• Home
  • »
  • News
  • »
  • vijayapura
  • »
  • Farmers Award: ಕೃಷಿಕರೇ ಗಮನಿಸಿ; ಶ್ರೇಷ್ಠ ರೈತ, ರೈತ ಮಹಿಳೆ ಪ್ರಶಸ್ತಿಗೆ ಅರ್ಜಿ ಆಹ್ವಾನ

Farmers Award: ಕೃಷಿಕರೇ ಗಮನಿಸಿ; ಶ್ರೇಷ್ಠ ರೈತ, ರೈತ ಮಹಿಳೆ ಪ್ರಶಸ್ತಿಗೆ ಅರ್ಜಿ ಆಹ್ವಾನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬಾಗಲಕೋಟೆ ಮತ್ತು ವಿಜಯಪುರ ಈ ಅವಳಿ ಜಿಲ್ಲೆಗಳಲ್ಲಿ ಸಾಕಷ್ಟು ಜನ ಯುವ ರೈತರು ಕೃಷಿ ಕ್ಷೇತ್ರದಲ್ಲಿ ವಿಭಿನ್ನವಾಗಿ ಸಾಧನೆ ಮಾಡಿದ್ದಾರೆ. ಅಂತಹ ಕೃಷಿಕರಿಗೆ ಇಲ್ಲಿದೆ ಖುಷಿಸುದ್ದಿ.

  • News18 Kannada
  • Last Updated :
  • Bijapur, India
  • Share this:

    ಬಾಗಲಕೋಟೆ : ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆಯಲ್ಲಿ 2022-23ನೇಸಾಲಿನ ಡಿಸೆಂಬರ್ 23 ರಿಂದ 25 ರ ವರೆಗೆ ತೋಟಗಾರಿಕೆ ಮೇಳವನ್ನು ಮುಖ್ಯ ಆವರಣದಲ್ಲಿ ಹಮ್ಮಿಕೊಂಡಿದೆ. ಈ ತೋಟಗಾರಿಕೆ ಮೇಳದಲ್ಲಿ (Horticulture Fair) ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆಯ (Bagalkot Farmers) ವ್ಯಾಪ್ತಿಯಲ್ಲಿ ಬರುವ ರಾಜ್ಯದ 24 ಜಿಲ್ಲೆಗಳಿಗೆ ಪ್ರತಿ ಜಿಲ್ಲೆಗೆ ಒಬ್ಬರಂತೆ ಶ್ರೇಷ್ಠ ತೋಟಗಾರಿಕೆ ರೈತ, ರೈತ ಮಹಿಳೆಯರನ್ನು ಆಯ್ಕೆ ಮಾಡಿ ಸೂಕ್ತ ಬಹುಮಾನದೊಂದಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.


    ಬಾಗಲಕೋಟೆ ಮತ್ತು ವಿಜಯಪುರ ಈ ಅವಳಿ ಜಿಲ್ಲೆಗಳಲ್ಲಿ ಸಾಕಷ್ಟು ಜನ ಯುವ ರೈತರು ಕೃಷಿ ಕ್ಷೇತ್ರದಲ್ಲಿ ವಿಭಿನ್ನವಾಗಿ ಸಾಧನೆ ಮಾಡಿದ್ದಾರೆ. ಅವರು ಸಹ ಅರ್ಜಿಯನ್ನ ಸಲ್ಲಿಸಬಹುದು. ಜೊತೆಗೆ ಮಹಿಳೆಯರು ಸಹ ವಿಶೇಷವಾಗಿ ಸಾಧನೆಗೈದ ಮಹಿಳೆಯರು ಇದರ ಸದುಪಯೋಗವನ್ನ ಪಡೆದುಕೊಳ್ಳಬಹುದಾಗಿದೆ.


    ಹೇಗೆ ಅರ್ಜಿ ಸಲ್ಲಿಸಬೇಕು?
    ಈ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಲು ಬಯಸುವ ವಿಜಯಪುರ ಜಿಲ್ಲೆಯ ರೈತ, ರೈತ ಮಹಿಳೆಯರು ಅರ್ಜಿ ನಮೂನೆಯನ್ನು ಈ ಕೆಳಗೆ ತಿಳಿಸಿದ ವಿಳಾಸದಿಂದ ಅಥವಾ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆಯ ವೆಬ್‌ಸೈಟ್​ನಲ್ಲಿ ಪಡೆದುಕೊಳ್ಳಬಹುದು. ಅರ್ಜಿ ನಮೂನೆಗಾಗಿ ಇಲ್ಲಿ ಕ್ಲಿಕ್ ಮಾಡಿ


    ಇದನ್ನೂ ಓದಿ: Best Waterfalls Uttara Karnataka: ಬಾಗಲಕೋಟೆಯ ಅದ್ಭುತ ಜಲಪಾತ! ಪ್ರಕೃತಿ ಸೌಂದರ್ಯದ ವೈಭವ


    ಹಾಗೂ ಭರ್ತಿ ಮಾಡಿದ ಅರ್ಜಿಯನ್ನು 10ನೇ ನವೆಂಬರ್ 2022 ರೊಳಗಾಗಿ ಮುಖ್ಯಸ್ಥರು, ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ತಿಡಗುಂದಿ-586119, ಜಿಲ್ಲೆ: ವಿಜಯಪುರ ಸಂಪರ್ಕ ಸಂಖ್ಯೆ 9480696390 /9448418501  ಅಥವಾ hrectidagu ndi@uhsbagalkot.edu.in heeu.vijaya ಅಥವಾ pur@uhsba galkot.edu.in ವಿಳಾಸಕ್ಕೆ ಸಲ್ಲಿಸಬೇಕು.


    ಇದನ್ನೂ ಓದಿ: Plastic Rice: ಇದು ಪ್ಲಾಸ್ಟಿಕ್ ಅಕ್ಕಿ ಅಲ್ಲ, ಭಯವಿಲ್ಲದೇ ಊಟಮಾಡಿ; ಜಿಲ್ಲಾಧಿಕಾರಿ ಅಭಯ


    ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9480696390 ಅಥವಾ 9448418501  ಅಥವಾ ಶುಲ್ಕ ರಹಿತ ಉದ್ಯಾನ ಸಹಾಯವಾಣಿ 1800-425-7910 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ.


    ವರದಿ: ಪ್ರಶಾಂತ ಹೂಗಾರ, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: