Vijayapura: ಕ್ರೀಡಾಪಟುಗಳೇ ಗಮನಿಸಿ, ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಹೀಗೆ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹದಿನೆಂಟರಿಂದ ಇಪ್ಪತ್ತು ವರ್ಷದ ಬಾಲಕ ಮತ್ತು ಬಾಲಕಿಯರು ಈ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾಗಿಯಾಗಲು ವಿಜಯಪುರ ಜಿಲ್ಲೆಯ ಕ್ರೀಡಾಪಟುಗಳಿಗೂ  ಅವಕಾಶವಿದೆ. ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ನೀವು ಹೀಗೆ ಮಾಡಬಹುದಾಗಿದೆ.

  • News18 Kannada
  • 4-MIN READ
  • Last Updated :
  • Bijapur, India
  • Share this:

    ವಿಜಯಪುರ: ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಅಸೋಸಿಯೇಷನ್ ಬೆಂಗಳೂರು, ಸಂಘಟಿಸಲಿರುವ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟವು ಫೆಬ್ರವರಿ 18 ಮತ್ತು 19 ರಂದು ಬೆಂಗಳೂರು ನಗರದ (Bengaluru News) ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ವಿಜಯಪುರ ಜಿಲ್ಲೆಯ (Vijayapura News) ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನಿಸಲಾಗಿದೆ.


    ಹದಿನೆಂಟರಿಂದ ಇಪ್ಪತ್ತು ವರ್ಷದ ಬಾಲಕ ಮತ್ತು ಬಾಲಕಿಯರು ಈ ರಾಜ್ಯ ಮಟ್ಟದ ಅಥ್ಲೇಟಿಕ್ಸ್ ಕ್ರೀಡಾಕೂಟದಲ್ಲಿ ಭಾಗಿಯಾಗಲು ವಿಜಯಪುರ ಜಿಲ್ಲೆಯ ಕ್ರೀಡಾಪಟುಗಳಿಗೂ  ಅವಕಾಶವಿದೆ. ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ನೀವು ಹೀಗೆ ಮಾಡಬಹುದಾಗಿದೆ.


    ಗಮನಿಸಿ, ಹೀಗೆಲ್ಲ ನಿಯಮಗಳಿವೆ
    ಬಾಲಕ ಮತ್ತು ಬಾಲಕಿಯರು ಇಬ್ಬರೂ ಭಾಗವಹಿಸಲು ಅವಕಾಶವಿದೆ. ಕ್ರೀಡಾಪಟುಗಳು ಕನಿಷ್ಠ 20 ವರ್ಷದವರಾಗಿರಬೇಕು. 13 -03 -2003 ರಿಂದ 12-03-2005 ರ  ಒಳಗೆ ಜನಿಸಿರಬೇಕು. ಈ ಕ್ರೀಡಾಕೂಟದಲ್ಲಿ ಪ್ರತಿಯೊಬ್ಬರಿಗೆ ಪ್ರವೇಶ ಶುಲ್ಕ ರೂ. 300 ನಿಗದಿ ಪಡಿಸಲಾಗಿದೆ.




    ಎಎಫ್‌ಐಯುಐಡಿ ಜನ್ಮ ದಾಖಲೆಯ ಮೂಲಪ್ರತಿ ಹಾಗೂ ಮೂರು ಇತ್ತಿಚಿನ ಭಾವಚಿತ್ರ ಅವಶ್ಯಕತೆಗಳಿವೆ. ಈ ಎಲ್ಲ ಅಗತ್ಯ ದಾಖಲೆಯೊಂದಿಗೆ ಆಗಮಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ.


    ಇದನ್ನೂ ಓದಿ: Vijayapura: ರೈತರಿಗೆ ವರದಾನವಾದ ಹೊಸ ತಳಿಯ ಜೋಳ!


    ಈ ಸ್ಥಳದಲ್ಲಿ ಹಾಜರಾಗಲು ಸೂಚನೆ
    ಆಸಕ್ತ ಕ್ರೀಡಾಪಟುಗಳು 12-02-2023 ರಂದು ವಿಜಯಪುರದ ಡಾ.ಬಿ.ಆರ್ ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಗ್ಗೆ 8.30 ಕ್ಕೆ ಹಾಜರಾಗಬೇಕೆಂದು ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಅಸೋಸಿಯೇಷನ್ ಉಪಾಧ್ಯಕ್ಷರು ಹಾಗೂ ವಿಜಯಪುರ ಜಿಲ್ಲಾ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಎಸ್. ಎಸ್. ಹಿರೇಮಠ ಅವರು ತಿಳಿಸಿದ್ದಾರೆ.


    ಇದನ್ನೂ ಓದಿ: Vijayapura: ಪದವೀಧರ ಯುವಕನ ಹಾವು ಪ್ರೇಮ! ಇವ್ರು ವಿಷ ಸರ್ಪಗಳನ್ನೂ ಪಳಗಿಸುವ ನಿಪುಣ


    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
    ಹೆಚ್ಚಿನ ಮಾಹಿತಿಗೆ 9448110833 ಅಥವಾ ವಿಜಯಪುರ ಜಿಲ್ಲಾ ತರಬೇತುದಾರ ರಾಜು ಚವ್ಹಾಣ ಅವರ ಮೊಬೈಲ್ ಸಂಖ್ಯೆ 7019167243 ಈ ಸಂಖ್ಯೆಗೆ ಕರೆಮಾಡಬಹುದಾಗಿದೆ.


    ವರದಿ: ಪ್ರಶಾಂತ ಹೂಗಾರ ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: