• Home
 • »
 • News
 • »
 • vijayapura
 • »
 • Bara Kaman: ಬಾರಾ ಕಮಾನ್​ ಎಷ್ಟು ಸಖತ್ ಗೊತ್ತಾ? ಇಲ್ಲಿದೆ ನೋಡಿ

Bara Kaman: ಬಾರಾ ಕಮಾನ್​ ಎಷ್ಟು ಸಖತ್ ಗೊತ್ತಾ? ಇಲ್ಲಿದೆ ನೋಡಿ

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ದಕ್ಷಿಣ ಭಾರತದ ತಾಜ್ ಮಹಲ್ ಎಂದೇ ಹೆಸರಾದ ಭವ್ಯವಾದ ಮಸೀದಿ ಮತ್ತು ಗೋರಿಯ ಹೊಂದಿರುವ ಆಕರ್ಷಕ ತಾಣ. ಇಳಿ ಸಂಜೆ ಇತ್ತ ಕಡೆ ಹೋದ್ರೆ ವಾಪಸ್ ಬರಲು ಮನಸ್ಸೇ ಆಗದು.

 • News18 Kannada
 • Last Updated :
 • Bijapur, India
 • Share this:

  ವಿಜಯಪುರ ಅಂದ್ರೇನೆ (Vijayapura Travel Plan) ಹಾಗೆ, ಹತ್ತು ಹಲವು ಪ್ರವಾಸಿ ಸ್ಥಳಗಳ ಆಗರ. ಸುತ್ತಾಡೋಕೆ ಒಂದೆರ್ಡು ದಿನ ಸಾಲೋದೇ ಇಲ್ಲ! ಗೋಲ ಗುಂಬಜ್, ಶಿವಗಿರಿ ಮಾತ್ರವಲ್ಲ ಇನ್ನೂ ಹಲವು ನೋಡ್ಲೇಬೇಕಾದ ಸ್ಥಳಗಳ ಆಯಸ್ಕಾಂತದಂತೆ ಆಕರ್ಷಿಸ್ತವೆ. ಅಂತಹ ಒಂದೊಂದೇ ಪ್ರವಾಸಿ ಸ್ಥಳವನ್ನ ನಾವ್ ನಿಮ್ಮ ಮುಂದಿಡ್ತಿದ್ದೀವಿ ನೋಡಿ. ಇದುವೇ ನೋಡಿ ಬಾರಾಕಮಾನ್. ಎರಡನೇ ಅಲಿ ಆದಿಲ್ ಷಾ ನಿರ್ಮಿಸಿದ ಅಪೂರ್ಣವಾದ ಭವ್ಯ ಗೋರಿ (Bara Kaman) ಇದು . ಈ ಕಟ್ಟಡವು 12 ಆಕರ್ಷಕ ಕಮಾನುಗಳನ್ನು ಹೊಂದಿದೆ. ಅತ್ಯಾಕರ್ಷಕ, ಫೋಟೋಶೂಟ್​ಗೆ ಹೇಳಿ ಮಾಡಿಸಿದ ಸ್ಥಳ ಈ ಬಾರಾ ಕಮಾನ್. ಅನಿಮಲ್ ಸಫಾರಿ, ಹಾಟ್ ಏರ್ ಬಲೂನಿಂಗ್, ಪ್ಯಾರಾಗ್ಲೈಡಿಂಗ್​ನಂತಹ ಸಖತ್ ಆ್ಯಕ್ಟಿವಿಟಿಗಳನ್ನೂ ನೀವಿಲ್ಲಿ ಮಾಡಬಹುದು.


  ಬಾರಾ ಕಮಾನ್ ನೋಡಿದ್ರಲ್ಲ, ಈಗ್ನೋಡಿ ಈ ಗಗನ್ ಮಹಲ್. ಅತ್ಯಾಕರ್ಷಕ ನಿರ್ಮಾಣದ ಈ ಕಟ್ಟಡ ಎಂತವರನ್ನೂ ಕೈಬೀಸಿ ಕರೆಯುತ್ತೆ. ಈ ಕಟ್ಟಡವೂ ಅಷ್ಟೇ ವಾಯು ವಿಹಾರ, ಫೋಟೋಶೂಟ್ಗೆ ಹೇಳಿಟ್ಟ ಸ್ಪಾಟ್.. 1561 ರ ಸುಮಾರಿಗೆ ಒಂದನೇ ಅಲಿ ಆದಿಲ್ ಷಾ ರಾಜನ ನಿವಾಸ ಮತ್ತು ದರ್ಬಾರ್ ಹಾಲ್ ಎರಡರ ಉದ್ದೇಶವನ್ನೂ ಪೂರೈಸಲು ನಿರ್ಮಿಸಿದ ಕಟ್ಟಡವಿದು. ಈ ಅರಮನೆಯ ಮುಖ್ಯ ವೈಶಿಷ್ಟ್ಯವೆಂದರೆ ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪ. ಇದರ ದೊಡ್ಡ ಕೇಂದ್ರ ಕಮಾನು, ಸುಮಾರು 60 ಅಡಿ 9 ಇಂಚುಗಳಷ್ಟು ವಿಸ್ತಾರವನ್ನು ಹೊಂದಿದೆ.


  ಇದನ್ನೂ ಓದಿ: Positive Story: ಲಕ್ಷ ಲಕ್ಷ ಸ್ವಂತ ಹಣದಲ್ಲಿ ಊರು ಕ್ಲೀನ್ ಮಾಡೋ ವಿಜಯಪುರದ ಯುವಕರು!


  ಇನ್ನು ವಿಜಯಪುರದಲ್ಲಿ ನೀವು ಈ ಕಟ್ಟಡವನ್ನು ನೋಡ್ಲೇಬೇಕು. ಕೇವಲ 25 ರೂಪಾಯಿ ಟಿಕೇಟ್ ಪಡೆದುಕೊಂಡ್ರೆ ಸಾಕು. ಹೌದು, ಅದುವೇ ಇಬ್ರಾಹಿಂ ರೋಜಾ. ದಕ್ಷಿಣ ಭಾರತದ ತಾಜ್ ಮಹಲ್ ಎಂದೇ ಹೆಸರಾದ ಭವ್ಯವಾದ ಮಸೀದಿ ಮತ್ತು ಗೋರಿಯ ಹೊಂದಿರುವ ಆಕರ್ಷಕ ತಾಣ. ಇಳಿ ಸಂಜೆ ಇತ್ತ ಕಡೆ ಹೋದ್ರೆ ವಾಪಸ್ ಬರಲು ಮನಸ್ಸೇ ಆಗದು.


  ಇದನ್ನೂ ಓದಿ: Bagalakote Viral Video: ಕೃಷ್ಣಾ ನದಿಯಲ್ಲಿ ಟ್ರ್ಯಾಕ್ಟರ್ ತೇಲುತ್ತೆ! ಕಬ್ಬು ಅತ್ತಂದಿತ್ತ ದಾಟುತ್ತೆ!


  ಹೀಗೆ ವಿಜಯಪುರ ಸುತ್ತಾಡಿದ್ರೆ ದಿನಗಳೇ ಸಾಲದು. ಅಷ್ಟೊಂದು ಸ್ಮಾರಕ, ಕಟ್ಟಡಗಳಿವೆ. ಒಳ್ಳೆ ಪ್ಲಾನ್ ಮಾಡ್ಕೊಂಡು ಒಮ್ಮೆ ನೀವೂ ನಮ್ ವಿಜಯಪುರ ಸುತ್ತಾಡೋಕೆ ತಪ್ದೇ ಬರ್ತೀರಲ್ವಾ?


  ವರದಿ: ಪ್ರಶಾಂತ ಹೂಗಾರ್, ವಿಜಯಪುರ

  Published by:ಗುರುಗಣೇಶ ಡಬ್ಗುಳಿ
  First published: