ಬಳ್ಳಾರಿ: ಸೀರೆಯುಟ್ಟು ಹಸಿರು ಬಳೆ ತೊಟ್ಟು ಹೂವಿನ ಹಾರ ಹಾಕಿರೋ ಮಹಿಳೆ, ಈ ಮಹಿಳೆಗೆ ಆರತಿ ಬೆಳಗುತ್ತಿರೋ ಹಲವು ಮುತ್ತೈದೆಯರು. ಅರೇ! ಇದೇನು, ಎಲ್ಲೋ ಅರಿಶಿನ ಕುಂಕುಮದ ಶಾಸ್ತ್ರ (Kumkum Shatra) ನಡೆದಿರೋದನ್ನ ಯಾಕೆ ಹೀಗೆ ಹೇಳ್ತಿದ್ದಾರೆ ಅಂದ್ಕೊಳ್ಬೇಡಿ, ಇದು ವಿದೇಶಿ ಮಹಿಳೆಗೆ ಭಾರತೀಯ ಸಂಸ್ಕೃತಿ (Indian Culture) ಪರಿಚಯಿಸಿದ ವಿಶೇಷ ವಿದ್ಯಮಾನ!
ರಾಕ್ ಕ್ಲೈಂಬಿಂಗ್ ತರಬೇತಿಗಾಗಿ ಬಂದು ಚೊಳಚಗುಡ್ಡ ಗ್ರಾಮದಲ್ಲಿ ತಂಗಿರುವ ಬ್ರೆಜಿಲ್ ಮೂಲದ ಮಾರ್ಷೆಲಾ ಎಂಬ ವಿದೇಶಿ ಮಹಿಳೆಗೆ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸುವ ವಿಶೇಷ ಕಾರ್ಯ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಚೊಳಚಗುಡ್ಡ ಗ್ರಾಮದ ಪವಾಡಶೆಟ್ಟಿ ಕುಟುಂಬವೇ ಈ ವಿಶೇಷ ಪ್ರಯತ್ನ ನಡೆಸಿರೋದು.
ಇದನ್ನೂ ಓದಿ: Ulavi Jatre: ಮನೆಯಲ್ಲಿ ಕಾರ್ ಇದ್ರೂ ಎತ್ತಿನ ಗಾಡಿಯಲ್ಲೇ ಜಾತ್ರೆಗೆ ಬರುವ ಭಕ್ತರು!
ಭಾರತದ ಸಂಸ್ಕೃತಿ ಪರಿಚಯ
ಮದುವೆ ಕಾರ್ಯಕ್ರಮಕ್ಕೂ ಮುನ್ನ ನಡೆಯುವ ಅರಿಶಿನ ಶಾಸ್ತ್ರದಲ್ಲಿ ಪವಾಡಶೆಟ್ಟಿ ಅವ್ರ ಪಕ್ಕದ ಬಾಡಿಗೆ ಮನೆಯಲ್ಲಿ ತಂಗಿರುವ ಮಾರ್ಷೆಲಾ ಅವರಿಗೆ ಹೀಗೆ ಭಾರತದ ಸಂಸ್ಕೃತಿಯನ್ನು ಪರಿಚಯಿಸಲಾಗಿದೆ.
ಇದನ್ನೂ ಓದಿ: Vijayanagara: ರೈತರಿಗೆ ಕನ್ಯೆ ಕೊಡಲಿ, ಜನರ ಮನಸ್ಸು ಬದಲಾಗಲಿ; ದೇವರ ಮೊರೆಹೋದ ರೈತ
ವೈರಲ್ ಆಗ್ತಿದೆ ವಿಡಿಯೋ
ವಿದೇಶಿ ಮಹಿಳೆಗೆ ಸೀರೆಯುಡಿಸಿ, ಹಸಿರು ಬಳೆ ತೊಡಿಸಿ ಹೂವಿನ ಹಾರ ಹಾಕಿ ಸಂಭ್ರಮಿಸಲಾಗಿದೆ. ಇಸ್ರೇಲ್ ಮೂಲದ ನೋವಾ ಎಂಬ ವ್ಯಕ್ತಿಗೂ ಟೋಪಿ ತೊಡಿಸಿ ಖುಷಿಪಡಲಾಗಿದೆ. ಪವಾಡಶೆಟ್ಟಿ ಅವರ ಕುಟುಂಬ. ಸದ್ಯ ಈ ವಿಡಿಯೋ ಭಾರೀ ವೈರಲ್ ಆಗ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ