• Home
  • »
  • News
  • »
  • vijayapura
  • »
  • Bagalakote Viral Video: ಕೃಷ್ಣಾ ನದಿಯಲ್ಲಿ ಟ್ರ್ಯಾಕ್ಟರ್ ತೇಲುತ್ತೆ! ಕಬ್ಬು ಅತ್ತಂದಿತ್ತ ದಾಟುತ್ತೆ!

Bagalakote Viral Video: ಕೃಷ್ಣಾ ನದಿಯಲ್ಲಿ ಟ್ರ್ಯಾಕ್ಟರ್ ತೇಲುತ್ತೆ! ಕಬ್ಬು ಅತ್ತಂದಿತ್ತ ದಾಟುತ್ತೆ!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಎರಡು ಬೋಟ್ ಮೂಲಕ ಕೃಷ್ಣಾ ನದಿಯಲ್ಲಿ 5 ಟನ್ ಭಾರದ ಕಬ್ಬಿನ ಟ್ರಾಕ್ಟರ್ ಸಾಗಿಸಿದ್ದಾರೆ ಬಾಗಲಕೋಟೆಯ ರೈತರು!

  • News18 Kannada
  • Last Updated :
  • Bagalkot, India
  • Share this:

    ಬಾಗಲಕೋಟೆ: ತುಂಬಿ ಹರಿಯುತ್ತಿರುವ ಕೃಷ್ಣಾ ನದಿ. ನದಿಯಲ್ಲಿ (Krishna River) ಕಬ್ಬು ಸಾಗಿಸ್ತಿರೋ ರೈತರ ಸಾಹಸ. ಸದ್ಯ ಈ ವಿಡಿಯೋ ತುಂಬಾ ವೈರಲ್ ಆಗ್ತಿದೆ. ರೈತರು ಬೋಟ್ ಮೂಲಕ ಕೃಷ್ಣಾ ನದಿಯಲ್ಲಿ ಕಬ್ಬಿನ ಟ್ರ್ಯಾಕ್ಟರ್ ಸಾಗಿಸಿದ್ದಾರೆ. ಸಿನಿಮಾಗಳಲ್ಲೂ ಕಾಣಸಿಗದ ರೀತಿ ರೈತರು ತಾವು ಬೆಳೆದ ಕಬ್ಬನ್ನ ನದಿಯಲ್ಲಿ (Sugarcane Transportation In Krishna River)  ಅತ್ತಂದಿತ್ತ ದಾಟಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ (Bagalakote) ಜಮಖಂಡಿ ತಾಲೂಕಿನ ಕಂಕನವಾಡಿ ಗ್ರಾಮದ ಗುಹೇಶ್ವರ ನಡುಗಡ್ಡೆಯಲ್ಲೇ ಸ್ಥಳೀಯ ರೈತರು ಈ ಸಾಹಸ ಮಾಡಿದ್ದಾರೆ.


    ಕೃಷ್ಣಾ ನದಿಯಿಂದ ಕಂಕನವಾಡಿ ಗ್ರಾ,ಮ ನಡುಗಡ್ಡೆಯಾಗಿದೆ. ಈ ನಡುಗಡ್ಡೆಯಿಂದ ಕಾರ್ಖಾನೆಗೆ ಕಬ್ಬು ಸಾಗಿಸಲು ಹರಸಾಹಸಪಟ್ಟ ರೈತರು ಈ ಸಾಹಸಕ್ಕೆ ಮುಂದಾಗಿದ್ದಾರೆ. ಎರಡು ಬೋಟ್ ಮೂಲಕ ಕೃಷ್ಣಾ ನದಿಯಲ್ಲಿ 5 ಟನ್ ಭಾರದ ಕಬ್ಬಿನ ಟ್ರಾಕ್ಟರ್ ಸಾಗಿಸಿದ್ದಾರೆ.


    ಇದನ್ನೂ ಓದಿ: God Sanjeeva Murthy: ಕಾಣೋಕೆ ಆಂಜನೇಯನಂತಿದ್ರೂ, ಅವನಲ್ಲ! ಈತ ಸೈನಿಕರನ್ನು ಕಾಪಾಡೋ ಸಂಜೀವ ಮೂರ್ತಿ!


    300 ಕುಟುಂಬಗಳಿಂದ 700 ಎಕರೆ ಜಮೀನಿನಲ್ಲಿ ಕೃಷಿ
    ಅಂದಹಾಗೆ ಈ ನಡುಗಡ್ಡೆಯಲ್ಲಿ ಸುಮಾರು 300 ಕುಟುಂಬಗಳು 700 ಎಕರೆ ಜಮೀನಿನಲ್ಲಿ ಕೃಷಿ ನಡೆಸ್ತಿದ್ದಾರೆ. ಪ್ರತಿವರ್ಷವೂ ಇದೇ ರೀತಿ ಬೋಟ್​ನಲ್ಲೇ ಕಬ್ಬು ಸಾಗಿಸೋ ಪರಿಸ್ಥಿತಿ ಇಲ್ಲಿನ ರೈತರದ್ದು.


    ಇದನ್ನೂ ಓದಿ: Best Waterfalls Uttara Karnataka: ಬಾಗಲಕೋಟೆಯ ಅದ್ಭುತ ಜಲಪಾತ! ಪ್ರಕೃತಿ ಸೌಂದರ್ಯದ ವೈಭವ


    ಶಾಶ್ವತ ಪರಿಹಾರ ಸಿಗುವುದು ಯಾವಾಗ?
    ಈ ಮುನ್ನ ಕಬ್ಬು ಸಾಗಿಸಲು ಒಂದು ಟನ್​ಗೆ 1 ಸಾವಿರ ಖರ್ಚು ಮಾಡಲಾಗ್ತಿತ್ತು. ಈಗ ಬೋಟ್​ನಲ್ಲಿ ಟ್ರಾಕ್ಟರ್ ತರೋದರಿಂದ ರೈತರಿಗೆ ಹಣ ಉಳಿಯುತ್ತಿದೆಯಂತೆ. ಆದ್ರೆ ಇಂಥಾ ಅಪಾಯಕಾರಿ ಸಾಹಸ ಮಾಡೋದಕ್ಕಿಂತ ಸರ್ಕಾರ ಶಾಶ್ವತ ಪರಿಹಾರ ನೀಡ್ಬೇಕು ಅನ್ನೋ ಆಗ್ರಹವೂ ಕೇಳಿಬರ್ತಿದೆ.

    Published by:ಗುರುಗಣೇಶ ಡಬ್ಗುಳಿ
    First published: