• Home
  • »
  • News
  • »
  • vijayapura
  • »
  • Job Alert: ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿದೆ ಕೆಲಸ; ಇಲ್ಲಿದೆ ಸಂಪೂರ್ಣ ಮಾಹಿತಿ

Job Alert: ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿದೆ ಕೆಲಸ; ಇಲ್ಲಿದೆ ಸಂಪೂರ್ಣ ಮಾಹಿತಿ

ಕೃಷಿ ವಿಶ್ವವಿದ್ಯಾಲಯ

ಕೃಷಿ ವಿಶ್ವವಿದ್ಯಾಲಯ

ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದ ಹಾಗೂ ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ವಿಭಾಗದ ಹುದ್ದೆಗಳ ಅನುಭವ ಹೊಂದಿದವರಿಗೆ ಮೊದಲ ಆದ್ಯತೆ ನೀಡಲಾಗಿದೆ.

  • News18 Kannada
  • Last Updated :
  • Bijapur, India
  • Share this:

    ವಿಜಯಪುರ: ವಿಜಯಪುರ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿಯೊಂದು ಇಲ್ಲಿದೆ.  ಶಿಕ್ಷಣ ಕಾಶಿಯಂದೇ ಹೆಸರಾದ ಧಾರವಾಡದ ಕೃಷಿ ವಿಶ್ವವಿದ್ಯಾಲಯದ (Agriculture University Dharwad) ದೇಶಿ ಯೋಜನೆಯಡಿಯಲ್ಲಿ ಖಾಲಿ ಇರುವ ಕೆಲವು ಫೆಸಿಲಿಟೇಟರ್ ಹುದ್ದೆಗಳಿಗೆ ತಾತ್ಕಾಲಿಕ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹರು ಈ ಪ್ರಯೋಜನೆಯನ್ನ ಪಡೆದುಕೊಳ್ಳಬಹುದಾಗಿದೆ. ಹುದ್ದೆಗಳ ಭರ್ತಿಗೆ (Jobs In Dharwad) ಅರ್ಜಿ ಆಹ್ವಾನಿಸಲಾಗಿದ್ದು, ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದ ಹಾಗೂ ಕೃಷಿ ಮತ್ತು ಕೃಷಿಗೆ (Agriculture Information) ಸಂಬಂಧಿಸಿದ ವಿಭಾಗದ ಹುದ್ದೆಗಳ ಅನುಭವ ಹೊಂದಿದವರಿಗೆ ಮೊದಲ ಆದ್ಯತೆ ನೀಡಲಾಗಿದೆ.

    ಹುದ್ದೆಯ ಹೆಸರುಫೆಸಿಲಿಟೇಟರ್ ಹುದ್ದೆ
    ಸಂಸ್ಥೆಯ ಹೆಸರುಧಾರವಾಡದ ಕೃಷಿ ವಿಶ್ವವಿದ್ಯಾಲಯ
    ಸಂದರ್ಶನದ ಸ್ಥಳನವೆಂಬರ್ 30 ರಂದು ಬೆಳಗ್ಗೆ 11 ಗಂಟೆಗೆ
    ಹೆಚ್ಚಿನ ಮಾಹಿತಿಗಾಗಿಧಾರವಾಡ ಕೃಷಿ ವಿಶ್ವವಿದ್ಯಾಲಯ ವಿಸ್ತರಣಾಧಿಕಾರಿಗಳ ಕಚೇರಿ

    ನೇಮಕಾತಿ ಪಡೆಯಲು ಬಯಸುವ ಅಭ್ಯರ್ಥಿಗಳು ಅರ್ಜಿ ನಮೂನೆ ಎರಡು ಪ್ರತಿಗಳೊಂದಿಗೆ ಇದೇ ನವೆಂಬರ್ 30 ರಂದು ಬೆಳಗ್ಗೆ 11 ಗಂಟೆಗೆ ಧಾರವಾಡದ ಕೃಷಿ ವಿಶ್ವವಿದ್ಯಾಲಯ ವಿಸ್ತರಣಾ ನಿರ್ದೇಶನಾಲಯದಲ್ಲಿ ನಡೆಯುವ ನೇರ ಸಂದರ್ಶನಕ್ಕೆ ಹಾಜರು ಆಗಬೇಕಿದೆ.


    ಬೇರೆ ಜಿಲ್ಲೆಗಳಿಂದಲೂ ಅರ್ಜಿ ಸಲ್ಲಿಸಬಹುದು
    ಅಲ್ಲದೇ, ಎಲ್ಲ ಮೂಲ ದಾಖಲೆಗಳನ್ನು ಹಾಗೂ ದೃಢೀಕೃತ ಎರಡು ಪ್ರತಿಗಳೊಂದಿಗೆ ಹಾಜರಾಗಬೇಕು. ಈ ನೇಮಕಾತಿ ತಾತ್ಕಾಲಿಕವಾಗಿರುತ್ತದೆ. ಬಾಗಲಕೋಟೆ, ವಿಜಯಪುರ ಜಿಲ್ಲೆ ಸೇರಿದಂತೆ ರಾಜ್ಯದ ಬೇರೆ ಜಿಲ್ಲೆಗಳಿಂದಲೂ ಅಭ್ಯರ್ಥಿಗಳು ಈ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.


    ಇದನ್ನೂ ಓದಿ: Travel Plan: ರಾಮಾಯಣದ ಸೀತೆ, ಶ್ರೀರಾಮ, ಲಕ್ಷ್ಮಣ, ಹನುಮರನ್ನು ಮೀಟ್ ಮಾಡಿ!


    ನವೆಂಬರ್ 30ರ ಬೆಳಗ್ಗೆ 11 ಗಂಟೆಗೆ ಸಂದರ್ಶನ
    ಅಭ್ಯರ್ಥಿಗಳು ನಕಲು ದಾಖಲೆಗಳ ಪ್ರತಿ ಕಡ್ಡಾಯವಾಗಿ ತರಬೇಕಿದೆ.  ಹೌದು, ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ನವೆಂಬರ್ 30ರ ಬೆಳಗ್ಗೆ 11 ಗಂಟೆಗೆ ಸಂದರ್ಶನ ನಡೆಯಲಿದೆ. ನಿಗದಿಯಾದ ಸಮಯದ ಒಂದು ಗಂಟೆ ಮುಂಚಿತವಾಗಿ ಸಂದರ್ಶನ ನಡೆಯುವ ಸ್ಥಳದಲ್ಲಿ ಅರ್ಹ ಅಭ್ಯರ್ಥಿಗಳು ತಮ್ಮ ತಮ್ಮ ಹೆಸರನ್ನ ನೋಂದಾಯಿಸಿ ಹಾಜರಿರುವಂತೆ ಸೂಚನೆ ನೀಡಲಾಗಿದೆ.


    ಇದನ್ನೂ ಓದಿ: Bagalakote: ಧಾರ್ಮಿಕ ಸಂಪ್ರದಾಯಗಳಿಗೆ ಈ ಕೊಳದ ನೀರೇ ಬೇಕಂತೆ! ವಿಜಯ ಮಹಾಂತ ತೀರ್ಥದ ವಿಶೇಷವಿದು


    ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಧಾರವಾಡ ಕೃಷಿ ವಿಶ್ವವಿದ್ಯಾಲಯ ವಿಸ್ತರಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.

    Published by:ಗುರುಗಣೇಶ ಡಬ್ಗುಳಿ
    First published: