Skin Problem Solution: ಚರ್ಮರೋಗಗಳಿಗೆ ರಾಮಬಾಣ ಬಾಗಲಕೋಟೆಯ ಈ ಔಷಧ! ಯಾವುದಕ್ಕೆಲ್ಲ ಚಿಕಿತ್ಸೆ ಸಿಗುತ್ತೆ?

ಆಧುನಿಕ ಆಸ್ಪತ್ರೆಗಳೂ ಗುಣಪಡಿಸದ ಖಾಯಿಲೆಗಳನ್ನು ಗುಣಪಡಿಸುವ ವಿಶೇಷ ಔಷಧವಿದು! ಇಲ್ಲಿಗೆ ಜನ ಬಂದೂ ಬಂದೂ ಔಷಧ ತೆಗೆದುಕೊಂಡು ಹೋಗುತ್ತಾರೆ. ಹಾಗಾದರೆ ಯಾವ ಕಾಯಿಲೆಗಳಿಗೆ ಇಲ್ಲಿ ಔಷಧ ನೀಡಲಾಗುತ್ತೆ? ನೀವೂ ತಿಳಿದುಕೊಳ್ಳಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

 • Share this:
  ಬಾಗಲಕೋಟೆ: ವೈದ್ಯೋ ನಾರಾಯಣೋ ಹರಿ ಎಂಬ ಮಾತು ಎಷ್ಟು ಸತ್ಯವೋ, ಹಾಗೆ ವೈದ್ಯರ ಅಂದಾಜನ್ನೂ ಮೀರಿ ಪವಾಡಗಳೇ ಘಟಿಸಿಬಿಡುತ್ತವೆ.  ವೈದ್ಯರ ಬಳಿಯೂ ಸಾಧ್ಯವಾಗದ ರೋಗಗಳನ್ನು ನಮ್ಮ ಹಳ್ಳಿಗಳು ಜನಪದ ವೈದ್ಯರು (Folk Medicine) ಗುಣಮಾಡಿದ ಎಷ್ಟೂ ಉದಾಹರಣೆಗಳು ನಮ್ಮಲ್ಲಿವೆ.  ಇಂದು ಜಗತ್ತು ಇಷ್ಟೊಂದು ಮುಂದುವರೆದಿದೆ. ಹಲವು ರೋಗಗಳಿಗೆ ಆಧುನಿಕ ಔಷಧಗಳು  (Modern Medicine) ಕೂಡ ಬಂದಿವೆ. ಇದೇನು, ಇವರು ಇನ್ನೂ ಹಳೆಕಾಲದ  ಸಾಂಪ್ರದಾಯಿಕ ಚಿಕಿತ್ಸೆ (Traditional Medicine)  ಬಗ್ಗೆ ಹೇಳುತ್ತಿದ್ದಾರಲ್ಲ! ಇದೆಂಥಾ ಚಿಕಿತ್ಸೆ? ಅಂತ ಅನಿಸಿರಬಹುದು. ಹೆಚ್ಚು ತಲೆಬಿಸಿ ಮಾಡಿಕೊಳ್ಳದೇ ಈ ವಿಶೇಷ ಔಷಧದ ಬಗ್ಗೆ ಈಗಲೇ ತಿಳಿದುಕೊಳ್ಳಿ.

  ಹೌದು, ಇವತ್ತು ಸಾಕಷ್ಟು ರೋಗಗಳು ಹುಟ್ಟಿಕೊಳ್ಳುತ್ತಿವೆ. ಅಷ್ಟೇ ವೇಗದಲ್ಲಿ ಅವುಗಳ ನಿವಾರಣೆಗೆ ಔಷಧಿಗಳ ಹುಡಕಾಟ ನಡೆಯುತ್ತಿರುತ್ತದೆ. ಆದ್ರೆ ಕೆಲವು ಗಿಡ ಮೂಲಿಕೆಯ ಔಷಧಿಗಳ ಬಳಕೆ ಇನ್ನೂ ಜೀವಂತವಾಗಿವೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಮಹಾಲಿಂಗಪುರ ಪಟ್ಟಣದಲ್ಲಿ ಚರ್ಮಕ್ಕೆ ಸಂಬಂಧಪಟ್ಟ ಸರಪನೆ ಸೇರಿದಂತೆ ಸುಮಾರು ಏಳು ತೆರನಾದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ.

  ನೂರಾರು ವರ್ಷದಿಂದ ನಡೆಸುತ್ತಿದ್ದಾರೆ ಚಿಕಿತ್ಸೆ
  ಬಡಿಗೇರ ಮನೆತನದವರು ಸುಮಾರು ನೂರಾರು ವರ್ಷಗಳಿಂದ ಈ ಕಾಯಕವನ್ನು ಮಾಡುತ್ತಾ ಬಂದಿದ್ದು, ಈಗ ಪ್ರಸ್ತುತ ಉಮೇಶ ಬಡಿಗೇರ ಮತ್ತು ಈರಪ್ಪ ಬಡಿಗೇರ ಎನ್ನುವವರು ಸುಮಾರು 27 ವರ್ಷಗಳಿಂದ ಚರ್ಮಕ್ಕೆ ಸಂಬಂಧಪಟ್ಟಿದ ಸುಮಾರು 7 ರೀತಿಯ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇವರು ನೀಡುತ್ತಿರುವ ಚಿಕಿತ್ಸೆಯಿಂದ ಸಾಕಷ್ಟು ಜನರು ಗುಣಮುಖರಾಗಿದ್ದಾರೆ ಎನ್ನುತ್ತಾರೆ ಇಲ್ಲಿ ಚಿಕಿತ್ಸೆ ಪಡೆದುಕೊಂಡವರು.

  ಪ್ರತಿ ರವಿವಾರ ಮತ್ತು ಗುರುವಾರ ಮಾತ್ರ ಚಿಕಿತ್ಸೆ
  ಪ್ರತಿ ರವಿವಾರ ಮತ್ತು ಗುರುವಾರ ಈ ಚಿಕಿತ್ಸೆ ನೀಡಲಾಗುತ್ತದೆ. ಉಳಿದ ದಿನ ಚಿಕಿತ್ಸೆ ದೊರೆಯದು. ಹಾಗಾಗಿ ಮಹಾಲಿಂಗಪುರ ಪಟ್ಟಣಕ್ಕೆ ಅಂದು ಹಲವು ಜನರು ಬಂದು ಚರ್ಮ ರೋಗಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆದುಕೊಂಡು ಹೋಗುತ್ತಾರೆ.

  ಹೇಗಿರುತ್ತೆ ಚಿಕಿತ್ಸಾ ವಿಧಾನ?
  ಚಿಕಿತ್ಸೆಗೆಂದು ಬಂದವರಿಗೆ ಕ್ಯಾಲಮೈನ್ ಲೋಷನ್ (Calamine Lotion) ಅರ್ಥಾತ್ ಸ್ಥಳೀಯವಾಗಿ ಕ್ಯಾಮೀ ಬಣ್ಣದ ಪುಡಿಯನ್ನು ತರಲು ಹೇಳಿ ಆ ಪುಡಿಗೆ ಲಿಂಬೆಕಾಯಿಯ ರಸವನ್ನು ಸೇರಿಸಿ ಕಾಯಿಲೆ ಆಗಿರುವ ಸ್ಥಳದ ಹತ್ತಿರ ಅಗರಬತ್ತಿಯಿಂದ ಹಸ್ತ ಮತ್ತು ಗರುಡದ ಚಿತ್ರವನ್ನು ತೆಗೆಯಲಾಗುತ್ತದೆ. ಆನಂತರ ಕಾಯಿಲೆಯ ಸ್ಥಳಕ್ಕೆ ಪ್ರತಿ ದಿನ ಬೆಳಿಗ್ಗೆ ಮತ್ತು ರಾತ್ರಿ ಈ ಲಿಂಬೆ ಮಿಶ್ರಿತ ಅದನ್ನು ಹಚ್ಚಲು ಹೇಳಲಾಗುತ್ತದೆ.

  ಇದನ್ನೂ ಓದಿ: Hindu Gods Worship in Dargah: ದರ್ಗಾದಲ್ಲಿ ಶ್ರೀಕೃಷ್ಣ-ಸಾಯಿಬಾಬಾ ವಿಗ್ರಹ ಸ್ಥಾಪಿಸಿ ಮುಸ್ಲಿಂ ಸಮುದಾಯದಿಂದಲೇ ಪೂಜೆ, ಪುನಸ್ಕಾರ!

  ಮೂರು ದಿನಕ್ಕೇ ರೋಗ ಮಾಯ!
  ಹೀಗೆ ಮೂರು ದಿನ ಚಿಕಿತ್ಸೆ ಪಡೆದುಕೊಂಡ ಬಳಿಕ ಕಾಯಿಲೆ ಹಂತ ಹಂತವಾಗಿ ಸಂಪೂರ್ಣ ನಿವಾರಣೆಯಾಗುತ್ತದೆ ಎಂಬುದು ಹಲವರ ಅಭಿಪ್ರಾಯವಾಗಿದೆ.

  ಸುಮಾರು 7 ತಲೆಮಾರಿನಿಂದ ನೀಡುತ್ತಿರುವ ಚಿಕಿತ್ಸೆ
  ಸುಮಾರು 7 ತಲೆಮಾರಿನಿಂದ ಈ ಬಡಿಗೇರ ಕುಟುಂಬ ಚಿಕಿತ್ಸೆಯನ್ನು ಉಚಿತವಾಗಿ ನೀಡುತ್ತಿದ್ದು, ಈ ಚಿಕಿತ್ಸೆ ಪಡೆಯಲು ರಾಜ್ಯ ಮತ್ತು ಹೊರ ರಾಜ್ಯಗಳಿಂದ ಜನ ಆಗಮಿಸಿ ಇಲ್ಲಿನ ಚಿಕಿತ್ಸೆಯನ್ನು ಪಡೆದುಕೊಂಡು ಗುಣಮುಖರಾಗಿದ್ದಾರೆ ಎನ್ನುತ್ತಾರೆ ಉಮೇಶ ಬಡಿಗೇರ.

  ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತೆ
  ಕಾಲಾಂತರಗಳಿಂದ ಚಿಕಿತ್ಸೆ ನೀಡುತ್ತಾ ಬಂದಿರುವ ಉಮೇಶ ಬಡಿಗೇರ ಅವರ ಕುಟುಂಬ ಇನ್ನುವರೆಗೆ ಯಾವ ಕ್ಲಿನಿಕ್ ತೆರೆಯದೆ ಮನೆಯಲ್ಲಿಯೇ ಚಿಕಿತ್ಸೆ ನೀಡುತ್ತಿದೆ. ಮನೆಯಲ್ಲಿಯೇ ರೋಗಕ್ಕೆ ಸಂಬಂಧಿಸಿದಂತೆ ಚಿಕಿತ್ಸೆಗಾಗಿ ಔಷಧಿಯನ್ನು ತಯಾರಿಸಲಾಗುತ್ತದೆ.

  ಇದನ್ನೂ ಓದಿ: Organic Jaggery: ಬರದ ನಾಡಿನಲ್ಲಿ 18 ಬಗೆಯ ಬೆಲ್ಲ, ಇಂಥಾ ವೆರೈಟಿ ನೀವೆಲ್ಲೂ ನೋಡಿರಲ್ಲ ಬಿಡಿ!

  ಒಟ್ಟಿನಲ್ಲಿ ಇಂಥಹ ಆಧುನಿಕ ಜಗತ್ತಿನಲ್ಲಿ ಜಾನಪದ ಚಿಕಿತ್ಸೆ ಇನ್ನು ಜೀವಂತವಿದೆ. ಅದನ್ನು ಜನರು ನಂಬಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗುತ್ತಿದ್ದಾರೆ ಎಂದರೆ ಜನರು ಗಿಡ ಮೂಲಿಕೆಗಳ ಔಷಧಿಯ ಮೇಲೆ ಇಟ್ಟಿರುವ ನಂಬಿಕೆ ಎಷ್ಟು ಅರ್ಥವಾಗುವಂತಿದೆ.

  ವರದಿ: ಶಿವಾನಂದ ವಿಜಯಪುರ
  Published by:Suraj Risaldar
  First published: