ವಿಜಯಪುರ: ನೀವು ಪ್ರಸಿದ್ಧ ಕ್ಷೇತ್ರ ಶ್ರೀಶೈಲದ ಹೆಸರು ಕೇಳಿರಬಹುದು, ಒಮ್ಮೆಯಾದರೂ ಶ್ರೀಶೈಲ ದರ್ಶನ ಮಾಡಬೇಕೆಂದು ಅಂದುಕೊಂಡಿರಬಹುದು. ಹಾಗಿದ್ದರೆ ಶ್ರೀಶೈಲ ದರ್ಶನ ಮಾಡುವ ಸದವಕಾಶವೊಂದು ಇಲ್ಲಿದೆ. ವಿಜಯಪುರ ನಗರದ (Vijayapura News) ಜೋರಾಪುರ ಪೇಠೆಯ ಮಲ್ಲಯ್ಯನ ಗುಡಿಯ (ಮಲ್ಲಯ್ಯನ ಓಣಿ) ಶ್ರೀ ಮಲ್ಲಿಕಾರ್ಜುನ ಪಾದಾಯಾತ್ರಾ ಕಮೀಟಿ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವು ಸಹ ಶ್ರೀಶೈಲಕ್ಕೆ ಪಾದಯಾತ್ರೆ (Srisaila Temple) ಆರಂಭವಾಗಲಿದೆ.
ಸತತ 29 ವರ್ಷಗಳಿಂದ ಈ ಸಮಿತಿ ನೇತೃತ್ವದಲ್ಲಿ ಶ್ರೀಶೈಲ ಮಲ್ಲಯ್ಯನ ಭಕ್ತರು ಪಾದಯಾತ್ರೆ ಕೈಗೊಳ್ಳುತ್ತಿದ್ದಾರೆ. ಶ್ರೀಶೈಲ ಮಲ್ಲಯ್ಯನ ಭಕ್ತರು ಈ ಪಾದಯಾತ್ರೆಯಲ್ಲಿ ಭಾಗಿಯಾಗಬಹುದಾಗಿದೆ. ಭಾಗಿಯಾಗುವ ಮಹಿಳೆಯರು ಮತ್ತು ಪುರುಷರು ಹೊರಡುವ ಮೊದಲು ತಮ್ಮ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕಿದೆ.
15 ದಿನಗಳಲ್ಲಿ ಯಾತ್ರೆ ಪೂರ್ಣ
ಈ ಪಾದಯಾತ್ರೆ ಆರಂಭವಾದ ದಿನದಿಂದ ಹದಿನೈದು ದಿನಗಳಲ್ಲಿ ಮುಕ್ತಾವಾಗಲಿದೆ. 15 ದಿನಗಳ ಈ ಪಾದಯಾತ್ರೆ ಸಾಗುವ ಮಾರ್ಗ ಹೀಗಿದೆ: ಹಿಟ್ನಳ್ಳಿ, ಮನಗೂಳಿ, ಬಸವನ ಬಾಗೇವಾಡಿ, ಹೂವಿನ ಹಿಪ್ಪರಗಿ, ಕೊಣ್ಣೂರ ಕ್ರಾಸ್, ತಾಳಿಕೋಟಿ, ಬಂಡೆಪ್ಪನ ಸಾಲವಾಡಗಿ, ಹುಣಸಗಿ, ದೇವತಕಲ್ಲ, ಶೆಳ್ಳಗಿ, ಸೂಗೂರ, ಅಂಜುಳ ಹೊಳಿ, ಮಸರಕಲ್ಲ, ಗಬ್ಬೂರ, ಕಲಮಲಾ, ರಾಯಚೂರ, ಭಾವಿದೊಡ್ಡಿ, ಘಟ್ಟಿ, ಆಯಿಜ, ಶಾಂತಿನಗರ, ಆಲಂಪೂರ ಕ್ರಾಸ್, ಜೋಗಳಾಂಬ ದೇವಸ್ಥಾನ, ನಂದಿಕೊಟಕೂರ, ಜಾಪುರಡಬಂಗ್ಲಾ, ಪಾಲಂಪಾಲ, ಕೃಷ್ಣಾಪುರ ಮಾರ್ಗವಾಗಿ ಮಾರ್ಚ್ 21 ರಂದು ತೆಲಂಗಾಣ ರಾಜ್ಯದ ಶ್ರೀಶೈಲಕ್ಕೆ ತಲುಪಲಿದೆ.
ಇದನ್ನೂ ಓದಿ: Vijayapura: ಒಂದೇ ಒಂದು ಮರದ ಮಂಚ, ಚೇರ್ ಸಿಗದ ಊರಲ್ಲಿ ಚಂದ್ರಮ್ಮ ದೇವಿ ಜಾತ್ರೆ ಸಂಭ್ರಮ!
ಮಾರ್ಗಮಧ್ಯೆ ಊಟೋಪಚಾರದ ವ್ಯವಸ್ಥೆ ಹೇಗೆ?
ಮಾರ್ಗಮಧ್ಯೆ ಭಕ್ತರು, ನಾನಾ ದಾನಿಗಳು ಪಾದಯಾತ್ರಿಗಳಿಗಾಗಿ ಅಲ್ಪೋಪಹಾರ, ಊಟ, ವಸತಿ ಮತ್ತು ಔಷಧೋಪಚಾರ ವ್ಯವಸ್ಥೆ ಕಲ್ಪಿಸಿದ್ದಾರೆ.
ಇದನ್ನೂ ಓದಿ: Vijayapura: ಯಾವ್ದೂ ವೇಸ್ಟ್ ಅಲ್ಲ! ಕಸದಿಂದ ಗೊಬ್ಬರ ತಯಾರಿಸುತ್ತಿದೆ ವಿಜಯಪುರ ಪಾಲಿಕೆ!
ಹೆಚ್ಚಿನ ಮಾಹಿತಿಗಾಗಿ ಇಲ್ಲಿದೆ ಸಂಪರ್ಕ ಸಂಖ್ಯೆ
ಆಸಕ್ತ ಭಕ್ತಾದಿಗಳು ಹೆಚ್ಚಿನ ಮಾಹಿತಿಗಾಗಿ ರವೀಂದ್ರ ಸಿದ್ದಯ್ಯ ಕರ್ಪೂರಮಠ-8884447791, ಶರಣಬಸಪ್ಪ. ಚ. ಚನ್ನಿಗಾವಿಶೆಟ್ರು -8618406986 ಸಂಪರ್ಕಿಸುವಂತೆ ಸಮಿತಿಯ ಮುಖಂಡ ರವೀಂದ್ರ ಕರ್ಪೂರಮಠ ಅವರು ಮಾಹಿತಿ ನೀಡಿದ್ದಾರೆ.
ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ