• Home
  • »
  • News
  • »
  • vijayapura
  • »
  • Banashankari Rathotsava: ಬನಶಂಕರಿ ದೇವಿಯ ವೈಭವದ ಜಾತ್ರೆಗೆ ಸಾಟಿಯೇ ಇಲ್ಲ! ನೀವೂ ನೋಡಿ

Banashankari Rathotsava: ಬನಶಂಕರಿ ದೇವಿಯ ವೈಭವದ ಜಾತ್ರೆಗೆ ಸಾಟಿಯೇ ಇಲ್ಲ! ನೀವೂ ನೋಡಿ

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಇತಿಹಾಸ ಪ್ರಸಿದ್ಧ ಬನಶಂಕರಿ ದೇವಿ ಜಾತ್ರೆ ಸಂಭ್ರಮ ಸಡಗರದಿಂದ ನಡೆಯಿತು. ಇಡೀ ವಿಜಯಪುರವೇ ವಿಜಯಪುರವೇ ದೇವಿಯ ಜಾತ್ರೆಗೆ ಸಾಕ್ಷಿಯಾಯ್ತು.

  • News18 Kannada
  • Last Updated :
  • Bijapur, India
  • Share this:

    ವಿಜಯಪುರ: ಕೇಕೆ ಹಾಕೋದೇನು, ಉತ್ತತ್ತಿ, ಬಾಳೆಹಣ್ಣು ಹಾರಿಸಿ ಭಕ್ತಿ ಮೆರೆಯೋದೇನು! ಹೀಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು ನೋಡಿ ಇತಿಹಾಸ ಪ್ರಸಿದ್ಧ ಬನಶಂಕರಿ ದೇವಿ (Banshankari Devi) ಜಾತ್ರೆ. ಶಕ್ತಿದೇವತೆಯ ಜಾತ್ರೆಗೆ ಬಂದವರ ಸಂಭ್ರಮ ಇಮ್ಮಡಿಯಾಗಿತ್ತು, ಪೂಜೆ ಪುನಸ್ಕಾರ, ಅಭಿಷೇಕಗಳನ್ನು ನೆರವೇರಿಸಿ ಭಕ್ತರು ಕೃತಾರ್ಥವಾಯಿತು. ವಿಜಯಪುರ ಜಿಲ್ಲೆಯ ಪವಿತ್ರ ಪುಣ್ಯಕ್ಷೇತ್ರಗಳಲ್ಲೊಂದಾದ ನಿಡಗುಂದಿ ಪಟ್ಟಣದ (Nidagundi) ಬನಶಂಕರಿದೇವಿ ಜಾತ್ರೆಯ ರಥೋತ್ಸವ (Banashankari Temple Rathotsav) ಸಂಭ್ರಮ ಸಡಗರದಿಂದ ಜರುಗಿತು. ಗೌರಿ ಹುಣ್ಣಿಮೆಯಾದ 5ನೇ ದಿನಕ್ಕೆ ಈ ಜಾತ್ರೆ ಆರಂಭಗೊಳ್ಳುತ್ತೆ.


    ಸ್ಥಳೀಯ ನಿವಾಸಿಗಳು ಉದ್ಯೋಗ ಅರಸಿ ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ಹಲವೆಡೆ ಗುಳೆ ಹೋಗಿರ್ತಾರೆ. ಈ ಬನಶಂಕರಿ ದೇವಿ ಜಾತ್ರೆ ಬಂತೆಂದರೆ ಸಾಕು ಊರಿನತ್ತ ಮುಖ ಮಾಡ್ತಾರೆ. ಜಾತ್ರೆಯ ದಿನದಂದು ಬೆಳಗ್ಗೆಯಿಂದ ಬನಶಂಕರಿ ದೇವಿಗೆ ಕುಂಭಾಭಿಷೇಕ, ವಿಶೇಷ ಪೂಜೆ, ಅಭಿಷೇಕ ಜರುಗುತ್ತೆ. ಭಕ್ತರು ತೆಂಗಿನಕಾಯಿ, ನೈವೇದ್ಯ ಅರ್ಪಿಸಿ ದೇವಿಯ ದರ್ಶನವನ್ನ ಪಡೆದು ಪುನೀತರಾಗ್ತಾರೆ.


    ವಾದ್ಯಮೇಳ, ಡೊಳ್ಳುಗಳ ನಿನಾದದ ಮಧ್ಯೆ ಮೆರವಣಿಗೆ
    ರಥದ ಕಳಶವನ್ನು ಬೆಳಗ್ಗೆ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ಮಾಡಿ ಕಳಸದಕಟ್ಟೆ ಹತ್ತಿರ ತರಲಾಯ್ತು. ಕಳಸ ಆಗಮಿಸುತ್ತಿದ್ದಂತೆ ಭಕ್ತರು ದಾರಿಯುದ್ದಕ್ಕೂ ಹೂವು ಹಣ್ಣುಗಳನ್ನ ಸಮರ್ಪಿಸಿದ್ರು. ಸಂಜೆ ಕಳಶವನ್ನು ವಾದ್ಯಮೇಳ, ಡೊಳ್ಳುಗಳ ನಿನಾದದ ಮಧ್ಯೆ ಮೆರವಣಿಗೆ ಮೂಲಕ ರಥದ ಹತ್ತಿರ ತರಲಾಯ್ತು.


    ಭಕ್ತರ ಘೋಷಣೆ, ಸಂಭ್ರಮ ಮುಗಿಲು ಮುಟ್ಟಿತ್ತು
    ಭಕ್ತರೆಲ್ರೂ ಕಳಶದ ಪೂಜೆ ಸಲ್ಲಿಸಿ, ಹೂಮಾಲೆ ಅರ್ಪಿಸಿದ್ರು. ಜಾತ್ರೆಯ ಅಂಗವಾಗಿ ರಥವನ್ನು ವಿಶೇಷವಾಗಿ ಬಗೆ ಬಗೆಯ ಹೂವುಗಳಿಂದ ಸಿಂಗರಿಸಲಾಯ್ತು. ರಥೋತ್ಸವ ಜರುಗುವಾಗ ಭಕ್ತರ ಘೋಷಣೆ, ಸಂಭ್ರಮ ಮುಗಿಲು ಮುಟ್ಟಿತ್ತು. ಎಲ್ಲೆಡೆಯೂ ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಹಾರಿಸಿ ಭಕ್ತಿಭಾವವನ್ನ ಮೆರೆದರು.


    ಇದನ್ನೂ ಓದಿ:Startup Success Story: ಗಾಣದಿಂದ ಎಣ್ಣೆ ಉತ್ಪಾದಿಸೋ ಬಾಗಲಕೋಟೆಯ ಸ್ಟಾರ್ಟ್​ಅಪ್; ಸಾಂಪ್ರದಾಯಕ ಉದ್ಯಮಕ್ಕೆ ಆಧುನಿಕ ಟಚ್


    ದೇವಸ್ಥಾನ ಗೋಪುರಕ್ಕೆ ವಿದ್ಯುತ್ ದೀಪಾಲಂಕಾರವನ್ನ ಮಾಡಲಾಗಿತ್ತು. ಗೋಪುರದ ಕಳಸ ಸೇರಿದಂತೆ ನಾನಾ ಕಡೆಗಳಲ್ಲಿ ಝಗಮಗಿಸುವ ಬಣ್ಣಬಣ್ಣದ ವಿದ್ಯುತ್ ಲೈಟಿಂಗ್ ಎಲ್ಲರ ಗಮನಸೆಳೆಯಿತು. ಜಾತ್ರೆಯ ಅಂಗಡಿಗಳಿಗಂತೂ ಜನ ಮುಗಿಬಿದ್ದಿದ್ದರು. ಮಕ್ಕಳು ಆಟವಾಡುತ್ತಾ ಸಂಭ್ರಮಿಸಿದ್ರೆ, ಹೆಣ್ಮಕ್ಕಳು ಬಳೆ ಅಂಗಡಿಯಲ್ಲಿ ತಮ್ಮಿಷ್ಟ ಬಳೆಗಳನ್ನು ಖರೀದಿಸಿದ್ರು. ಇನ್ನು ಮಹಿಳೆಯರು, ಹಿರಿಯರು ಸಿಹಿ ತಿಂಡಿಗಳನ್ನು ಕೊಂಡೊಯ್ದರು.


    ಇದನ್ನೂ ಓದಿ: Bagalakote: ಧಾರ್ಮಿಕ ಸಂಪ್ರದಾಯಗಳಿಗೆ ಈ ಕೊಳದ ನೀರೇ ಬೇಕಂತೆ! ವಿಜಯ ಮಹಾಂತ ತೀರ್ಥದ ವಿಶೇಷವಿದು


    ಹೀಗೆ ಇತಿಹಾಸ ಪ್ರಸಿದ್ಧ ಬನಶಂಕರಿ ದೇವಿ ಜಾತ್ರೆ ಸಂಭ್ರಮ ಸಡಗರದಿಂದ ನಡೆಯಿತು. ಇಡೀ ವಿಜಯಪುರವೇ ವಿಜಯಪುರವೇ ದೇವಿಯ ಜಾತ್ರೆಗೆ ಸಾಕ್ಷಿಯಾಯ್ತು.


    ವರದಿ: ಪ್ರಶಾಂತ ಹೂಗಾರ, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: