• Home
  • »
  • News
  • »
  • vijayapura
  • »
  • Vijayapura: ಭಕ್ತಿಯೆಂದರೆ ಇದು! ಸ್ವಾಮಿ ಅಯ್ಯಪ್ಪನ ಮೊರೆಹೋದ ಮಾಲಾಧಾರಿಗಳು

Vijayapura: ಭಕ್ತಿಯೆಂದರೆ ಇದು! ಸ್ವಾಮಿ ಅಯ್ಯಪ್ಪನ ಮೊರೆಹೋದ ಮಾಲಾಧಾರಿಗಳು

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಬಾಳೆದಿಂಡಿನಿಂದ ಸನ್ನಿಧಾನವನ್ನ ನಿರ್ಮಿಸಿ ಅದರ ಒಳಗಡೆ ಅಯ್ಯಪ್ಪಸ್ವಾಮಿಯ ಮೂರ್ತಿ ಮತ್ತು ಭಾವಚಿತ್ರವಿಟ್ಟು ವಿಶೇಷ ಪೂಜೆಯನ್ನ ಮಾಡುತ್ತಾರೆ.

  • Share this:

    ಸ್ವಾಮಿಯೇ...ಶರಣಂ ಅಯ್ಯಪ್ಪ ಅಂತಾ ಭಜಿಸುತ್ತಿರೋ ಮಾಲಾಧಾರಿಗಳು. ಸುತ್ತಲೂ ಕೈ ಮುಗಿದು ನಿಂತಿರೋ ಭಕ್ತರು. ಇನ್ನೇನು ಮಕರ ಸಂಕ್ರಮಣ ಹತ್ತಿರ ಬರುತ್ತಿದ್ದು ಅಯ್ಯಪ್ಪ ಸ್ವಾಮಿ ಸ್ಮರಣೆ ಹೆಚ್ಚಾಗಿದೆ. ಮಾಲಾಧಾರಿಗಳು (Ayyappa Swami Devotees) ತಮ್ಮ ವೃತಾಚರಣೆಯಲ್ಲಿ ನಿರತರಾಗಿದ್ದು ಅಯ್ಯಪ್ಪ ಸ್ವಾಮಿ (Lord Ayyappa) ಸಂಪ್ರೀತಿಗಾಗಿ ಪೂಜೆ, ಪುನಸ್ಕಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ.


    ಹೀಗೆ ರಾತ್ರಿ ಸಮಯದಲ್ಲಿ ಮಾಲಾಧಾರಿಗಳೆಲ್ಲರೂ ಅಯ್ಯಪ್ಪ ಸ್ವಾಮಿಯ ನಾಮ ಸ್ಮರಣೆಯಲ್ಲಿ ತೊಡಗಿರುವ ಈ ದೃಶ್ಯ ಕಂಡು ಬಂದಿದ್ದು ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ರುದ್ರೇಶ್ವರ ಮಠದಲ್ಲಿ.


    ಅಯ್ಯಪ್ಪನ ಸನ್ನಿಧಾನಕ್ಕೆ ತೆರಳುವ ಕಾತುರ
    ಕೋವಿಡ್ ಲಾಕ್​ಡೌನ್ ನಿರ್ಬಂಧದಂತಹ ನಾನಾ ಕಾರಣಗಳಿಂದ ಕಳೆದ ಎರಡು ವರ್ಷಗಳಲ್ಲಿ ಅಯ್ಯಪ್ಪ ಸ್ವಾಮಿ ಪೂಜೆಗಳು ವಿಜಯಪುರದಲ್ಲಿ ನಡೆದಿಲ್ಲ. ಆದರೆ, ಈ ಬಾರಿ ಮತ್ತೆ ಅಯ್ಯಪ್ಪ ಸ್ವಾಮಿಯ ಸ್ಮರಣೆ ಸಾಂಗವಾಗಿ ನಡೆಯುತ್ತಿದೆ. ಮಾಲಾಧಾರಿಗಳು ತಾವು ತಂಗಿರುವ ಶಿಬಿರಗಳಲ್ಲಿ ಭಜನೆ ಹೇಳುತ್ತಾ, ಪೂಜೆ ಮಾಡುತ್ತಿದ್ದಾರೆ, ಈ ವರ್ಷವಂತೂ ಅಸಂಖ್ಯಾತ ಅಯ್ಯಪ್ಪ ಭಕ್ತರು ವಿಜಯಪುರ ಜಿಲ್ಲೆಯಲ್ಲಿ ಮಾಲಾಧಾರಿಗಳಾಗಿದ್ದು, ಇನ್ನೇನು ಶಬರಿಮಲೆಯಲ್ಲಿರೋ ಅಯ್ಯಪ್ಪನ ಸನ್ನಿಧಾನಕ್ಕೆ ತೆರಳುವ ಕಾತರದಲ್ಲಿದ್ದಾರೆ.




    ಬಾಳೆದಿಂಡಿನಿಂದ ಸನ್ನಿಧಾನ ನಿರ್ಮಾಣ
    ಪ್ರತಿದಿನವೂ ತಮ್ಮ ತಮ್ಮ ಸನ್ನಿಧಾನದಲ್ಲಿ ಬೆಳಗ್ಗೆ ಮತ್ತು ರಾತ್ರಿ ದಿನದ ಎರಡು ಹೊತ್ತು ಅಯ್ಯಪ್ಪಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಪೂಜೆ ನೆರವೇರುವ ಮೊದಲು ಬಾಳೆದಿಂಡಿನಿಂದ ಸನ್ನಿಧಾನವನ್ನ ನಿರ್ಮಿಸಿ ಅದರ ಒಳಗಡೆ ಅಯ್ಯಪ್ಪಸ್ವಾಮಿಯ ಮೂರ್ತಿ ಮತ್ತು ಭಾವಚಿತ್ರವಿಟ್ಟು ವಿಶೇಷ ಪೂಜೆಯನ್ನ ಮಾಡುತ್ತಾರೆ.


    ಇದನ್ನೂ ಓದಿ: Yalaguru Hanuman Temple: ಯಲಗೂರು ಆಂಜನೇಯನ ದರ್ಶನಕ್ಕೆ ಜನಸಾಗರ!


    ಅಯ್ಯಪ್ಪ ಸ್ವಾಮಿಯ ಸ್ಮರಣೆ ಮಾಡಲೆಂದೇ ಮುದ್ದೇಬಿಹಾಳ, ಬಾಗೇವಾಡಿ, ಕೊಲ್ಹಾರ, ಬಳಬಟ್ಟಿ, ವಡವಡಗಿ, ನಿಡಗುಂದಿ, ತೆಲಗಿ ಗ್ರಾಮದಿಂದಲೂ ನೂರಾರು ಸಂಖ್ಯೆಯಲ್ಲಿ ಮಾಲಾಧಾರಿಗಳು ಆಗಮಿಸುತ್ತಾರೆ.


    ಇದನ್ನೂ ಓದಿ: Krishi Mela: ಬಾಗಲಕೋಟೆಯಲ್ಲಿ ಕೃಷಿಕರ ಖುಷಿ! ಫಲಪುಷ್ಪ ಪ್ರದರ್ಶನದಲ್ಲಿ ಮಹಾನ್ ನಾಯಕರು


    ಅಯ್ಯಪ್ಪ ಮಾಲಾಧಾರಿಗಳ ಈ ಮಾಹಾ ಪೂಜೆಯನ್ನ ಊರಿನ ಭಕ್ತರೆಲ್ಲರೂ ಸೇರಿ ಯಶಸ್ವಿಗೊಳಿಸುತ್ತಾರೆ. ಒಟ್ಟಿನಲ್ಲಿ ಇಡೀ ಗ್ರಾಮವೇ ಅಯ್ಯಪ್ಪನ ಸನ್ನಿಧಾನದಂತಿದ್ದು, ಶಬರಿಮಲೆಗೆ ಬೀಳ್ಕೊಡುವವರೆಗೂ ಇಂತಹ ವಾತಾವರಣ ಇಲ್ಲಿ ಕಂಡುಬರಲಿದೆ.


    ವರದಿ: ಪ್ರಶಾಂತ ಹೂಗಾರ, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: