Babaladi Sadashiv Mutya: ದೇವರಿಗೆ ಹೂ, ಹಣ್ಣಿನ ಬದಲು ಎಣ್ಣೆ ನೈವೇದ್ಯ! ಇಲ್ಲಿ ಮದ್ಯವೇ ತೀರ್ಥ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಸದಾಶಿವ ಮುತ್ಯಾನ ಜಾತ್ರೆಯಲ್ಲಿ ಹೂ, ಹಣ್ಣಿನ ಬದಲು ದೇವರಿಗೆ ಎಣ್ಣೆಯನ್ನೇ ನೈವೇದ್ಯವಾಗಿ ಸಮರ್ಪಿಸಲಾಗುತ್ತೆ. ಹೀಗಾಗಿ ಈ ಸದಾಶಿವನ ಜಾತ್ರೆಯನ್ನು ಸಾರಾಯಿ ಜಾತ್ರೆ ಎಂದೇ ಕರೆಯಲಾಗುತ್ತೆ.

 • Share this:

  ವಿಜಯಪುರ: ಮಹಿಳೆಯರು, ಪುರುಷರು ಎನ್ನದೇ ಉದ್ದನೆಯ ಸರತಿ ಸಾಲಲ್ಲಿ ನಿಂತಿರುವ ಜನರು. ಎಲ್ಲರ ಕೈಯಲ್ಲೂ ಮದ್ಯ! ಅರೇ! ಇವರೆಲ್ಲ ಏನ್ಮಾಡ್ತಿದ್ದಾರೆ. ಯಾವ್ದಾದ್ರೂ ಬಾರ್ ಎದುರು ನಿಂತು ಕಾಯ್ತಿದ್ದಾರಾ ಅಂತ ನೀವ್ ಯೊಚ್ನೆ ಮಾಡಿದ್ರೆ ನಿಮ್ಮ ಊಹೆ ಖಂಡಿತ ತಪ್ಪು! ಇಷ್ಟೊಂದು ಜನರು ನಿಂತಿರೋದು ತಮ್ಮ ನೆಚ್ಚಿನ ದೇವ ಬಬಲಾದಿ ಸದಾಶಿವನಿಗೆ (Babaladi Sadashiv Mutya) ಹರಕೆ ಒಪ್ಪಿಸೋಕೆ!


  ದೇವರಿಗೆ ನೈವೇದ್ಯವಾಗಿ ಭಕ್ತರು, ಹೂವೂ, ಹಣ್ಣು, ಆಹಾರ ಪದಾರ್ಥ ನೀಡೋದನ್ನ ನೋಡಿದ್ದೇವೆ. ಆದ್ರೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿ ಸದಾಶಿವ ಜಾತ್ರೆಯಲ್ಲಿ ದೇವರಿಗೆ ಮದ್ಯವನ್ನೇ ನೈವೇದ್ಯ ಮಾಡಲಾಗುತ್ತೆ! ಜೊತೆಗೆ ಭಕ್ತರು ಸಹ ಮದ್ಯವನ್ನೆ ನೈವೇದ್ಯದ ನಂತರ ತೀರ್ಥವಾಗಿ ಸೇವನೆ ಮಾಡುತ್ತಾರೆ.


  ಹೂ, ಹಣ್ಣಿನ ಬದಲು ದೇವರಿಗೆ ಎಣ್ಣೆ ನೈವೇದ್ಯ
  ತಲೆ ತಲಾಂತರಗಳಿಂದಲೂ ನಡೆದುಕೊಂಡು ಬಂದಿರುವ ಬಬಲಾದಿ ಸದಾಶಿವನ ಜಾತ್ರೆಯಲ್ಲಿ ಮದ್ಯವೇ ನೈವೇದ್ಯವಾಗಿರುತ್ತೆ. ಶಿವರಾತ್ರಿ ಬಳಿಕ ನಡೆಯುವ ಬಬಲಾದಿ ಸದಾಶಿವ ಮುತ್ಯಾನ ಜಾತ್ರೆಯಲ್ಲಿ ಹೂ, ಹಣ್ಣಿನ ಬದಲು ದೇವರಿಗೆ ಎಣ್ಣೆಯನ್ನೇ ನೈವೇದ್ಯವಾಗಿ ಸಮರ್ಪಿಸಲಾಗುತ್ತೆ. ಹೀಗಾಗಿ ಈ ಸದಾಶಿವನ ಜಾತ್ರೆಯನ್ನು ಸಾರಾಯಿ ಜಾತ್ರೆ ಎಂದೇ ಕರೆಯಲಾಗುತ್ತೆ. ಮಹಿಳೆಯರು ಕೂಡಾ ಮದ್ಯವನ್ನ ತೀರ್ಥವಾಗಿ ಸ್ವೀಕರಿಸುತ್ತಾರೆ.


  ಇಲ್ಲಿಯ ಕಾರ್ಣಿಕ ಸುಳ್ಳಾಗಿಲ್ಲ!
  ಪ್ರತಿವರ್ಷ ನಡೆಯುವ ಬಬಲಾದಿ ಜಾತ್ರೆಯಲ್ಲಿ ಹೇಳುವ ಕಾರ್ಣಿಕ ಯಾವತ್ತೂ ಸುಳ್ಳಾಗಿಯೇ ಇಲ್ಲ ನೂರಾರು ವರ್ಷಗಳಿಂದ ಇಲ್ಲಿ ಹೇಳುವ ಕಾಲಜ್ಞಾನದ ಹೇಳಿಕೆಗಳು ಸತ್ಯವಾಗುತ್ತಲೇ ಬಂದಿವೆ ಅಂತಾರೆ ಭಕ್ತರು. ವರ್ಷದ ಮಳೆ, ಬೆಳೆಗಳ ಬಗ್ಗೆಯೂ ಸಹ ನಿಖರವಾಗಿ ಹೇಳಿಕೆ ನೀಡುವುದರಿಂದ ರೈತರು ಇದೇ ಹೇಳಿಕೆಯನ್ನೇ ಆಧರಿಸಿ ಕೃಷಿ ಮಾಡ್ತಾರೆ.


  ಇದನ್ನೂ ಓದಿ: Vijayapura Grapes: ಕಂಡು ಕೇಳರಿಯದ ಹಲವು ಬಗೆಯ ದ್ರಾಕ್ಷಿ, ಇಷ್ಟು ಕಡಿಮೆ ಬೆಲೆಗೆ ಸಿಕ್ಕಿತು ನೋಡಿ!
  ವಿವಿಧ ಬ್ರಾಂಡ್​ಗಳ ಮದ್ಯ ಸಮರ್ಪಣೆ
  ಇನ್ನೊಂದು ವಿಶೇಷ ಏನಂದ್ರೆ, ಸದಾಶಿವನ ಸನ್ನಿಧಾನಕ್ಕೆ ಆಗಮಿಸಿ ಯಾವುದಾದ್ರೂ ಹರಕೆ ಕಟ್ಟಿಕೊಂಡ ಮಹಿಳಾ ಹಾಗೂ ಪುರುಷ ಭಕ್ತರು ಅದು ಈಡೇರಿದ ಬಳಿಕ ತಮ್ಮ ಹರಕೆಯಂತೆ ವಿವಿಧ ಬ್ರ್ಯಾಂಡ್​ಗಳ ಮದ್ಯ ಸಮರ್ಪಿಸುತ್ತಾರೆ.


  ಇಲ್ಲಿಂದ ಧಾನ್ಯಗಳ ಬೀಜ ಒಯ್ಯುವ ರೈತರು
  ಸದಾಶಿವನ ಜಾತ್ರೆ ವೇಳೆಯೇ ದೇವಸ್ಥಾನದ ಆವರಣದಲ್ಲಿ ಪ್ರತಿ ರೈತನಿಗೂ ಬೊಗಸೆಯಷ್ಟು ಧಾನ್ಯಗಳನ್ನು ನೀಡಲಾಗುತ್ತದೆ. ಈ ಧಾನ್ಯವನ್ನು ರೈತರು ತಾವು ಬಿತ್ತನೆ ಮಾಡುವ ಬೀಜದೊಂದಿಗೆ ಸೇರಿಸಿ ಬಿತ್ತನೆ ಮಾಡಿದ್ರೆ ಆ ವರ್ಷದ ಬೆಳೆ ಭರ್ಜರಿಯಾಗಿ ಬರುತ್ತಂತೆ. ಹೀಗಾಗಿ ಭಕ್ತರು ಸಹ ಇಲ್ಲಿಗೆ ಬಂದು ತಮ್ಮ ಹರಕೆಗಳನ್ನು ತೀರಿಸುತ್ತಾರೆ. 


  ಇದನ್ನೂ ಓದಿ: Vijayapura: 30 ವರ್ಷಗಳ ಹಿಂದೆ ಮೂವರಿಂದ ಆರಂಭವಾದ ಯಾತ್ರೆಗೆ ಈಗ ಸಾವಿರಾರು ಪಾದಗಳು!


  ಒಟ್ಟಾರೆ ಬಬಲಾದಿ ಮುತ್ಯಾನ ಐದು ದಿನಗಳ ಜಾತ್ರೆಯಲ್ಲಿ ಸಾವಿರಾರು ಭಕ್ತರು ತಮ್ಮ ಹರಕೆ ತೀರಿಸಿ ಕೃತಾರ್ಥರಾಗ್ತಾರೆ.


  (ಮದ್ಯಪಾನ ಆರೋಗ್ಯಕ್ಕೆ ಹಾನಿಕರ)

  Published by:ಗುರುಗಣೇಶ ಡಬ್ಗುಳಿ
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು