ವಿಜಯಪುರ: ಓಡೋಡಿ ಬಂದು ಕಲ್ಲಿಗೆ ಜೋರಾಗಿ ತಲೆಜಜ್ಜಿಕೊಳ್ತಿರೋ ಭಕ್ತರು, ಅದೂ ಒಂದಲ್ಲ, ಎರಡಲ್ಲ, ಮೂರು ಬಾರಿ! ಇಂತಹ ವಿಚಿತ್ರ ಆಚರಣೆಗೆ ವಿಜಯಪುರ ಜಿಲ್ಲೆಯ (Vijayapura News) ನಿಡಗುಂದಿ ತಾಲೂಕಿನ ಗಣಿ ಗ್ರಾಮ ಸಾಕ್ಷಿಯಾಯ್ತು. ಕಾರ್ತಿಕ ಮಾಸದ ನಿಮಿತ್ತ ಗಣಿ ಗ್ರಾಮದ ಸೋಮೇಶ್ವರ ದೇವರ ಜಾತ್ರೆ (Someshwara Fair) ವೇಳೆ ಹೀಗೆ ತಲೆ ಜಜ್ಜಿಕೊಳ್ಳುವ ಆಚರಣೆ ನಡೆಯುತ್ತೆ.
ಇದನ್ನೂ ಓದಿ: Bagalakote: ಕಾಯಿನ್ ಬಾಕ್ಸ್ ಆದ ಹೊಟ್ಟೆ! ವೈದ್ಯರಿಂದ 187 ನಾಣ್ಯಗಳು ಹೊರಕ್ಕೆ
ಭಕ್ತರು ಶ್ರದ್ಧಾ ಭಕ್ತಿಯಿಂದ ಓಡೋಡಿ ಬಂದು ದೊಡ್ಡ ಕಲ್ಲಿಗೆ ಮೂರು ಬಾರಿ ತಲೆ ಜಚ್ಚಿಕೊಂಡ್ರು. ಇದನ್ನು ಭಕ್ತಿಯಿಂದ ನಮಸ್ಕಾರವೆಂದೇ ಕರೆದು ಪುನೀತರಾದ್ರು! ಅಲ್ಲದೇ ಹೀಗೆ ತಲೆಗೆ ಕಲ್ಲು ಜಜ್ಜಿದರೂ ಗಾಯವಾಗಿಲ್ಲ, ಇದು ಸೋಮೇಶ್ವರ ದೇವರ ಪವಾಡ ಎಂದೇ ವರ್ಣಿಸಿದರು.
ಇದನ್ನೂ ಓದಿ: Jod Gumbaz: ಹರಕೆ ಈಡೇರಲು ಬೀಗ ಲಾಕ್! ಇಷ್ಟಾರ್ಥ ಈಡೇರಿದ್ರೆ ಮಾತ್ರ ಅನ್ಲಾಕ್
ಒಟ್ಟಾರೆ ನಂಬಿಕೆಯೋ..ಮೂಢನಂಬಿಕೆಯೋ ಭಕ್ತರು ಎಂಬ ವಿಶ್ಲೇಷಣೆಗೆ ಹೋಗದೇ ಇಂತಹ ವಿಚಿತ್ರ ಆಚರಣೆಯೊಂದು ನಡೆಯಿತು. ಕಲ್ಲಿಗೆ ಜಜ್ಜಿಕೊಂಡ ಭಕ್ತರನ್ನು ಕಂಡು ನೆರೆದವರು ಸಹ ಭಕ್ತಿ ಭಾವದಲ್ಲಿ ಮುಳುಗೆದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ