• Home
 • »
 • News
 • »
 • vijayapura
 • »
 • Bengaluru To Pune: 50 ಸಾವಿರ ಕೋಟಿಯ ಬೆಂಗಳೂರು-ಪುಣೆ ಸೂಪರ್ ಎಕ್ಸ್​ಪ್ರೆಸ್ ಹೈವೆ; ಈ ಜಿಲ್ಲೆಗಳಿಗೂ ಅನುಕೂಲ

Bengaluru To Pune: 50 ಸಾವಿರ ಕೋಟಿಯ ಬೆಂಗಳೂರು-ಪುಣೆ ಸೂಪರ್ ಎಕ್ಸ್​ಪ್ರೆಸ್ ಹೈವೆ; ಈ ಜಿಲ್ಲೆಗಳಿಗೂ ಅನುಕೂಲ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕರ್ನಾಟಕದ ಬೆಂಗಳೂರು, ತುಮಕೂರು, ಚಿತ್ರದುರ್ಗ, ದಾವಣಗೆರೆ, ವಿಜಯನಗರ, ಕೊಪ್ಪಳ, ಗದಗ, ಬಾಗಲಕೋಟೆ, ಬೆಳಗಾವಿ, ಮಹಾರಾಷ್ಟ್ರದ ಸಾಂಗ್ಲಿ, ಸಾತಾರಾ, ಪುಣೆ ವರೆಗೆ ಈ ಹೆದ್ದಾರಿ ನಿರ್ಮಾಣವಾಗಲಿದೆ.

 • News18 Kannada
 • Last Updated :
 • Bangalore [Bangalore], India
 • Share this:

  ಬಾಗಲಕೋಟೆ : ಮಹಾನಗರ ಬೆಂಗಳೂರು ಟು ಪುಣೆ ನಡುವೆ ಸೂಪರ್ ಎಕ್ಸ್ ಪ್ರೆಸ್ (Bengaluru To Pune Super Expressway)  ಹೈವೇ ನಿರ್ಮಾಣವನ್ನ ಮಾಡಲು ಕೇಂದ್ರ ಸರ್ಕಾರ (Central Government) ನಿರ್ಧರಿಸಿದೆ. ಅಂದಾಜು 50 ಸಾವಿರ ಕೋಟಿ ರೂಪಾಯಿ ಖರ್ಚಿನಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬರಲಿದೆ. ಕಡಿಮೆ ಸಮಯದಲ್ಲಿ ಸುರಕ್ಷಿತವಾಗಿ ಒಂದು ಕಡೆಯಿಂದ ಇನ್ನೊಂದು ಕಡೆ ತಲುಪಲು, ಮತ್ತು ರಸ್ತೆ ಅಪಘಾತವನ್ನ ತಪ್ಪಿಸಲು, ಅಲ್ಲಲ್ಲಿ ಆಗುತ್ತಿದ್ದ ಟ್ರಾಫಿಕ್ ಜಾಮ್, ಮುಂತಾದ ಕಿರಿಕಿರಿಗಳನ್ನು ತಪ್ಪಿಸಲು ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಿದೆ. ಇದರಿಂದ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಸಾರ್ವಜನಿಕರಿಗೂ ಅನುಕೂಲವಾಗಲಿದೆ.


  ಮಹಾರಾಷ್ಟ್ರದ ಪುಣೆ ಬಳಿಯ ಕುರ್ಸೆಯಿಂದ ಆರಂಭಗೊಳ್ಳಲಿರುವ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರಸ್ತೆ ಬೆಂಗಳೂರು ಬಳಿಯ ಮುತಗಡಹಳ್ಳಿಯಲ್ಲಿ ಕೊನೆಗೊಳ್ಳಲಿದೆ. ಈಗಾಗಲೇ ರಸ್ತೆ ನಿರ್ಮಾಣಕ್ಕೆ ಪೂರ್ವಭಾವಿಯಾಗಿ ನಡೆಸುವ ಸಮೀಕ್ಷೆ ಹಾಗೂ ಅಗತ್ಯ ರಸ್ತೆ ಜೋಡಣೆಗೆ ರಸ್ತೆ ಪ್ರಾಧಿಕಾರದಿಂದ ಅನುಮೋದನೆ ನೀಡಲಾಗಿದೆ. ಈಗಾಗಲೇ ಸಮಗ್ರ ಯೋಜನಾ ವರದಿ ಸಿದ್ಧಗೊಳ್ಳುತ್ತಿದ್ದು, ಅಂತಿಮ ಪ್ರಸ್ತಾವನೆ ಮುಂದಿನ ತಿಂಗಳಲ್ಲಿ ಕೇಂದ್ರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಲ್ಲಿಕೆಯಾಗುವ ಸಾಧ್ಯತೆ ಹೆಚ್ಚಿದೆ.


  ಈ ಸೂಪರ್​ಹೈವೆಯಲ್ಲಿ ಇವೆಲ್ಲ ಇರಲಿದೆ
  ಈ ಯೋಜನೆಯಡಿ 6 ರೈಲ್ವೇ ಓವರ್ ಬ್ರಿಡ್ಜ್, 14 ಕ್ರಾಸಿಂಗ್ ಪಾಯಿಂಟ್​ಗಳು, 22 ಇಂಟರ್ ಚೇಂಜ್​ಗಳು, 55 ಮೇಲ್ಸೇತುವೆ ನಿರ್ಮಿಸಲಾಗುತ್ತದೆ. ಹೆದ್ದಾರಿಯ ಎರಡೂ ಪಕ್ಕದಲ್ಲಿ ಸಾಲುಮರಗಳನ್ನು ಬೆಳೆಸಲು ನಿರ್ಧರಿಸಲಾಗಿದೆ. ವೇದಾವತಿ, ಚಿಕ್ಕಹಗರಿ, ತುಂಗಭದ್ರಾ, ಮಲಪ್ರಭಾ, ಘಟಪ್ರಭಾ, ಕೃಷ್ಣಾ, ಅಗ್ರಾಣಿ, ಚಂದನದಿ, ಯರಳ, ನೀರಾ ನದಿಗಳ ಮೂಲಕ ಈ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಲಿದ್ದು ಈ ಎಲ್ಲ ನದಿಗಳಿಗೂ ಅಡ್ಡಲಾಗಿ ಸೇತುವೆಗಳನ್ನ ನಿರ್ಮಾಣ ಮಾಡಲಾಗುತ್ತದೆ.


  ಬಾಗಲಕೋಟೆ – ವಿಜಯಪುರ ಜಿಲ್ಲೆಯ ಜನರಿಗೆ ಇಷ್ಟೆಲ್ಲ ಅನುಕೂಲ
  ಅವಳಿ ಜಿಲ್ಲೆಗಳಲ್ಲಿ ಹೆಚ್ಚಾಗಿ ತೋಟಗಾರಿಕೆ ಬೆಳೆಗಳಾದ ಹೂವು, ಹಣ್ಣು, ತರಕಾರಿಯನ್ನ ಬೆಳೆಯಲಾಗುತ್ತದೆ. ಇಲ್ಲಿ ಬೆಳೆಯುವ ತರಕಾರಿ ಮತ್ತು ಹಣ್ಣುಗಳನ್ನ ಹೆಚ್ಚಾಗಿ ಮಹಾರಾಷ್ಟ್ರ ಮತ್ತು ಬೆಂಗಳೂರಿಗೆ ಸಾಗಿಸಲಾಗುತ್ತದೆ.


  ಇದನ್ನೂ ಓದಿ: Vande Bharat vs Shatabdi: ಮೈಸೂರು-ಬೆಂಗಳೂರು-ಚೆನ್ನೈ ಓಡಾಟಕ್ಕೆ ಈ 2 ರೈಲುಗಳೇ ಬೆಸ್ಟ್!


  ಇನ್ನೂ ಕೆಲ ರೈತರು ಉತ್ತಮ ಬೆಳೆಯನ್ನ ಮುಂಬೈ, ಬೆಂಗಳೂರಿಗೆ ಸಾಗಿಸಿ ಅಲ್ಲಿಂದ ವಿದೇಶಕ್ಕೆ ರಫ್ತು ಮಾಡುತ್ತಾರೆ. ಅಂತಹ ರೈತರಿಗೆ ಈ ಹೆದ್ದಾರಿ ಕಡಿಮೆ ಅವಧಿಯಲ್ಲಿ ಸಾಗಿಸಲು ಉಪಯೋಗಕ್ಕೆ ಬರಲಿದೆ. ಸೂಪರ್ ಎಕ್ಸ್ ಪ್ರೆಸ್ ಹೈವೇ ನಿರ್ಮಾಣವಾದಲ್ಲಿ ಒಟ್ಟು 12 ಜಿಲ್ಲೆಗಳ ಜನರಿಗೆ ಅನುಕೂಲವಾಗುದಂತೂ ಪಕ್ಕಾ.


  ಇದನ್ನೂ ಓದಿ: Rajyotsava Award: ಸಾಲುಮರದ ನಿಂಗಣ್ಣ, ಭೂಮಾಲಿಕ ಮೋಸ ಮಾಡಿದರೂ ಕೈ ಬಿಡಲಿಲ್ಲ ಪ್ರಕೃತಿ ಮಾತೆ!


  ಕರ್ನಾಟಕದ ಬೆಂಗಳೂರು, ತುಮಕೂರು, ಚಿತ್ರದುರ್ಗ, ದಾವಣಗೆರೆ, ವಿಜಯನಗರ, ಕೊಪ್ಪಳ, ಗದಗ, ಬಾಗಲಕೋಟೆ, ಬೆಳಗಾವಿ, ಮಹಾರಾಷ್ಟ್ರದ ಸಾಂಗ್ಲಿ, ಸಾತಾರಾ, ಪುಣೆ ವರೆಗೆ ಈ ಹೆದ್ದಾರಿ ನಿರ್ಮಾಣವಾಗಲಿದೆ ಎಂದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಮೂಲಗಳು ಮಾಹಿತಿ ನೀಡಿವೆ.


  ವರದಿ:  ಪ್ರಶಾಂತ ಹೂಗಾರ, ನ್ಯೂಸ್18 ಕನ್ನಡ ವಿಜಯಪುರ

  Published by:ಗುರುಗಣೇಶ ಡಬ್ಗುಳಿ
  First published: