ವಿಜಯಪುರ: ಹನುಮ ಮಾಲೆ (Hanuma Mala) ಧರಿಸೋ ಮೂಲಕ ಭಾವೈಕ್ಯತೆ ಮಂತ್ರ ಜಪಿಸಿದ ಮುಸ್ಲಿಂ ವ್ಯಕ್ತಿಯೊಬ್ಬರ ಕಥೆಯನ್ನು ನೀವು ಕೇಳಲೇಬೇಕು. ಕೋಮು ಸೌಹಾರ್ದತೆ (Communal Harmony) ಮೆರೆದ ಮುಸ್ಲಿಂ ವ್ಯಕ್ತಿ ವಿಜಯಪುರ ಜಿಲ್ಲೆ (Vijayapura News) ಬಸವನ ಬಾಗೇವಾಡಿ ತಾಲೂಕಿನ ನರಸಲಗಿ ಗ್ರಾಮದ ಜಾಫರ್. ಇವರೇ ಹನುಮ ಮಾಲೆ ಧರಿಸಿರೋ ಮುಸ್ಲಿಂ ವ್ಯಕ್ತಿ.
ಇದನ್ನೂ ಓದಿ: Special Ghee: ಈ ತುಪ್ಪಕ್ಕೆ ಕೆಜಿಗೆ 2,500 ರೂಪಾಯಿ! ಖರೀದಿಸುವ ಮುನ್ನ ಜೇಬು ನೋಡ್ಕೊಳ್ಳಿ
ಇವರ ವೇಶ ಭೂಷಣ ಹೀಗಿರುತ್ತೆ
ಹಣೆಗೆ ಗಂಧ, ತಿಲಕ, ಕೇಸರಿ ವಸ್ತ್ರ ಧರಿಸಿ, ಹನುಮ ಮಾಲೆ ದೀಕ್ಷೆ ಪಡೆದಿರುವ ಸ್ವಾಮಿ ಜಾಫರ್ ನಿತ್ಯ ಹಿಂದೂ ದೇವಾಲಯದ ಪೂಜೆಗಳಲ್ಲಿ ಭಾಗಿಯಾಗುತ್ತಾರೆ. ಹನುಮದೇವನಿಗೆ ಪೂಜೆ ಸಲ್ಲಿಸಿ ಹನುಮ ಮಾಲೆ ಧರಿಸಿದ ವೃತ ಮುಕ್ತಾಯ ಮಾಡೋ ಆಸೆ ಸ್ವಾಮಿ ಜಾಫರ್ ಅವರದ್ದು.
ಇದನ್ನೂ ಓದಿ: Vijayapura: ಬಿಂಗಿಗಳಿಗೆ ಊಟ ಬಡಿಸಲು ಫುಲ್ ರಶ್! ಯಾರು ಈ ವಿಶೇಷ ವ್ರತಧಾರಿಗಳು?
ಒಂದೇ ತಾಯಿಯ ಮಕ್ಕಳಂತಿರೋಣ
ಮನುಷ್ಯರಲ್ಲಿ ಇರುವ ಜಾತಿ ಎರಡು ಒಂದು ಗಂಡು, ಮತ್ತೊಂದು ಹೆಣ್ಣು. ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಇರಬೇಕು ಅನ್ನೋದು ಸ್ವಾಮಿ ಜಾಫರ್ ಅವರ ಮನದ ಮಾತು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ