ವಿಜಯಪುರ: ಹೊರಗಿನಿಂದ ಕಣ್ಸೆಳೆಯೋ ಗುಂಬಜ್. ಒಳಗಡೆ ಹೋಗ್ತಿದ್ದಂತೆ ಅಧ್ಯಾತ್ಮದ ಸೆಳೆತ. ಪುಷ್ಪಾಲಂಕಾರದಿಂದ ಅಲಂಕೃತಗೊಂಡ ಪುಣ್ಯ ಪುರುಷರ ಸಮಾಧಿ. ಅದರ ಸುತ್ತಲೂ ಲಾಕ್ ಮಾಡಲಾದ ಬೀಗಗಳು. ಗುಮ್ಮಟ ನಗರಿಯ ಈ ದರ್ಗಾ ಭಾವೈಕ್ಯತೆಯ ತಾಣವೂ ಹೌದು. ಹಾಗಿದ್ರೆ ಈ ಸ್ಥಳದ ವಿಶೇಷ ಏನು ಅಂತೀರಾ? ಹೇಳ್ತೀವಿ ನೋಡಿ. ವಿಜಯಪುರ ನಗರದಲ್ಲಿರುವ (Vijayapura) ಈ ಗುಮ್ಮಟವನ್ನ ಜೋಡು ಗುಮ್ಮಟ (Jod Gummata) ಅಂತಲೇ ಕರೆಯಲಾಗುತ್ತೆ. ಇದರ ಕೆಳಭಾಗದಲ್ಲಿ ಹಝ್ರತ್ ಸಯ್ಯದ್ ಶಾ ಅಲ್ ರಜಾಕ್ ದರ್ಗಾವಿದೆ.
ಇಲ್ಲಿ ದಿನವೊಂದಕ್ಕೆ ನೂರಾರು ಭಕ್ತರು ಆಗಮಿಸಿ ಇಷ್ಟಾರ್ಥಗಳ ಈಡೇರಿಕೆಗಾಗಿ ಪ್ರಾರ್ಥಿಸ್ತಾರೆ. ಅವರ ಸಮಾಧಿಗೆ ಬೀಗವೊಂದನ್ನು ಲಾಕ್ ಮಾಡಿ ಕೀ ಹಿಡಿದು ತೆರಳುತ್ತಾರೆ. ಮುಂದೆ ಇಷ್ಟಾರ್ಥಗಳು ಈಡೇರಿದಾಗ ಆ ಬೀಗವನ್ನು ಅನ್ ಲಾಕ್ ಮಾಡ್ತಾರೆ. ಹೀಗಾಗಿ ವಾರದ ಎಲ್ಲ ದಿನವೂ ಇಲ್ಲಿ ಭಕ್ತರ ದಂಡು ನೆರೆದಿರುತ್ತೆ. ಹಿಂದೂಗಳೇ ಹೆಚ್ಚಿನ ಸಂಖ್ಯೆಯಲ್ಲಿ ಈ ದರ್ಗಾಕ್ಕೆ ಆಗಮಿಸ್ತಾರೆ ಅನ್ನೋದು ವಿಶೇಷ!
ಇದನ್ನೂ ಓದಿ: Bagalakote: ಕಾಯಿನ್ ಬಾಕ್ಸ್ ಆದ ಹೊಟ್ಟೆ! ವೈದ್ಯರಿಂದ 187 ನಾಣ್ಯಗಳು ಹೊರಕ್ಕೆ
ಪವಾಡ ಪುರುಷರ ನೆಲೆವೀಡು
ರೆಹೆಮತುಲ್ಲಾ ವಾಲೆ ಅನ್ನೋರು ಇಲ್ಲಿ ನೆಲೆಸಿದ್ದರಂತೆ. ಸ್ಥಳೀಯರು ಹೇಳುವ ಪ್ರಕಾರ ಅವ್ರು ಪವಾಡ ಪುರುಷರಾಗಿದ್ರಂತೆ. ಈಗಲೂ ಅವ್ರು ಭಕ್ತರ ಸಂಕಷ್ಟಗಳಿಗೆ ಸ್ಪಂದಿಸುತ್ತಾರೆ ಅನ್ನೋ ನಂಬಿಕೆ ಭಕ್ತರಲ್ಲಿದೆ. ರವಿವಾರ, ಅಮಾವಾಸ್ಯೆ, ಹುಣ್ಣಿಮೆ ಹೀಗೆ ವಿಶೇಷ ದಿನಗಳಲ್ಲಂತೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ತಮ್ಮ ಹರಕೆಗಳನ್ನು ಸಲ್ಲಿಸಿ ಕೃತಾರ್ಥರಾಗ್ತಾರೆ.
ಇದನ್ನೂ ಓದಿ: Vijayapura: ನಷ್ಟವಾಯ್ತೆಂದು ಎದೆಗುಂದಲಿಲ್ಲ ಈ ರೈತ, ಚೆಂಡು ಹೂವಿನಿಂದ ಗೊಬ್ಬರ!
ಜೋಡ್ ಗುಂಬಜ್ಗೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಹೀಗೆ ಜೋಡು ಗುಮ್ಮಟ ಹೊರಗಡೆ ಪ್ರವಾಸಿ ತಾಣದಂತಿದ್ರೂ ಒಳಗಡೆ ಆಧ್ಯಾತ್ಮದ ಸೆಳೆತವಿದೆ. ಬೀಗ ಲಾಕ್ ಮಾಡಿ ಸಕ್ಸಸ್ ಕಂಡಿದ್ಧೇವೆ ಅನ್ನೋರು ಜೋಡು ಗುಮ್ಮಟವನ್ನ ಇನ್ನಷ್ಟು ಜನರಿಗೆ ಪರಿಚಯಿಸ್ತಿದ್ದಾರೆ. ಒಟ್ಟಾರೆ ವಿಶಿಷ್ಟ ಸೌಂದರ್ಯ, ಅಧ್ಯಾತ್ಮದಿಂದ ಜೋಡು ಗುಮ್ಮಟ ದಿನೇ ದಿನೇ ಸಖತ್ ಫೇಮಸ್ ಆಗ್ತಿದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ