• Home
  • »
  • News
  • »
  • vijayapura
  • »
  • Cereal Food Festival: ಬಾಗಲಕೋಟೆಯಲ್ಲಿ ಸಿರಿಧಾನ್ಯಗಳ ಸಂಭ್ರಮ!

Cereal Food Festival: ಬಾಗಲಕೋಟೆಯಲ್ಲಿ ಸಿರಿಧಾನ್ಯಗಳ ಸಂಭ್ರಮ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಎರಡು ದಿನಗಳ ಕಾಲ ನಡೆದ ಸಿರಿಧಾನ್ಯಗಳ ಸಾವಯವ ಮೇಳವು ಸಡಗರ ಸಂಭ್ರಮದಿಂದ ನಡೆಯಿತು. ಆ ಸಂಭ್ರಮಕ್ಕೆ ವಿವಿಧ ಬಗೆಯ ತಿಂಡಿ ತಿನಿಸುಗಳು ಇನ್ನಷ್ಟು ಮೆರುಗು ನೀಡಿದವು.

  • Share this:

    ಬಾಗಲಕೋಟೆ: ವಿವಿಧ ಬಗೆಯ ಕರಿದ ತಿಂಡಿಗಳು, ಟೇಸ್ಟ್ ನೋಡುತ್ತಿರುವ ಜನರು. ಹೀಗೆ ಹತ್ತಾರು ಖಾದ್ಯ, ಬಗೆ ಬಗೆಯ ತಿಂಡಿ ತಿನಿಸುಗಳು ಎಲ್ಲವೂ ಒಂದೇ ಆವರಣದಲ್ಲಿ ಕಂಡುಬಂತು. ಹಾಗಂತ ಇದೇನು ವಾರದ ಸಂತೆಯಲ್ಲ, ಬದಲಿಗೆ ಬಾಗಲಕೋಟೆಯಲ್ಲಿ (Bagalkot News) ನಡೆದ ಸಿರಿಧಾನ್ಯ (Cereal Food Festival) ಮೇಳ. ಹಾಗಿದ್ರೆ ಹೇಗಿತ್ತು ಸಿರಿಧಾನ್ಯಗಳ ಈ ಮೇಳ (Cereal Mela) ಅನ್ನೋದನ್ನ ನೋಡ್ಕೊಂಡು ಬರೋಣ.


    ಹೌದು, ನವನಗರದ ಕಾಳಿದಾಸ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ಎರಡು ದಿನಗಳ ಕಾಲ ಆಹಾರ ಮತ್ತು ಪೌಷ್ಟಿಕ ಭದ್ರತೆಯ ಯೋಜನೆಯಡಿ ಜಿಲ್ಲಾ ಮಟ್ಟದ ಸಿರಿಧಾನ್ಯ ಮೇಳ, ಸಾವಯವ ಸಿರಿಮೇಳ ಮತ್ತು ವಸ್ತು ಪ್ರದರ್ಶನವನ್ನ ಹಮ್ಮಿಕೊಳ್ಳಲಾಗಿತ್ತು.


    ರೈತರಿಂದ ಭಾರೀ ಸ್ಪಂದನೆ
    ವಿಜಯಪುರ, ಬಾಗಲಕೋಟೆ ಜಿಲ್ಲೆಯ ಸುತ್ತಮುತ್ತಲಿನ ಸಹಸ್ರಾರು ಗ್ರಾಮಸ್ಥರು ಈ ಮೇಳದಲ್ಲಿ ಭಾಗಿಯಾಗಿದರು. ಮಣ್ಣಿನ ಫಲವತ್ತತೆ ಕಾಪಾಡಲು ಮತ್ತು ಉತ್ತಮ ಗುಣಮಟ್ಟದ ಸಾವಯವ ಬೆಳೆ, ಉತ್ಪನ್ನ ತಯಾರಕರು ಹಾಗೂ ಖರೀದಿದಾರರಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಸಾವಯವ ಸಿರಿ ಕಾರ್ಯಗಾರ ಮತ್ತು ವಸ್ತು ಪ್ರದರ್ಶನ ನಡೆಯಿತು. ಕಳೆದೆರಡು ವರ್ಷಗಳಿಂದ ಕೋವಿಡ್ ಕಾರಣದಿಂದ ಈ ಮೇಳವು ನಡೆದಿರಲಿಲ್ಲ. ಹೀಗಾಗಿ ಈ ವರ್ಷ ರೈತರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಇದೇ ವೇಳೆ ಸ್ಥಳೀಯರಿಗಾಗಿ ವಿವಿಧ ಸಿರಿಧಾನ್ಯವನ್ನ ಬಳಸಿ ತಮಗಿಷ್ಟವಾಗುವ ಚಿತ್ರವನ್ನ ಬಿಡಿಸಿ ಮಹಿಳೆಯರು ಸಂಭ್ರಮಪಟ್ಟರು.




    ಈ ಭಾಗಗಳಿಂದಲೂ ಆಗಮಿಸಿದ್ದ ರೈತರು, ಮಹಿಳೆಯರು
    ಇನ್ನು ಸಾವಯವ ಕೃಷಿ ಹಾಗೂ ಸಿರಿಧಾನ್ಯ ಮೇಳದಲ್ಲಿ ನೂರಾರು ಮಳಿಗೆಯನ್ನು ತೆರೆಯಲಾಗಿತ್ತು. ಬಾಗಲಕೋಟೆ, ವಿಜಯಪುರ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಹುಬ್ಬಳ್ಳಿ ಸೇರಿದಂತೆ ನಾನಾ ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಗಮಿಸಿದ 5 ಸಾವಿರಕ್ಕೂ ಹೆಚ್ಚು ರೈತರು, ರೈತ ಮಹಿಳೆಯರು ಮಳಿಗೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುವುದರೊಂದಿಗೆ ಮಳಿಗೆಯಲ್ಲಿ ಸಿಗುವ ವಿವಿಧ ಖಾದ್ಯವನ್ನ ಸವಿಯುವುದರೊಂದಿಗೆ ಹೆಜ್ಜೆಹಾಕುವುದು ಕಂಡುಬಂತು.


    ಇದನ್ನೂ ಓದಿ: ಬನದ ಹುಣ್ಣಿಮೆ ಸಂಭ್ರಮದಲ್ಲಿ ಯಲ್ಲಮ್ಮ ತಾಯಿಗೆ ಉಧೋ.. ಉಧೋ..!


    ಸಿರಿಧಾನ್ಯಗಳಿಂದಲೇ ಇಷ್ಟೊಂದು ತಿಂಡಿ ತಯಾರಿ
    ಮಹಿಳಾ ಸ್ವಸಹಾಯ ಸಂಘದ ಮಹಿಳೆಯರು ಸಾವಯ ಕೃಷಿಯಲ್ಲಿ ಬೆಳೆದ ಸಿರಿಧಾನ್ಯವನ್ನ ಬಳಸಿ ತಯಾರಿಸಿದ ಶಂಕರಪೋಳೆ, ಶೇವು-ಖಾರ, ನೆವನಕ್ಕಿಯಲ್ಲಿ ತಯಾರಿಸಿದ ಕೋಡುಬಳೆ, ಸಾವಯವ ಬೆಲ್ಲದಿಂದ ತಯಾರಿಸಿದ ಬೂಂದಿ, ಬರಗುದಿಂದ ತಯಾರಿಸಿದ ಚಕ್ಕುಲಿ, ದೇಶಿ ತಳಿಯ ಆಕಳುಗಳ ತುಪ್ಪದಿಂದ ತಾಯಾರಿಸಿದ ಕವಾ ಪೇಡೆ, ಅಕ್ಕಿಯಿಂದ ತಯಾರಿಸಿದ ಅವಲಕ್ಕಿ ಖಾರ, ಹೀಗೆ ನೂರಾರು ಬಗೆ ಬಗೆಯ ತಿಂಡಿ ತಿನುಸುಗಳು ಈ ಮೇಳದಲ್ಲಿ ರೈತರ ಮೆಚ್ಚುಗೆ ಪಡೆಯಿತು. ನೆರೆದವರೆಲ್ಲರೂ ಈ ತಿಂಡಿಗಳಿಗೆ ಆಕರ್ಷಿತರಾದರು.


    ಇದನ್ನೂ ಓದಿ: Vijayapura: ಬಿರಿಯಾನಿ, ಸಮೋಸಾ ತಯಾರಿಸಿದ ವಿದ್ಯಾರ್ಥಿಗಳು! ಇದು ಮಕ್ಕಳ ಆಹಾರ ಮೇಳದ ಸ್ಪೆಷಲ್


    ಒಟ್ಟಿನಲ್ಲಿ ಎರಡು ದಿನಗಳ ಕಾಲ ನಡೆದ ಸಿರಿಧಾನ್ಯಗಳ ಸಾವಯವ ಮೇಳವು ಸಡಗರ ಸಂಭ್ರಮದಿಂದ ನಡೆಯಿತು. ಆ ಸಂಭ್ರಮಕ್ಕೆ ವಿವಿಧ ಬಗೆಯ ತಿಂಡಿ ತಿನಿಸುಗಳು ಇನ್ನಷ್ಟು ಮೆರುಗು ನೀಡಿದವು.


    ವರದಿ: ಪ್ರಶಾಂತ ಹೂಗಾರ, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: