Crocodiles In Vijayapura: ರಸ್ತೆಯಲ್ಲಿ ಗಜಗಾತ್ರದ ಮೊಸಳೆಗಳು! ನದಿಯಿಂದ ಹೊರಬರೋಕೆ ಕಾರಣ ರಹಸ್ಯ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಸಾಮಾನ್ಯವಾಗಿ ಮೊಸಳೆಗಳು ನದಿಗಳಲ್ಲಿ ಇದ್ದರೇನೆ ಕಣ್ಣಿಗೆ ಗೋಚರಿಸದು. ಆದ್ರೆ ವಿಜಯಪುರದಲ್ಲಿ ಹೆದ್ದಾರಿ ನುಗ್ಗಿ ಆತಂಕ ಮೂಡಿಸುತ್ತಿದೆ.

  • Share this:

    ವಿಜಯಪುರ : ರಸ್ತೆ ಮೇಲೆ ಓಡಾಡ್ತಿರೋ ಮೊಸಳೆ. ಗಜಗಾತ್ರದ ಮೊಸಳೆಗಳ (Crocodile) ಆಗಮನದಿಂದ ಹೆಚ್ಚಾಯ್ತು ಆತಂಕ. ಕೃಷ್ಣಾ ನದಿ ತೀರದಲ್ಲಿ ರಸ್ತೆಗಳ‌ ಮೇಲೆ ಮೊಸಳೆ ಓಡಾಡೋಕೆ ಕಾರಣ ಏನು ಅನ್ನೋ‌‌ ಆತಂಕ. ಸಾಮಾನ್ಯವಾಗಿ ನೀರು ಬಿಟ್ಟು ಹೊರಗೆ ಬಾರದ ಮೊಸಳೆಗಳು ಇತ್ತೀಚೆಗೆ ವಿಜಯಪುರದ (Vijayapura News) ಕೃಷ್ಣಾ ನದಿ ತೀರದ  (Krishna River)ಬಳಿ ಹಲವು ಬಾರಿ ಜನರ ಕಣ್ಣಿಗೆ ಕಾಣಿಸಿಕೊಂಡಿವೆ. ರಸ್ತೆಗೆ ನೇರವಾಗಿ ಬರೋ ಗಜಗಾತ್ರದ ಮೊಸಳೆಗಳು ಜನರನ್ನ ಆತಂಕಕ್ಕೆ ತಳ್ಳುತ್ತಿದೆ.


    ಮೊಸಳೆಗಳ ಆಗಮನದಿಂದ ವಾಹನ ಸಂಚಾರಕ್ಕೂ ತೊಡಕು ಉಂಟಾಗುವ ಆತಂಕ‌ ಎದುರಾಗಿದೆ. ವಿಜಯಪುರ ಮತ್ತು ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 218ರ ಕೃಷ್ಣಾ ನದಿ ಸೇತುವೆ ಮೇಲೆ ಬಾಯಿಗೆ ಹಗ್ಗ ಕಟ್ಟಿದ್ದ ಸ್ಥಿತಿಯಲ್ಲಿ ದೊಡ್ಡ ಮೊಸಳೆಯೊಂದು ಪ್ರತ್ಯಕ್ಷವಾಗಿತ್ತು. ಇದರಿಂದ ಆತಂಕಿತರಾದ ಜನರು ಮೊಸಳೆಯನ್ನು ಪೊಲೀಸ್ ಹಾಗೂ ಅರಣ್ಯ ಇಲಾಖೆ ಸಹಾಯದಿಂದ ಪುನಃ ನದಿಗೆ ಸೇರಿಸಿದ್ದಾರೆ.


    ಮೊಸಳೆ ಕಾಣಿಸಿಕೊಳ್ಳೋಕೆ ಕಾರಣವೇನು?
    ಈ ಮೊಸಳೆ ಬಾಯಿಗೆ ಹಗ್ಗ ಕಟ್ಟಿರುವುದರಿಂದ ಆಹಾರ ಸೇವಿಸಲಾಗದೇ ನದಿಯಿಂದ ಆಚೆ ಬಂದಿರಬಹುದು ಎನ್ನಲಾಗಿದೆ. ಅಥವಾ ಜನವಸತಿ ಪ್ರದೇಶಕ್ಕೆ ನುಗ್ಗಿದ ಮೊಸಳೆಯನ್ನು ಹಗ್ಗ ಕಟ್ಟಿ ತಂದು ಇಲ್ಲಿ ಬಿಟ್ಟಿರಬಹುದು ಎಂದೂ ಹೇಳಲಾಗ್ತಿದೆ. ಇಂತಹ ಸಾಧ್ಯತೆಗಳು ಜಾಸ್ತಿ ಇವೆ. ಹಾಗಂತ ಇದೊಂದೇ ಘಟನೆಯಲ್ಲ, ವಿಜಯಪುರದಲ್ಲೇ ಮೊಸಳೆ ರಸ್ತೆಯಲ್ಲಿ ಕಾಣಿಸಿಕೊಂಡ ಇನ್ನಷ್ಟು ಘಟನೆಗಳು ಇತ್ತೀಚಿಗೆ ನಡೆದಿವೆ.


    ಇದನ್ನೂ ಓದಿ: Vijayapura: ಒಂದೇ ಒಂದು ಮರದ ಮಂಚ, ಚೇರ್ ಸಿಗದ ಊರಲ್ಲಿ ಚಂದ್ರಮ್ಮ ದೇವಿ ಜಾತ್ರೆ ಸಂಭ್ರಮ!



    ಬೇನಾಳದಲ್ಲೂ ಮೊಸಳೆ ಪ್ರತ್ಯಕ್ಷ
    ಇನ್ನೊಂದೆಡೆ ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದ ರಸ್ತೆಯಲ್ಲೂ ರಾತ್ರಿ ವೇಳೆ ಮೊಸಳೆಯೊಂದು ಕಂಡು ಬಂದಿತ್ತು. ಹಳ್ಳ, ಕೆರೆಗಳಲ್ಲಿರೋ ಮೊಸಳೆಗಳು ಕೂಡಾ ಹೀಗೆ ನೀರು ಬಿಟ್ಟು ರಸ್ತೆಗೆ ಬರುತ್ತಿವೆ.


    ಇದನ್ನೂ ಓದಿ: Vijayapura: ಯಾವ್ದೂ ವೇಸ್ಟ್ ಅಲ್ಲ! ಕಸದಿಂದ ಗೊಬ್ಬರ ತಯಾರಿಸುತ್ತಿದೆ ವಿಜಯಪುರ ಪಾಲಿಕೆ!


    ಹೀಗಾಗಿ ಈ ಭಾಗದ ರೈತರು ಆತಂಕಿತರಾಗಿದ್ದಾರೆ. ಹೀಗಾಗಿ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿದರೆ ಉತ್ತಮ ಅನ್ನೋ ಮಾತು ಸಾರ್ವಜನಿಕರಿಂದ ಕೇಳಿ ಬರ್ತಿವೆ.


    ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: