ಟಗರು ಬಂತು ಟಗರು, ಇದು ನಮ್ಮೂರ ಟಗರು! ಎದುರಾಳಿನ ಕೆಡವಿ ಹಾಕೋ ಹುಮ್ಮಸ್ಸಿನಲ್ಲಿರೋ ಪೊಗರಿನ ಟಗರುಗಳು. ಖದರ್ನಲ್ಲಿ ಒಂದಕ್ಕಿಂತ ಒಂದು ಮೇಲು, ಟಗರು ಮಾಲೀಕರಿಗೆ ಕಾಳಗ (Ram Fighting) ಗೆಲ್ಲೋ ಹುರುಪು, ಉತ್ಸಾಹ. ಬಾಗಲಕೋಟೆಯ (Bagalakote) ಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ (Sideshwar Fair) ರಂಗೇರಿತ್ತು ನೋಡಿ ಈ ಟಗರು ಕಾಳಗ!
ಬಾಗಲಕೋಟೆಯ ಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಇದೇ ಮೊದಲ ಸಲ ರಾಜ್ಯಮಟ್ಟದ ಟಗರಿನ ಕಾಳಗ ಏರ್ಪಡಿಸಲಾಗಿತ್ತು. ಎದುರಾಳಿ ಟಗರನ್ನ ಕೆಣಕುತ್ತಾ ಅವುಗಳು ಡಿಚ್ಚಿ ಹೊಡೆಯುತ್ತಿದ್ದಂತೆ ಜನರ ಕೇಕೆ ಮುಗಿಲು ಮುಟ್ಟುತ್ತಿತ್ತು.
ಯುದ್ಧಕ್ಕೆ ಸಿದ್ಧವಾದ ಟಗರುಗಳು!
ಟಗರು ಇನ್ನೊಂದು ಟಗರಿಗೆ ಹಣೆಯಿಟ್ಟು ಗುದ್ತಿದ್ರೆ ನೋಡುಗರ ಎದೆ ಝಲ್ ಅಂತಿತ್ತು.ಇತ್ತ ಎರಡೂ ಟಗರುಗಳು ತಿರುಗಿ ಯುದ್ಧಕ್ಕೆ ಸಿದ್ಧವಾಗ್ತಿದ್ವು. ಹೀಗೆ ನೆರೆದವರನ್ನ ತುದಿಗಾಲಿನಲ್ಲಿ ನಿಲ್ಲಿಸುವಂತೆ ಮಾಡಿತ್ತು ಟಗರು ಫೈಟ್.
ಇದನ್ನೂ ಓದಿ: Haridra Thirtha: ಮಕ್ಕಳಾಗದ ಮಹಿಳೆಯರು ಇಲ್ಲೇ ಹರಕೆ ಸಲ್ಲಿಸ್ತಾರೆ; ಹರಿದ್ರಾ ತೀರ್ಥದ ವಿಶೇಷವಿದು
ಹಲವು ಜಿಲ್ಲೆಗಳಿಂದ ಆಗಮಿಸಿದ್ದ ಟಗರುಗಳ ಸೆಣೆಸಾಟ
ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ, ದಾವಣಗೆರೆ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಿಂದ ನೂರಾರು ಟಗರುಗಳು ಆಗಮಿಸಿದ್ದವು. ಟಗರು ಮಾಲೀಕರಂತೂ ತಮ್ಮದೇ ಟಗರು ಗೆಲ್ಲುತ್ತೆ ಅನ್ನೋ ಹುರುಪಿನಲ್ಲಿದ್ರು.
ಇದನ್ನೂ ಓದಿ: Jalebi Recipe: ಚಳಿಗಾಲಕ್ಕೆ ರುಚಿರುಚಿ ಜಿಲೇಬಿ ಸವಿಯಿರಿ; ಇಲ್ಲಿದೆ ಸುಲಭ ರೆಸಿಪಿ
ಹಾಲು ಹಲ್ಲು, 2 ಹಲ್ಲು, 4 ಹಲ್ಲು, 6 ಹಲ್ಲು ಮತ್ತು 8 ಹಲ್ಲುಗಳ ಟಗರಿನ ಕಾಳಗ ಭಾರೀ ರಂಗೇರಿಸ್ತು. ಒಟ್ಟಾರೆ ಬಾಗಲಕೋಟೆಯಲ್ಲಿ ಗಮ್ಮತ್ತಿನಿಂದ ಪರಸ್ಪರ ಗುಮ್ಮುತ್ತಾ ಪೊಗರು ಪ್ರದರ್ಶಿಸಿದ ಟಗರುಗಳು ಮೈನವಿರೇಳಿಸಿದವು.
ವರದಿ: ಪ್ರಶಾಂತ ಹೂಗಾರ, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ