ಔತಣಕೂಟ, ಇದು ಚುನಾವಣಾ ಪ್ರಚಾರ ಅಲ್ಲ ಕಣ್ರೀ!


    ಸದ್ಯ ಇಲ್ಲಿ ಡಾ.ಬಸವಲಿಂಗ ಸ್ವಾಮೀಜಿಯವರು ನೆಲೆಸಿ ಸಾವಿರಾರು ರೋಗಿಗಳಿಗೆ ಪ್ರಕೃತಿ ಚಿಕಿತ್ಸೆಯನ್ನ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಅಂದಿನ ಬರಡು ಭೂಮಿ ಇಂದು ಹಚ್ಚ ಹಸಿರಿನಿಂದ ಕೂಡಿದ್ದು ಬಿರು ಬೇಸಿಗೆಯಲ್ಲೂ ಬಂದವರಿಗೆ ತಂಪನೆಯ ನೆರಳು ನೀಡುತ್ತಿದೆ.


    ವರದಿ: ಪ್ರಶಾಂತ ಹೂಗಾರ, ನ್ಯೂಸ್18 ಕನ್ನಡ ಡಿಜಿಟಲ್, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: