ವಿಜಯಪುರ: ಝುಳುಝುಳುನೆ ಹರಿಯುತ್ತಿರೋ ನದಿ. ಪವಿತ್ರ ಕೃಷ್ಣಾ ನದಿಯಲ್ಲಿ (Krishna River) ಸ್ನಾನ ಮಾಡ್ತಿರೋ ಭಕ್ತಾದಿಗಳು. ರಾಜ್ಯದ ಹಲವೆಡೆಯಿಂದ (Vijayapura News) ವಿಜಯಪುರ ಜಿಲ್ಲೆಯ ಆಲಮಟ್ಟಿಗೆ (Almatti) ಆಗಮಿಸಿ ಪವಿತ್ರ ಕೃಷ್ಣಾ ನದಿಯಲ್ಲಿ ಜನರು ಮಿಂದೆದ್ದು, ಪರಸ್ಪರ ಎಳ್ಳು ಬೆಲ್ಲ ಹಂಚಿ ಸಂಕ್ರಾಂತಿಯನ್ನು ವಿಶಿಷ್ಟವಾಗಿ ಆಚರಿಸಿಲಾಯ್ತು. ಜೊತೆಗೆ ನದಿ ಪೂಜೆ ಮಾಡಿ. ಕುಟುಂಬ ಸಮೇತ ಹಬ್ಬದ ಊಟವನ್ನ ಸವಿದು ಸಂಭ್ರಮಿಸಿದರು.
ಇಲ್ಲಿನ ಭಾರತ ನಕಾಶೆಯೂ ವಿಶೇಷ
ಆಲಮಟ್ಟಿಯ ಉದ್ಯಾನವನದಲ್ಲಿ ವಿವಿಧ ಬಗೆಯ ಪ್ರಾಣಿ, ಪಕ್ಷಿ, ಹಳ್ಳಿಜಾತ್ರೆ, ನೋಡಿ ಹಲವರು ಖುಷಿಪಟ್ಟರು. ಅಲ್ಲದೇ ಇಲ್ಲಿನ ಅತಿ ಎತ್ತರ ಭಾರತ ನಕಾಶೆಯನ್ನ ನೋಡಿ ಸೆಲ್ಪಿ ಕ್ಲಿಕ್ಕಿಸಿಕೊಂಡು ಸಂಭ್ರಮಪಟ್ಟರು.
ಇದನ್ನೂ ಓದಿ: Vijayapura: ಮಣ್ಣು ಉಳಿಸೋಕೆ ಕಾಶ್ಮೀರದಿಂದ ಕನ್ಯಾಕುಮಾರಿಗೆ ಕಾಲ್ನಡಿಗೆ ಹೊರಟ ಯುವಕ!
ಬಡವರ ಊಟಿಯಲ್ಲಿ ಸಂಭ್ರಮ
ಲವಕುಶ ಉದ್ಯಾನವನ ವೈಭವ ರಮ್ಯ ಮನೋಹರ, ಕರ್ನಾಟಕದ ಬಡವರ ಊಟಿ ಎಂದೇ ಹೆಸರಾದ ಈ ಉದ್ಯಾನವನ ಎಲ್ಲರನ್ನ ಸೆಳೆಯುತ್ತೆ. ಹೀಗಾಗಿಯೇ ಹಲವರು ಇಲ್ಲಿಗೆ ಆಗಮಿಸಿ ಸಂಕ್ರಾಂತಿ ಆಚರಿಸಿದರು.
ಇದನ್ನೂ ಓದಿ: Bagalkot: ತೆರಬಂಡಿ ಸ್ಪರ್ಧೆಯಲ್ಲಿ ಗೆದ್ದರೆ ಕಾರ್, ಬೈಕ್ ಬಹುಮಾನ!
ಇನ್ನೊಂದೆಡೆ ಸಾವಿರಾರು ಭಕ್ತರು ಕೃಷ್ಣಾ ನದಿಯಲ್ಲಿ ಸ್ನಾನ ಮಾಡಿದ ಭಕ್ತರು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಎಳ್ಳು ಬೆಲ್ಲ ವಿತರಣೆಯೊಂದಿಗೆ ಸ್ನೇಹ ಬಾಂಧವ್ಯ ಬೆಸೆಯುವ ಈ ಹಬ್ಬಕ್ಕೆ ಸಾವಿರಾರು ಜನರು ಸಾಕ್ಷಿಯಾದರು.
ವರದಿ: ಪ್ರಶಾಂತ ಹೂಗಾರ, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ