Vijayapura: ಹೆಣ್ಮಕ್ಳೇ ಸ್ಟ್ರಾಂಗು ಗುರು! ಈ ವಿದ್ಯಾರ್ಥಿನಿಯರು ಡ್ರೋನ್​ನ್ನೂ ಹಾರಿಸ್ತಾರೆ!

Akkamahadevi Women's University Vijayapura: ಅಕ್ಕಮಹಾದೇವಿ ಮಹಿಳಾ ವಿವಿ ತಮ್ಮ ವಿದ್ಯಾರ್ಥಿನಿಯರಿಗೂ ಡ್ರೋನ್ ಕ್ಯಾಮೆರಾ ತರಬೇತಿ ನೀಡುವ ಮೂಲಕ ಹೆಣ್ಣು ಮಕ್ಕಳನ್ನು ಸ್ವಾವಲಂಬಿಯನ್ನಾಗಿಸುತ್ತಿದೆ. ನೀವೇ ನೋಡಿ ವಿಡಿಯೋ

ಡ್ರೋನ್ ತರಬೇತಿ

"ಡ್ರೋನ್ ತರಬೇತಿ"

  • Share this:
    ವಿಜಯಪುರ: ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ (Karnataka State Akkamahadevi Women's University)  ಹೊಸ ಪ್ರಯೋಗವೊಂದು ನಡೆಯುತ್ತಿದೆ. ವಿದ್ಯಾರ್ಥಿನಿಯರಿಗೆ ಡ್ರೋನ್‌ ಟ್ರೈನಿಂಗ್‌ ನೀಡುವ ಮೂಲಕ ವಿಭಿನ್ನ ಪ್ರಯತ್ನಕ್ಕೆ ವಿವಿ ಕೈಹಾಕಿದೆ. ವಿವಿಯ ಪತ್ರಿಕೋದ್ಯಮ ವಿಭಾಗದ (Journalism Department) ವಿದ್ಯಾರ್ಥಿನಿಯರಿಗೆ ಡ್ರೋನ್‌ ಆಪರೇಟಿಂಗ್‌ ತರಬೇತಿ ಪ್ರಾರಂಭವಾಗಿದೆ. ಮಹಿಳೆಯರನ್ನ ಸ್ವಾವಲಂಬಿಯಾಗಿಸುವ ನಿಟ್ಟಿನಲ್ಲಿ ಇಲ್ಲಿನ ಅಕ್ಕಮಹಾದೇವಿ ಮಹಿಳಾ ವಿ.ವಿ ಸ್ಥಾಪನೆಯಾಗಿದೆ. ಇಲ್ಲಿ ವಿದ್ಯಾಭ್ಯಾಸ ಪಡೆದ ವಿದ್ಯಾರ್ಥಿಗಳು ದೇಶ ಸೇರಿದಂತೆ ಹೊರದೇಶಗಳಲ್ಲಿಯೂ ಸ್ವಾವಲಂಭಿಯಾಗಿ ಕಷ್ಟಪಟ್ಟು ದುಡಿಯುತ್ತಿದ್ದಾರೆ. ಸದ್ಯ ವಿಜಯಪುರದ (Vijayapura) ಮಹಿಳಾ ವಿವಿಯಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ.

    ಡ್ರೋನ್‌ ಮೂಲಕ ದೃಶ್ಯಗಳನ್ನು ಸೆರೆಹಿಡಿಯೋದು ಹೇಗೆ? ಆಪರೇಟಿಂಗ್‌ ಹೇಗೆ ಮಾಡಬೇಕು? ಅನ್ನೋದರ ಬಗ್ಗೆ ವಿಶೇಷ ತರಬೇತಿಯನ್ನ ವಿದ್ಯಾರ್ಥಿನಿಯರಿಗೆ ನೀಡಲಾಗುತ್ತಿದೆ. ಮಹಿಳಾ ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಓಂಕಾರ್‌ ಕಾಕಡೆ ಮುಂದೆ ನಿಂತು ತಮ್ಮ ವಿದ್ಯಾರ್ಥಿನಿಯರಿಗೆ ತರಬೇತಿ ಕೊಡಿಸುತ್ತಿದ್ದಾರೆ.

    21 ವಿದ್ಯಾರ್ಥಿನಿಯರಿಗೆ ಟ್ರೇನಿಂಗ್
    ವಿವಿಯಲ್ಲಿ ಪತ್ರಿಕೋದ್ಯಮ ವಿಭಾಗದ 21ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗಾಗಿ ಡ್ರೋನ್‌ ಟ್ರೈನಿಂಗ್‌ ನಡೆಯುತ್ತಿದೆ. ಮಹಿಳಾ ವಿವಿಯಲ್ಲಿ ವಿದ್ಯಾರ್ಥಿಗಳಿಗೆ ಡ್ರೋನ್​ ಕ್ಯಾಮರಾ ತರಬೇತಿ ಒಂದು ವಾರ ಕಾಲ ಈ ತರಬೇತಿ ನಡೆದಿದ್ದು, 3 ರಿಂದ 4 ವಿದ್ಯಾರ್ಥಿನಿಯರ ಬ್ಯಾಚ್‌ ಮಾಡಿ ಡ್ರೋನ್‌ ತರಬೇತಿ ನೀಡಲಾಗುತ್ತಿದೆ.

    ವಿದ್ಯಾರ್ಥಿನಿಯರೂ ತಿಳಿದಿದ್ದರೆ ಚೆನ್ನ
    ಇತ್ತೀಚೆಗೆ ಡ್ರೋನ್‌ ಬಳಸಿ ವಿಶೇಷ ದೃಶ್ಯಾವಳಿಗಳನ್ನು ಹೆಚ್ಚಿನವರು ಸೆರೆ ಹಿಡಿಯುತ್ತಾರೆ. ಆದರೆ ಡ್ರೋನ್‌ ಮೂಲಕ ಉತ್ತಮ ದೃಶ್ಯಗಳನ್ನು ಸೆರೆ ಹಿಡಿಯುವುದು ಎಂದರೆ ಸುಲಭದ ಮಾತಲ್ಲ. ಅದಕ್ಕಾಗಿಯೇ ಪ್ರಾಪರ್‌ ಟ್ರೈನಿಂಗ್​ನ ಅವಶ್ಯಕತೆ ಇರುತ್ತೆ. ತರಬೇತಿ ಪಡೆದವರು, ಎಕ್ಸಪರ್ಟ್​ಗಳು ಮಾತ್ರ ಡ್ರೋನ್‌ ಆಪರೇಟ್‌ ಮಾಡೋದಿಲ್ಲ. ಹೀಗಾಗಿ ಡ್ರೋನ್​ ಆಪರೇಟಿಂಗ್​ ವಿದ್ಯಾರ್ಥಿನಿಯರಿಗೆ ಗೊತ್ತಿರಬೇಕು ಅನ್ನುವ ಕಾರಣಕ್ಕೆ ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಓಂಕಾರ್‌ ಕಾಕಡೆ ಈ ಕಾರ್ಯದಲ್ಲಿ ತೊಡಗಿದ್ದಾರೆ.

    ಇದನ್ನೂ ಓದಿ: Fishery In Vijayapura: ವಿಜಯಪುರದಲ್ಲಿ ಮೀನುಗಾರಿಕೆ! ಯುವಕನಿಂದ ಲಕ್ಷ ಲಕ್ಷ ಸಂಪಾದನೆ!

    ಡ್ರೋನ್‌ ಮೂಲಕ ದೃಶ್ಯಗಳನ್ನು ಸೆರೆಹಿಡಿಯೋದು ಹೇಗೆ? ಆಪರೇಟಿಂಗ್‌ ಹೇಗೆ ಮಾಡಬೇಕು ಅನ್ನೋದರ ಕುರಿತು ಸಮಗ್ರ ಅಧ್ಯಯನ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವುದು ವಿದ್ಯಾರ್ಥಿಗಳಲ್ಲಿ ಸಂತಸ ತಂದಿದೆ.

    Akkamahadevi Womens University students Vijayapura
    ಅಕ್ಕಮಹಾದೇವಿ ವಿಶ್ವವಿದ್ಯಾಲಯಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)

    ಇದನ್ನೂ ಓದಿ: Sri Ramalingeshwara Temple: ಶಿವನ ಎದುರೇ ಶ್ರೀಮನ್ನಾರಾಯಣ! ನೀವೂ ದರ್ಶನ ಪಡೆಯಿರಿ

    ಪತ್ರಿಕೋದ್ಯಮ ವಿದ್ಯಾರ್ಥಿನಿಯರಿಗೆ ಮಾಧ್ಯಮ ಕ್ಷೇತ್ರದಲ್ಲೇ ಕೆಲಸ ಮಾಡುತ್ತಿರುವ ಅನುಭವ ಸಿಗಲಿ ಎನ್ನುವ ಕಾರಣಕ್ಕೆ ಕ್ಲಾಸ್‌ ರೂಂನ್ನೇ ಮಿಡಿಯಾ ಹೌಸ್‌ ಆಗಿ ನಿರ್ಮಾಣ ಮಾಡಿದ್ದಾರೆ. ಕ್ಲಾಸ್​ನಲ್ಲಿ ಕಲಿಯುತ್ತಿದ್ದೇವೆ ಎನ್ನುವುದಕ್ಕಿಂತ ಹೆಚ್ಚಾಗಿ ಒಂದು ಮಿಡಿಯಾದಲ್ಲಿ ಕೆಲಸ ಮಾಡುತ್ತಿದ್ದೇವೆ ಎನ್ನುವ ಅನುಭವ ತಮ್ಮ ವಿದ್ಯಾರ್ಥಿನಿಯರಿಗೆ ಸಿಗಲಿ ಎನ್ನುವ ಕಾನ್ಸೆಪ್ಟ್‌ ಅವರದ್ದಾಗಿದೆ.

    ವರದಿ: ಪ್ರಶಾಂತ ಹೂಗಾರ ನ್ಯೂಸ್ 18 ಕನ್ನಡ
    Published by:guruganesh bhat
    First published: