Vijayapura: ಒಂದೇ ಒಂದು ಮರದ ಮಂಚ, ಚೇರ್ ಸಿಗದ ಊರಲ್ಲಿ ಚಂದ್ರಮ್ಮ ದೇವಿ ಜಾತ್ರೆ ಸಂಭ್ರಮ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ವಿಶಿಷ್ಟ ಸಂಪ್ರದಾಯಗಳನ್ನು ಪಾಲಿಸುವ ವಿಜಯಪುರ ಜಿಲ್ಲೆಯ ಅರಳದಿನ್ನಿಯ ಶ್ರೀಚಂದ್ರಮ್ಮ ದೇವಿ ಜಾತ್ರೆಯು ಸಂಭ್ರಮದಿಂದ ಸಂಪನ್ನಗೊಂಡಿತು.

  • Share this:

    ವಿಜಯಪುರ: ದೇಗುಲ ಸುತ್ತಲೂ ವಿದ್ಯುತ್ ದೀಪಗಳ ಅಲಂಕಾರ. ದೇಗುಲ ಪ್ರಾಂಗಣ ತುಂಬೆಲ್ಲ ಸಂಭ್ರಮವೋ ಸಂಭ್ರಮ. ತೆಂಗಿನಕಾಯಿ (Coconut) ಒಡೆದು ಭಕ್ತಿಯ ಪರಾಕಷ್ಟೆ ಮೆರೆಯುವ ಭಕ್ತಗಣ. ಹೀಗೆ ಸಂಭ್ರಮದಿಂದ ನಡೆಯಿತು ನೋಡಿ ವಿಜಯಪುರದ ಅರಳದಿನ್ನಿಯ ಆರಾಧ್ಯ ದೇವಿಯ ಜಾತ್ರಾ (Devi Jatra Festival) ಮಹೋತ್ಸವ.


    ಚಂದ್ರಮ್ಮ ದೇವಿ ಜಾತ್ರೆ
    ಅರಳದಿನ್ನಿ ಗ್ರಾಮದ ಆರಾಧ್ಯದೇವಿ ಚಂದ್ರಗಿರಿಯ ಶ್ರೀ ಚಂದ್ರಮ್ಮ ದೇವಿಯ ಜಾತ್ರೆ ಅಂದ್ರೇನೆ ಸಂಭ್ರಮಕ್ಕೆ ಇನ್ನೊಂದು ಹೆಸರಿದ್ದಂತೆ. ಅಪೂರ್ವ ಕ್ಷಣಗಳಿಗೆ ಸಾಕ್ಷಿಯಾಗುವ ಈ ಜಾತ್ರೆಗೆ ವಿಜಯಪುರ, ಬಾಗಲಕೋಟೆ ಅಷ್ಟೇ ಅಲ್ದೇ, ನೆರೆಯ ಮಹಾರಾಷ್ಟ್ರದ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆಯುತ್ತಾರೆ. ಕೃಷ್ಣಾ ನದಿ ತಟದಲ್ಲಿರುವ ಅರಳದಿನ್ನಿ ಪುಟ್ಟ ಗ್ರಾಮವಾದರೂ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಅಳಿಲುದಿನ್ನಿ ಎಂಬ ಮೂಲ ಹೆಸರು ಜನರ ಬಾಯಲ್ಲಿ ಅರಳದಿನ್ನಿ ಆಗಿ ಬದಲಾಗಿದ್ದು, ಈ ಗ್ರಾಮಕ್ಕೆ ಅದರದ್ದೇ ಆದ ಇತಿಹಾಸವೂ ಇದೆ.


    ವಿಶೇಷ ಪೂಜೆಯ ವೈಭವ
    ಶ್ರೀ ಚಂದ್ರಮ್ಮ ದೇವಿ ದೇವಸ್ಥಾನದ ಜಾತ್ರೆ ಶಿವರಾತ್ರಿ ಅಮವಾಸ್ಯೆಯಾದ ಬಳಿಕ ಎರಡ್ಮೂರು ದಿನಗಳಕಾಲ ಈ ಜಾತ್ರೆ ಬಹಳಷ್ಟು ವಿಜೃಂಭಣೆಯಿಂದ ಜರುಗುತ್ತದೆ. ಬೆಳಗ್ಗೆ ದೇವರ ಮೂರ್ತಿಗೆ ಅಭಿಷೇಕ, ಮಹಾ ಮಂಗಳಾರತಿ ಹೀಗೆ ವಿವಿಧ ಬಗೆಯ ಪೂಜಾ ಕೈಂಕರ್ಯಗಳು ಜರುಗುತ್ತವೆ. ಬಳಿಕ ದೇವಸ್ಥಾನದ ಕುದುರೆ ಸವಾರಿ ಮತ್ತು ಮೆರವಣಿಗೆ ನಡೆಯುತ್ತದೆ. ಗ್ರಾಮದ ಜನರು ವಿಶೇಷ ಪೂಜೆ ಸಲ್ಲಿಸಿ ತೆಂಗಿನಕಾಯಿ ಒಡೆದು ಭಕ್ತಿಭಾವವನ್ನ ಮೆರೆಯುತ್ತಾರೆ.


    ಈ ಊರಲ್ಲಿದೆ ವಿಶಿಷ್ಟ ಆಚರಣೆ
    ವಿಶೇಷ ಅಂದ್ರೆ ಈ ಗ್ರಾಮದ ಯಾವುದೇ ಮನೆಗಳಲ್ಲಿ ಹುಡುಕಿದರು ಒಂದೇ ಒಂದು ಮರದ ಮಂಚ, ಕಟ್ಟಿಗೆಯ ಚೇರ್ ಸಿಗದು. ಇಲ್ಲಿ ಏನೇ ಇದ್ರೂ ನೆಲದ ಮೇಲೆ ಕೂರುವುದು ಪರಂಪರೆಯಾಗಿದೆ. ಬೇರೆ ಎಲ್ಲೆ ಇದೇ ಸಂಪ್ರದಾಯವನ್ನೇ ಪಾಲಿಸುತ್ತಾರೆ. ಅಷ್ಟೇ ಅಲ್ದೇ, ಕುದುರೆ ಸವಾರಿ ಮಾಡುವಂತೆಯೂ ಇಲ್ಲ. ಆದ್ರೆ, ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಹೋದ್ರೆ ಎಲ್ಲವೂ ನಿಗೂಢ.


    ಇದನ್ನೂ ಓದಿ: Vijayapura: ಯಾವ್ದೂ ವೇಸ್ಟ್ ಅಲ್ಲ! ಕಸದಿಂದ ಗೊಬ್ಬರ ತಯಾರಿಸುತ್ತಿದೆ ವಿಜಯಪುರ ಪಾಲಿಕೆ!




    ನೆಲದಲ್ಲೇ ಕೂರುವ ಭಕ್ತರು
    ಇಂತಹ ಸಾಕಷ್ಟು ಕಟ್ಟು ನಿಟ್ಟಿನ ಆಚರಣೆಗೆ ಈ ಗ್ರಾಮದ ಗ್ರಾಮಸ್ಥರು ಸಾಕ್ಷಿಯಾಗಿದ್ದಾರೆ. ಇನ್ನು ಈ ದೇವಿ ಜಾತ್ರೆಗೆ ಬರುವ ಸಾವಿರಾರು ಭಕ್ತರು ಸಹ ನೆಲದ ಮೇಲೆ ಕುಳಿತುಕೊಳ್ಳುತ್ತಾರೆ.


    ಇದನ್ನೂ ಓದಿ: Vijayapura: ಉತ್ತರ ಕರ್ನಾಟಕದಲ್ಲಿ ಈ ಪಾಸಿಟಿವ್ ವಿಷಯಕ್ಕೆ ವಿಜಯಪುರವೇ ಫಸ್ಟ್!


    ಒಟ್ಟಿನಲ್ಲಿ ಚಂದ್ರಗಿರಿಯ ಶ್ರೀಚಂದ್ರಮ್ಮ ದೇವಿ ಜಾತ್ರೆಯು ಭಕ್ತಿ ಭಾವದ ಪರಾಕಾಷ್ಠೆಗೆ, ಅಪಾರ ಸಂಖ್ಯೆಯ ಭಕ್ತರ ಆಗಮನಕ್ಕೆ ಸಾಕ್ಷಿಯಾಯಿತು.


    ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು