• Home
  • »
  • News
  • »
  • vijayapura
  • »
  • Vijayapura Dance: ವಿಜಯಪುರ ಮಹಿಳೆಯರ ಈ ಅದ್ಭುತ ಡಾನ್ಸ್​ಗೆ ನೀವು ಫಿದಾ ಆಗ್ತೀರಿ!

Vijayapura Dance: ವಿಜಯಪುರ ಮಹಿಳೆಯರ ಈ ಅದ್ಭುತ ಡಾನ್ಸ್​ಗೆ ನೀವು ಫಿದಾ ಆಗ್ತೀರಿ!

ಇಲ್ಲಿ ನೋಡಿ ಕುಣಿತ

"ಇಲ್ಲಿ ನೋಡಿ ಕುಣಿತ"

ಇತರ ಮಹಿಳೆಯರೊಂದಿಗೆ ಬೆರೆತು ದಿನಕ್ಕೊಂದು ಸೀರೆಯ ವಿವಿಧ ಸ್ಟೈಲ್ನಲ್ಲಿ ಪೊಟೊ ಕ್ಲಿಕ್ಕಿಸಿ ಅದನ್ನು ವಾಟ್ಸ್ಆ್ಯಪ್, ಫೇಸ್​ಬುಕ್​​ಗಳಲ್ಲಿ ಷೇರ್ ಮಾಡುತ್ತಾ ಸಂಭ್ರಮಿಸುತ್ತಿದ್ದಾರೆ.

  • Share this:

    ಒಂಭತ್ತು ದಿನ, ಒಂಭತ್ತು ಬಣ್ಣ! ಮಹಿಳೆಯರಿಗಂತೂ ನವರಾತ್ರಿ ಅಂದ್ರೆ ಹಬ್ಬವೋ ಹಬ್ಬ! ಸಂಭ್ರಮವೋ ಸಂಭ್ರಮ. ಸಂಜೆಯಾದ್ರೆ ಸಾಕು ಕೈಯಲ್ಲಿ ಕೋಲು, ಭಕ್ತಿಯ ಸುಧೆ, ಜಗನ್ಮಾತೆಯನ್ನು ಪೂಜಿಸಿ (Navaratri 2022)  ಕೈಯಲ್ಲಿ ದಾಂಡಿಯಾ ನೃತ್ಯ ಮಾಡ್ತಿದ್ದರೆ ಅದನ್ನ ನೋಡದಿರೋಕೇ ಸಾಧ್ಯವಿಲ್ಲ ಅನ್ನೋ ಭಾವ. ವಿಜಯಪುರದಲ್ಲಿ (Vijayapura) ಗಲ್ಲಿಗಲ್ಲಿಗಳಲ್ಲಿ ಜಗದಂಬೆ ವಿರಾಜಮಾನಳಾಗಿದ್ದಾಳೆ. ಅದ್ರಲ್ಲೂ ಮಹಿಳೆಯರು ನಸುಕಿನ ಜಾವವೇ ಎದ್ದು ದೇವಿ ಮಂದಿರಗಳಿಗೆ ತೆರಳಿ ಶ್ರದ್ಧಾ ಭಕ್ತಿಯಿಂದ ಪೂಜಿಸ್ತಿದ್ದಾರೆ. ಒಂಭತ್ತು ದಿನಗಳ ಕಾಲ ಒಂಭತ್ತು ಬಣ್ಣದ ಸೀರೆ ತೊಟ್ಟು ಸಂಭ್ರಮಿಸುತ್ತಿದ್ದಾರೆ.


    ಇದನ್ನೂ ಓದಿ: Success Story: ಕಾಲೇಜ್​ಗಾಗಿ ರಕ್ತದಲ್ಲಿ ಪತ್ರ ಬರೆದ ಯುವಕ! ಇಡೀ ಊರಿಗೇ ಬಂತು ಭಾಗ್ಯ!


    ಇತರ ಮಹಿಳೆಯರೊಂದಿಗೆ ಬೆರೆತು ದಿನಕ್ಕೊಂದು ಸೀರೆಯ ವಿವಿಧ ಸ್ಟೈಲ್ನಲ್ಲಿ ಪೊಟೊ ಕ್ಲಿಕ್ಕಿಸಿ ಅದನ್ನು ವಾಟ್ಸ್ಆ್ಯಪ್, ಫೇಸ್​ಬುಕ್​​ಗಳಲ್ಲಿ ಷೇರ್ ಮಾಡುತ್ತಾ ಸಂಭ್ರಮಿಸುತ್ತಿದ್ದಾರೆ. ಅಷ್ಟೇ ಭಕ್ತಿಯಿಂದ ನಮ್ಮ ಕುಟುಂಬಕ್ಕೆ ರಕ್ಷಣೆ ಕೊಡು ತಾಯಿ ಎಂದು ಆ ಜಗದಂಬೆಯಲ್ಲಿ ಪ್ರಾರ್ಥಿಸುತ್ತಿದ್ದಾರೆ.


    ಇದನ್ನೂ ಓದಿ: Drone In Agriculture: ಕೃಷಿಯಲ್ಲಿ ಡ್ರೋನ್ ಬಳಕೆ ಹೇಗೆ? ಈ ರೈತರನ್ನು ನೋಡಿ!


    ಮಹಿಳೆಯರು ತಮಗಿಷ್ಟವಾದ ಹಾಡಿಗೆ ದಾಂಡಿಯಾ ಸ್ಟೆಪ್ಸ್ ಹಾಕ್ತಿದ್ದಾರೆ. ಮಹಿಳೆಯರಿಗೆ ಪುಟಾಣಿಗಳು ಸಾಥ್ ನೀಡುತ್ತಿದ್ದಾರೆ.  ನವರಾತ್ರಿ ಹಬ್ಬದ ಆಚರಣೆಯನ್ನು ಬೆರಗುಗಣ್ಣುಗಳಿಂದ ನೋಡಿ ಸಂತೋಷಪಡ್ತಿದ್ದಾರೆ. ದೇವಿ ಪ್ರತಿಷ್ಠಾಪಿಸಿರುವ ವೇದಿಕೆಗಳಿಗೆ ತೆರಳಿ ಅರಿಶಿಣ ಕುಂಕುಮ ನೀಡಿ ಮುತ್ತೈದೆಯರಿಗೆ ಉಡಿ ತುಂಬಿ ನೂರು ವರ್ಷ ಬಾಳಮ್ಮಾ ಎಂದು ಹರಿಸುತ್ತಿದ್ದಾರೆ.


    ವರದಿ: ಪ್ರಶಾಂತ ಹೂಗಾರ್, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: