• Home
  • »
  • News
  • »
  • vijayapura
  • »
  • Sugarcane Price: ಕಬ್ಬು ಕೃಷಿಕರೇ ಗಮನಿಸಿ; ಸಕ್ಕರೆ ಕಾರ್ಖಾನೆಗಳಲ್ಲಿ ನಿಗದಿಪಡಿಸಿದ ದರ ಹೀಗಿದೆ

Sugarcane Price: ಕಬ್ಬು ಕೃಷಿಕರೇ ಗಮನಿಸಿ; ಸಕ್ಕರೆ ಕಾರ್ಖಾನೆಗಳಲ್ಲಿ ನಿಗದಿಪಡಿಸಿದ ದರ ಹೀಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ರೈತ ಬಾಂಧವರು ಇದರ ಸದುಪಯೋಗವನ್ನ ಪಡೆದುಕೊಳ್ಳುವಂತೆ ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • Share this:

    ವಿಜಯಪುರ : 2022-23ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಸಂಧಿಸಿದಂತೆ 2021-22ನೇ ಸಾಲಿನಲ್ಲಿ ವಿಜಯಪುರ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು (Vijayapura Sugarcane Factories) ನುರಿಸಿದ ಸಕ್ಕರೆಯ ಇಳುವರಿ ಆಧರಿಸಿ ಆಯುಕ್ತರು ಕಬ್ಬು ಅಭಿವೃದ್ದಿ ಹಾಗೂ ಸಕ್ಕರೆ ನಿರ್ದೇಶಕರು ಬೆಂಗಳೂರು ಇವರು ಎಫ್‌ಆರ್‌ಪಿ (ಪ್ರತಿ ಟನ್ನಿಗೆ ಕಟಾವು ಮತ್ತು ಸಾಗಾಣಿಕೆ ಸೇರಿದಂತೆ) ದರವನ್ನು (Sugarcane Rate)ಪ್ರತಿ ಟನ್ ಕಬ್ಬಿಗೆ ಸಕ್ಕರೆ ಕಾರ್ಖಾನೆವಾರು (Sugarcane Price) ನಿಗದಿಪಡಿಸಿದ್ದಾರೆ, ಹಾಗಾದರೆ ವಿಜಯಪುರ ಜಿಲ್ಲೆಯ ಯಾವ ಫ್ಯಾಕ್ಟರಿಯಲ್ಲಿ ಕಬ್ಬಿಗೆ ಎಷ್ಟು ರೂ. ನಿಗದಿಪಡಿಸಲಾಗಿದೆ


    ಯಾವ ಕಾರ್ಖಾನೆಯಲ್ಲಿ ಎಷ್ಟು ದರ ನಿಗದಿ? ಇಲ್ಲಿದೆ ಮಾಹಿತಿ
    ಇಂಡಿಯನ್ ಶುಗರ್ ಮ್ಯಾನುಫ್ಯಾಕ್ಟರಿಂಗ್ ಕಂ ಹಾವಿನಾಳ ರೂ. 2821-00, ಜಮಖಂಡಿ ಶುಗರ್ಸ್​ ನಾದ ಕೆಡಿ ರೂ. 3279-00, ಕೆಪಿಆರ್ ಶುಗರ್ಸ್ ಆಲಮೇಲ ರೂ. 3163-00, ಮೆ: ಮನಾಲಿ ಶುಗರ್ಸ್ ಲಿ. ಮಲಘಾಣ ರೂ. 2821-00, ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಚಿಕ್ಕಗಲಗಲಿ ರೂ. 3401-00, ಸಂಗಮನಾಥ ಶುಗರ್ಸ್​ ಯರಗಲ್ಲ ಬಿಕೆ ರೂ. 3047-00, ಶ್ರೀ ಬಾಲಾಜಿ ಶುಗರ್ಸ್ ಯರಗಲ್ಲ ರೂ. 3218-00, ಶ್ರೀ ಬಸವೇಶ್ವರ ಶುಗರ್ಸ್​ ಕಾರಜೋಳ ರೂ. 3294 ನಿಗದಿಪಡಿಸಲಾಗಿದೆ.


    ಇದನ್ನೂ ಓದಿ: Best Waterfalls Uttara Karnataka: ಬಾಗಲಕೋಟೆಯ ಅದ್ಭುತ ಜಲಪಾತ! ಪ್ರಕೃತಿ ಸೌಂದರ್ಯದ ವೈಭವ


    ಈ ಕಾರ್ಖಾನೆಗಳಲ್ಲಿ ನಿಗದಿಪಡಿಸಿದ ದರ ಇಷ್ಟಿದೆ
    ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಮರಗೂರ ರೂ. 3044-00 ಇರುತ್ತದೆ. ಈ ಎಫ್‌ಆರ್‌ಪಿ ದರದ ಮಾಹಿತಿಯನ್ನು ಬಾಗಲಕೋಟೆ ಮತ್ತು ವಿಜಯಪುರ  ಜಿಲ್ಲೆಯ ಎಲ್ಲಾ ರೈತರ ಮತ್ತು ಸಾರ್ವಜನಿಕರು ಈ ಮಾಹಿತಿಯನ್ನು ತಿಳಿದಿರುವಂತೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮನವಿ ಮಾಡಿದ್ದಾರೆ.


    ಇದನ್ನೂ ಓದಿ: Success Story: ಕ್ಯಾಪ್ಸಿಕಂ ಕೃಷಿಯಿಂದ ಲಕ್ಷ ಲಕ್ಷ ಲಾಭ! ಹೆಸರು, ಹಣ ಒಟ್ಟಿಗೇ ಬಂತು!


    ಸದುಪಯೋಗಪಡಿಸಿಕೊಳ್ಳುವಂತೆ ರೈತರಲ್ಲಿ ಮನವಿ ಮಾಡಿದ ಜಿಲ್ಲಾಧಿಕಾರಿ
    ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ರೈತ ಬಾಂಧವರು ಇದರ ಸದುಪಯೋಗವನ್ನ ಪಡೆದುಕೊಳ್ಳುವಂತೆ ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Published by:ಗುರುಗಣೇಶ ಡಬ್ಗುಳಿ
    First published: