Mother Temple Vijayapura: ತಾಯಿಯೇ ದೇವರು ಎಂದು ದೇವಸ್ಥಾನ ನಿರ್ಮಿಸಿದ ಮಕ್ಕಳು! ವಿಜಯಪುರದಲ್ಲಿದೆ ಅಮ್ಮನ ಮಂದಿರ!

ತಾಯಿಗಿಂತ ಮಿಗಿಲಾದ ಬಂಧು ಬೇರೆ ಯಾರೂ ಇರಲು ಸಾಧ್ಯವಿಲ್ಲ. ಅಮ್ಮನೇ ದೇವರು, ಅಮ್ಮನಿಗಿಂತ ದೊಡ್ಡ ದೇವರಿಲ್ಲ ಎಂಬ ಮಾತನ್ನು ಕಾರ್ಯರೂಪಕ್ಕೆ ತಂದ ಮಕ್ಕಳ ಕಥೆಯಿದು!

ಅಮ್ಮನ ಮಂದಿರ

ಅಮ್ಮನ ಮಂದಿರ

 • Share this:
  ವಿಜಯಪುರ: ಅಮ್ಮ ಎನ್ನುವ ಪದ ಎಷ್ಟು ಸುಮಧುರ ಅಲ್ವಾ? ಅಮ್ಮಾ ಎನ್ನುವ ಎರಡಕ್ಷರದ ಪದಕ್ಕೆ ಸಾಕಷ್ಟು ಮಹತ್ವ ಇದೆ. ಜಗತ್ತಿನಲ್ಲಿ ಅತಿ ದೊಡ್ಡ ಆಸ್ತಿಯೆಂದರೆ ಅದು ತಾಯಿ ಮಾತ್ರ, ತಾಯಿಗೆ ಮಕ್ಕಳೆಂದರೆ ಎರಡು ಕಣ್ಣುಗಳಿದ್ದಂತೆ. ಮಗು ತಾಯಿಯ ಗರ್ಭದಲ್ಲಿದ್ದಾಗ ಒಂಬತ್ತು ತಿಂಗಳು ತನ್ನ ಹೊಟ್ಟೆಯಲ್ಲಿ ಇಟ್ಟುಕೊಂಡು ನೋವು ತಿಂದು ಹೆರುವಾಗ ಸಾವಿನೊಂದಿಗೆ ಹೋರಾಡಿ ಪುರ್ನಜನ್ಮ ಪಡೆದು ನಮ್ಮನ್ನು ಹೆರುವವಳು ತಾಯಿ. ಮಕ್ಕಳೂ ತಾಯಿಯ (Mother Children Relationship)  ಕುರಿತು ಅಷ್ಟೇ ಪ್ರೇಮ-ವಾತ್ಸಲ್ಯ ತೋರಿಸಬೇಕು.  ತಾಯಿ ಮತ್ತು ಮಕ್ಕಳ ನಡುವಿನ ಸಂಬಂಧ ಎಷ್ಟು ಅದ್ಭುತ ಎಂದರೆ ಅದನ್ನು ಬರೆಯಲು ಪದಗಳೂ ಸಾಲದೇನೋ!  ತಮ್ಮ ತಾಯಿ ಮೃತಪಟ್ಟ ನಂತರವೂ ತಾಯಿಯ ನೆನಪಲ್ಲಿ ಮಕ್ಕಳು ನಡೆಸಿದ ಕಾರ್ಯವೊಂದರ ಕುರಿತು ವಿಜಯಪುರದ (Vijayapura) ಒಂದು ಹೃದಯಂಗಮ ವರದಿ ಇಲ್ಲಿದೆ ನೋಡಿ.  

  ವಿಜಯಪುರ ಜಿಲ್ಲೆಯ ಹೊನ್ನಳ್ಳಿ ಗ್ರಾಮದ ನಿವಾಸಿ ರಾಜಕುಮಾರ್ ಕುಹಾನಿ ಎಂಬುವರ ತಾಯಿ ಪ್ರೇಮಾವತಿ ಅವರು ಮೂರು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದರು. ಚಿಕಿತ್ಸೆ ಫಲಿಸದೇ ಕೆಲ ದಿನಗಳ ಬಳಿಕ ಅಕಾಲಿಕವಾಗಿ ಮೃತಪಡುತ್ತಾರೆ. ಅವರ ಸಾವು ಕುಟುಂಬಸ್ಥರಿಗೆ ತುಂಬಲಾಗದ ನಷ್ಟವಾಗುತ್ತದೆ.

  ತಾಯಿಗಾಗಿ ಏನಾದರೂ ಮಾಡಲೇಬೇಕು!
  ಪ್ರೇಮಾವತಿ ಅವರ ಪತಿ ಸಿದ್ರಾಮಪ್ಪ ಕುಹಾನಿ ಮತ್ತು ಮಕ್ಕಳಾದ ರಾಜಕುಮಾರ, ಗಂಗೂಬಾಯಿ, ದುಂಡಪ್ಪ. ಶ್ರೀಶೈಲ್, ಪ್ರಕಾಶ ಮತ್ತು ಚಿಕ್ಕಪ್ಪನ ಮಕ್ಕಳಾದ ಗಿರೀಶ್, ಮಲ್ಲಿಕಾರ್ಜುನ್, ಶೋಭಾ ಸೇರಿಕೊಂಡು ಮೃತ ಪ್ರೇಮಾವತಿ ಅವರ ನೆನಪಿಗಾಗಿ ಏನಾದರೂ ಮಾಡಬೇಕೆಂದು ಯೋಚಿಸಿದರು. ಕೊನೆಹೆ ಅಹೇರಿ ಸಮೀಪದ ಹೊನ್ನಳ್ಳಿ ಗ್ರಾಮದಲ್ಲಿರುವ  ಶಿವಶರಣೆ ನೆಲ್ಲೂರು ನಿಂಬೆಕ್ಕ ಪ್ರೌಢಶಾಲೆಯ ಆವರಣದಲ್ಲಿ ಲಕ್ಷಾಂತರ ರೂಪಾಯಿ ಖರ್ಚುಮಾಡಿ ಪಿರಾಮಿಡ್ ಆಕೃತಿಯ ಮೃತ ಪ್ರೇಮಾವತಿ ಅಮ್ಮನ ವಿನೂತನ ಮಂದಿರ ನಿರ್ಮಿಸಿಯೇಬಿಟ್ಟರು.

  ತಾಯಿಯ ಮೂರ್ತಿ ಪ್ರತಿಷ್ಠಾಪಿಸಿ ಮಕ್ಕಳಿಂದ ಲೋಕಾರ್ಪಣೆ
  ಪ್ರೇಮಾವತಿ ಅವರು ಮೂರ್ತಿ ಪ್ರತಿಷ್ಠಾಪಿಸಿದ ಬಳಿಕ ಗ್ರಾಮದ ಹಿರಿಯರು ಮತ್ತು ಕುಟುಂಬಸ್ಥರು ಸೇರಿಕೊಂಡು ಶುಭಮುಹೂರ್ತದಲ್ಲಿ ಅವರ ಮಂದಿರವನ್ನು ಲೋಕಾರ್ಪಣೆ ಮಾಡಿದ್ದಾರೆ. ರಾಜಕುಮಾರ ಕುಹಾನಿ ಅವರ ಸ್ನೇಹಿತ ಅಲ್ಲಮಪ್ರಭು ಮಲ್ಲಿಕಾರ್ಜುನಮಠ ಅವರ ಸಲಹೆ ಪಡೆದುಕೊಂಡು ವಿವಿಧ ಬಗೆಯ ಬಣ್ಣ ಬಳಿದು ದೇವಸ್ಥಾನದ ರೂಪದಲ್ಲಿ ಮಂದಿರ ನಿರ್ಮಿಸಿ ಲೋಕಾರ್ಪಣೆಗೊಳಿಸಲಾಗಿದೆ.

  ಇದನ್ನೂ ಓದಿ: Snake Rescue Team: ಹಾವು ಕಂಡರೆ ಹೆದರಬೇಡಿ, ನಮಗೆ ಫೋನ್ ಮಾಡಿ! ಮೂವರು ಯುವಕರ ಈ ತಂಡ ಹೀಗಂತಿದೆ

  ಅಮ್ಮನ ಮಂದಿರ


  ಇದನ್ನೂ ಓದಿ: Kolhar Curd: ಕೋಲಾರ ಅಲ್ಲ ಕೋಲ್ಹಾರ! ಇಲ್ಲಿಯ ಗಟ್ಟಿ ಮೊಸರ ರುಚಿಗೆ ಮಾರುಹೋಗಿ ಬನ್ನಿ!

  ತಂದೆ ತಾಯಿಗೆ ವಯಸ್ಸಾಯಿತು ಎಂದರೆ ವೃದ್ದಾಶ್ರಮಕ್ಕೆ ಹೋಗಿ ಬಿಡುವ ಕಾಲವಿದು. ಆದರೆ ಈ ಮಹಾತಾಯಿಯ ಮಕ್ಕಳು ತಮ್ಮ ಅಮ್ಮನ ನೆನಪು ಮತ್ತು ಅವರ ವಿಚಾರಧಾರೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ತಾಯಿಯ ಹೆಸರಿನಲ್ಲಿ ಅಮ್ಮನ ಮಂದಿರ ನಿರ್ಮಿಸಿ ಮಾದರಿ ಮಕ್ಕಳಾಗಿದ್ದಾರೆ. ಇವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

  ಅಮ್ಮನ ಮಂದಿರದ ಸುತ್ತಲು ಹಲವಾರು ಗಿಡ ಮರಗಳು
  ದಣಿದವರಿಗೆ ಆಶ್ರಯ ನೀಡುವ ನಿಟ್ಟಿನಲ್ಲಿ ಪ್ರೇಮಾವತಿ ಅವರ ಮೊಮ್ಮಕ್ಕಳು ಮಂದಿರದ ಸುತ್ತಲು ಬಿಲ್ವಪತ್ರೆ, ಅರಳಿಮರ, ತೆಂಗು, ಬೇವು ಸೇರಿದಂತೆ ಹಲವಾರು ಬಗೆಯ ಜಾತಿಯ ಹೂವಿನ ಸಸಿಗಳನ್ನು ನೆಟ್ಟು ಅವುಗಳಿಗೆ ನಿತ್ಯ ನೀರುಣಿಸುತ್ತಾರೆ.

  Aheri Vijayapura
  ಅಮ್ಮನ ಮಂದಿರ ಇರುವ ಸ್ಥಳ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)

  ಅಲ್ಲದೇ ಅಮ್ಮನ ಮಂದಿರದಲ್ಲಿ ಭವಿಷ್ಯದಲ್ಲಿ ಸಮಾಜಕ್ಕೆ ಸಹಾಯವಾಗುವಂತಹ ವಿವಿಧ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಚನೆಯೂ ಇದೆ ಎನ್ನುತ್ತಾರೆ ಅವರು.

  ವರದಿ: ಪ್ರಶಾಂತ ಹೂಗಾರ, ವಿಜಯಪುರ
  Published by:guruganesh bhat
  First published: