Vijayapura: ಶ್ರೀಶೈಲ ಭಕ್ತರ ಸೇವೆಯಲ್ಲೇ ಇವರಿಗೆ ಸಿಗುತ್ತೆ ಮಲ್ಲಿಕಾರ್ಜುನನ ಕೃಪೆ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಕಳೆದ 19 ವರ್ಷಗಳಿಂದ ಶಿರೂರ ಪಟ್ಟಣದಲ್ಲಿ ಪಾದಯಾತ್ರಿಗಳಿಗೆ ಈ ರೀತಿಯ ಸೇವೆ ಮಾಡಲಾಗುತ್ತಿದೆ. ಸ್ವಚ್ಛತೆಯಿಂದ ಹಿಡಿದು ಆರೋಗ್ಯ, ಅನ್ನಾಹಾರ, ಪಾನೀಯ ಹೀಗೆ ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡಲಾಗುತ್ತಿದೆ.

  • News18 Kannada
  • 4-MIN READ
  • Last Updated :
  • Bijapur, India
  • Share this:

    ಬಾಗಲಕೋಟೆ: ರಸ್ತೆಯಲ್ಲಿ ಸಾಲು ಸಾಲಾಗಿ ಸಾಗುತ್ತಿರೋ ಯಾತ್ರಾರ್ಥಿಗಳು, ಹೆದ್ದಾರಿ ಪಕ್ಕ ತಂಪು ಪಾನೀಯ, ಉಚಿತ ವೈದ್ಯಕೀಯ ತಪಾಸಣೆ. ಊಟೋಪಚಾರದ ಜೊತೆಗೆ ಅಲ್ಲಲ್ಲಿ ತಂಗಲು ಬೇಕಾದ ವ್ಯವಸ್ಥೆ. ಇಷ್ಟೆಲ್ಲ ಸೌಕರ್ಯ ಯಾರಿಗಾಗಿ? ಈ ಪಾದಯಾತ್ರಿಗಳು (Srisaila Padayatris) ಯಾರು ಅನ್ನೋದನ್ನೆಲ್ಲ ಹೇಳ್ತೀವಿ ನೋಡಿ.




    ಯೆಸ್, ಇವರೆಲ್ಲರೂ ಹೊರಟಿರುವುದು ಆಂಧ್ರ ಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ಸನ್ನಿಧಾನಕ್ಕೆ. ಹೀಗೆ ವಿಜಯಪುರ, ಬಾಗಲಕೋಟೆ ಮುಂತಾದೆಡೆಯ ಭಕ್ತರು ಪಾದಯಾತ್ರೆ ಮೂಲಕ ದೇವರ ದರ್ಶನಕ್ಕಾಗಿ ಹೊರಟಿದ್ದಾರೆ.




    ಪಾದಯಾತ್ರಿಗಳಿಗೆ ನಾನಾ ಸೌಕರ್ಯ
    ಬಾಗಲಕೋಟೆ ಜಿಲ್ಲೆಯ ಶಿರೂರ ಪಟ್ಟಣದಲ್ಲಿ ಹೀಗೆ ಪಾದಯಾತ್ರೆ ಮೂಲಕ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ಹೊರಟವರನ್ನು ಶ್ರೀ ಶ್ರೀಶೈಲ ಮಲ್ಲಿಕಾರ್ಜುನ ಸೇವಾ ಸಮಿತಿಯು ನಾನಾ ಸೌಲಭ್ಯಗಳನ್ನು ಒದಗಿಸಿ ಪಾದಯಾತ್ರಿಗಳ ಹಸಿವು, ದಾಹವನ್ನ ತಣಿಸಿತು.




    ಹತ್ತು ಸಾವಿರಕ್ಕೂ ಹೆಚ್ಚು ಭಕ್ತರ ಪಾದಯಾತ್ರೆ
    ಜಮಖಂಡಿ, ಬೆಳಗಾವಿ, ಚಿಕ್ಕೋಡಿ, ರಾಯಭಾಗ, ಅಥಣಿ, ಮುಧೋಳ, ತೆರದಾಳ, ಮಹಾಲಿಂಗಪೂರ, ಬಾಗಲಕೋಟದ ಸುಮಾರು 10 ಸಾವಿರಕ್ಕೂ ಹೆಚ್ಚು ಪಾದಯಾತ್ರಿಗಳು ಸಾಗುತ್ತಿದ್ದಾರೆ. ಅವರೆಲ್ಲರಿಗೂ ಶಿರೂರ ಪಟ್ಟಣದಲ್ಲಿ ಕಳೆದ ಮೂರು ದಿನಗಳಿಂದ ಊಟಕ್ಕೆ ಸಿಹಿಯಾದ ಹುಳ್ಳಿ ಸಂಗಟಿಯ ಜೊತೆಗೆ ಕಡಕರೊಟ್ಟಿ, ಹಾಲುಗ್ಗಿ, ಮತ್ತು ಬದನೆಕಾಯಿ ಪಲ್ಯ ಹಾಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.




    15 ಸಾವಿರ ರೊಟ್ಟಿ
    ಗ್ರಾಮಗಳ ಮಹಿಳೆಯರು ತಮ್ಮ ತಮ್ಮ ಮನೆಯಲ್ಲಿ ಸುಮಾರು 15000ಕ್ಕೂ ಹೆಚ್ಚು ಬಿಳಿ ಜೋಳದ ಖಡಕ್‌ ರೊಟ್ಟಿ ಮಾಡಿಕೊಟ್ಟು ಭಕ್ತಿಗೆ ಪಾತ್ರರಾದರು. ಪುರುಷರು ಕಬ್ಬಿನ ಜ್ಯೂಸ್ ರೆಡಿ ಮಾಡಿಕೊಟ್ಟು ಬಿಸಿಲ ಬೇಗೆಯಲ್ಲಿ ಬಳಲಿ ಬಂದವರ ದಾಹ ತಣಿಸಿದರು. ಅನ್ನ ಸಂತರ್ಪಣೆಗೆ ಸ್ಥಳಿಯ ಪಟ್ಟಣದ ಸಾರ್ವಜನಿಕರು ಆಹಾರ ಧಾನ್ಯ, ಕಾಯಿಪಲ್ಲೆ ಮತ್ತಿತ್ತರ ವಸ್ತು ನೀಡಿದರೆ, ದಕ್ಷಿಣ ಆಫ್ರಿಕಾದಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಶಿರೂರಿನ ಪ್ರವೀಣ್ ಮಲ್ಲಪ್ಪ ಶಿರೂರ ಕಳೆದ ಐದು ವರ್ಷಗಳಿಂದ ಈ ಪಾದಯಾತ್ರೆಯ ಅನ್ನ ಸಂತರ್ಪಣೆಗೆ ಹಣವನ್ನ ದೇಣಿಗೆ ನೀಡಿ ಭಕ್ತರ ಸಂತೃಪ್ತಿಗೆ ಕಾರಣರಾದರು.


    ಇದನ್ನೂ ಓದಿ: Sainik School: ಸೈನಿಕ ಶಾಲೆಗೆ ಪ್ರವೇಶ ಪಡೆದ 25 ಹೆಣ್ಮಕ್ಕಳು, ಕಡು ಕಷ್ಟದ ತರಬೇತಿ ಇವರಿಗೆ ನೀರು ಕುಡಿದಷ್ಟೇ ಸಲೀಸು!


    ಉಚಿತ ಆರೋಗ್ಯ ತಪಾಸಣೆ
    ಇನ್ನು ನೂರಾರು ಕಿಲೋ ಮೀಟರ್ ದೂರದಿಂದ ಬರುವ ಯಾತ್ರಿಕರಿಗಾಗಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಬಾಗಲಕೋಟೆಯ ಗುಳೇದ ಆಸ್ಪತ್ರೆಯ ಡಾ. ಉದಯಕುಮಾರ ಹಾಗೂ ಅವರ ಸಿಬ್ಬಂದಿಗಳು ಉಚಿತವಾಗಿ ಚಿಕಿತ್ಸೆ ನೀಡಿದರು. ಯುವಕರು ಸ್ವ ಮನಸ್ಸಿನಿಂದ ಯಾತ್ರಿಕರಿಗೆ ಮಸಾಜ್ ಮಾಡಿ ಸೇವೆ ಸಲ್ಲಿಸಿದರು.


    ಇದನ್ನೂ ಓದಿ: Vijayapura: ಚಂದ್ರಮ್ಮ ದೇವಿ ಭಕ್ತರಿಗೆ ಜೋಳದ ಅಂಬಲಿಯೇ ಮಹಾ ಪ್ರಸಾದ!


    ಅಚ್ಚುಕಟ್ಟಾದ ವ್ಯವಸ್ಥೆ
    ಕಳೆದ 19 ವರ್ಷಗಳಿಂದ ಶಿರೂರ ಪಟ್ಟಣದಲ್ಲಿ ಪಾದಯಾತ್ರಿಗಳಿಗೆ ಈ ರೀತಿಯ ಸೇವೆ ಮಾಡಲಾಗುತ್ತಿದೆ. ಸ್ವಚ್ಛತೆಯಿಂದ ಹಿಡಿದು ಆರೋಗ್ಯ, ಅನ್ನಾಹಾರ, ಪಾನೀಯ ಹೀಗೆ ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡಲಾಗುತ್ತಿದೆ. ಶಿರೂರ ಪಟ್ಟಣದ ಮಂದಿಯೂ ಶ್ರೀಶೈಲ ಪಾದಯಾತ್ರಿಗಳ ಸೇವೆ ಮೂಲಕ ಮಲ್ಲಿಕಾರ್ಜುನನ ಭಕ್ತಿಗೆ ಪಾತ್ರರಾಗುತ್ತಿದ್ದಾರೆ.


    ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: