• Home
  • »
  • News
  • »
  • vijayapura
  • »
  • Vijayapura: ಚಿಕನ್​ಗುನ್ಯಾ, ಡೆಂಗ್ಯೂಗೆ ತತ್ತರಿಸಿದ ವಿಜಯಪುರದ ಗ್ರಾಮ!

Vijayapura: ಚಿಕನ್​ಗುನ್ಯಾ, ಡೆಂಗ್ಯೂಗೆ ತತ್ತರಿಸಿದ ವಿಜಯಪುರದ ಗ್ರಾಮ!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಮೈಕೈ ನೋವು, ಜ್ವರ, ತಲೆನೋವು, ಕೀಲು ನೋವು ಸೇರಿದಂತೆ ನಾನಾ ಲಕ್ಷಣಗಳಿಂದ ಈ ಗ್ರಾಮಸ್ಥರು ಬಳಲುತ್ತಿದ್ದಾರೆ. ಇದೆಲ್ಲ ಚಿಕನ್‌ಗುನ್ಯಾ, ಡೆಂಗ್ಯೂ ಅಂತಿದ್ದಾರೆ ವೈದ್ಯರು.

  • News18 Kannada
  • Last Updated :
  • Bijapur, India
  • Share this:

    ವಿಜಯಪುರ: ಈ ಗ್ರಾಮಕ್ಕೆ ಗ್ರಾಮವೇ ಆತಂಕಿತವಾಗಿದೆ. ಊರೆಲ್ಲ ವೈದ್ಯರು, ಆಶಾ ಕಾರ್ಯಕರ್ತೆಯರು ಸುತ್ತಾಡಿದ್ರೂ ಕಾಯಿಲೆಯೊಂದು ಉಲ್ಬಣಗೊಳ್ಳುತ್ತಿದೆ. ಕೊರೊನಾ ಮಹಾಮಾರಿ ಬಳಿಕ ವಿಜಯಪುರ ಜಿಲ್ಲೆಯ (Vijayapura) ಈ‌ ಗ್ರಾಮ ಅಕ್ಷರಶಃ ‌ನಲುಗಿ ಹೋಗಿದೆ. ವಿಜಯಪುರದ ಆಲಮಟ್ಟಿ ಸಮೀಪದ (Vijayapura Almatti) ಅರಳಲದಿನ್ನಿ ಗ್ರಾಮ ರೋಗ ಭೀತಿಯಲ್ಲಿದೆ.‌ ಮಹಿಳೆಯರು, ಮಕ್ಕಳು, ಪುರುಷರೂ ಅಂತಾ ಸುಮಾರು 4 ಸಾವಿರದಷ್ಟು ಮಂದಿ ಈ ಗ್ರಾಮದಲ್ಲಿದ್ದಾರೆ. ಸದ್ಯ ಮಕ್ಕಳು, ವಯಸ್ಕರು, ವಯೋವೃದ್ದರು, ಮಹಿಳೆಯರು ರೋಗಗಳಿಗೆ ತುತ್ತಾಗಿ ಆಲಮಟ್ಟಿ ಖಾಸಗಿ ಆಸ್ಪತ್ರೆ, ನಿಡಗುಂದಿ ಸಮುದಾಯ ಆರೋಗ್ಯ ಕೇಂದ್ರ (Primary Health Centre) ಸೇರಿದಂತೆ ನಾನಾ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.


    ಮೈಕೈ ನೋವು, ಜ್ವರ, ತಲೆನೋವು, ಕೀಲು ನೋವು ಸೇರಿದಂತೆ ನಾನಾ ಲಕ್ಷಣಗಳಿಂದ ಗ್ರಾಮಸ್ಥರು ಬಳಲುತ್ತಿದ್ದಾರೆ. ಇದೆಲ್ಲ ಚಿಕನ್‌ಗುನ್ಯಾ, ಡೆಂಗ್ಯೂ ಅಂತಿದ್ದಾರೆ ವೈದ್ಯರು.


    ರೋಗ ಬರಲು ಏನು ಕಾರಣ?
    ಅರಳದಿನ್ನಿ ಗ್ರಾಮದಲ್ಲಿ ಈ‌ ಮಟ್ಟಿಗೆ ಚಿಕನ್ ಗುನ್ಯಾ, ಡೆಂಗ್ಯೂನಂತಹ ರೋಗಗಳು ಹರಡಲು ಇಲ್ಲಿನ‌ ಸ್ವಚ್ಛತೆ ನಿರ್ವಹಣೆ ಇಲ್ಲದಿರೋದು ಅಂತಾ ನಾಗರಿಕರು ದೂರಿದ್ದಾರೆ. ಗ್ರಾಮಕ್ಕೆ ತೆರಳುವ ರಸ್ತೆಯ ಎರಡು ಬದಿಯಲ್ಲಿ ಗ್ರಾಮಸ್ಥರು ತ್ಯಾಜ್ಯವನ್ನ ಎಸೆಯುತ್ತಾರೆ. ಇನ್ನೊಂದೆಡೆ ಸಾರ್ವಜನಿಕರಿಗೆ ಶೌಚಾಲಯದ ಕೊರತೆ, ಸುಮಾರು ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆ ಇದೆಲ್ಲವೂ ರೋಗ ಹರಡುವಿಕೆ ಹೆಚ್ಚಾಗಿದೆ.


    ಇದನ್ನೂ ಓದಿ: Bengaluru To Vijayapura: ಬೆಂಗಳೂರಿನಿಂದ ವಿಜಯಪುರ ಇನ್ನಷ್ಟು ಹತ್ತಿರ!


    ಹೈನುಗಾರಿಕೆ, ಕೃಷಿ ನಂಬಿಕೊಂಡವರೇ ಹೆಚ್ಚು
    ಈ ಗ್ರಾಮದ ಜನರು ಹೆಚ್ಚಾಗಿ ಹೈನುಗಾರಿಕೆ, ಕೃಷಿ ನಂಬಿ ಬದುಕಿದ್ದಾರೆ. ಅಲ್ಲಿನ ತ್ಯಾಜ್ಯಗಳನ್ನು ರಸ್ತೆ ಬದಿ‌ ಎಸೆಯುತ್ತಿದ್ದಾರೆ. ಹೀಗಾಗಿಯೇ ಸೋಂಕು ಹೆಚ್ಚಿದೆ. ಇದೀಗ ಅವುಗಳನ್ನು ವಿಲೇವಾರಿ ಮಾಡುವ ಕೆಲಸ ಭರದಿಂದ ಸಾಗಿದೆ.


    ಇದನ್ನೂ ಓದಿ: Success Story: ಕ್ಯಾಪ್ಸಿಕಂ ಕೃಷಿಯಿಂದ ಲಕ್ಷ ಲಕ್ಷ ಲಾಭ! ಹೆಸರು, ಹಣ ಒಟ್ಟಿಗೇ ಬಂತು!


    ಆದರೆ ಇನ್ನೊಂದೆಡೆ ಮನೆಯಲ್ಲಿರೋ ವಯಸ್ಕರ ಸಹಿತ ಕಿರಿಯರಿಗೂ ವಿವಿಧ ಜ್ವರಗಳು ಕಾಣಿಸಿಕೊಳ್ತಿವೆ. ಇನ್ನಾದರೂ ಸ್ವಚ್ಛತೆಯ ಅರಿವು ಮೂಡಿ ರೋಗ ರುಜಿನ ಕಡಿಮೆಯಾಗಲಿ ಅನ್ನೋದೇ ನಮ್ಮ ಆಶಯ.


    ವರದಿ: ಪ್ರಶಾಂತ ಹೂಗಾರ, ನ್ಯೂಸ್18 ಕನ್ನಡ ಡಿಜಿಟಲ್, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: