ವಿಜಯಪುರ: ಪ್ರಾಥಮಿಕ, ಪ್ರೌಢ ಹಾಗೂ ಪದವಿ ಕಾಲೇಜುಗಳಲ್ಲಿ ಬೋಧಕ ಹುದ್ದೆಗಳಿಗೆ ಮತ್ತು ಬೋಧಕೇತರ ಹುದ್ದೆಗಳಾದ ಕ್ಯಾಶಿಯರ್, ಡಾಟಾ ಎಂಟ್ರಿ ಆಪರೇಟರ್, ಡ್ರೈವರ್, ಸೆಕ್ಯೂರಿಟಿ ಗಾರ್ಡ್, ಗಾರ್ಡನರ್ ಸೇರಿದಂತೆ ಸಾಕಷ್ಟು ಹುದ್ದೆಗಳಿಗೆ ನೇರ ಸಂದರ್ಶನವನ್ನು ಆಯೋಜಿಸಲಾಗಿದೆ. ವಿಜಯಪುರ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಕೆ.ಜಿ.ಎಸ್.ಎಸ್ ಗ್ರೂಪ್ ಆಫ್ ಇನ್‍ಸ್ಟಿಟ್ಯೂಶನ್ ನಿಡಗುಂದಿ ಇವರ ಸಹಯೋಗದಲ್ಲಿ ಈ ನೇರ ಸಂದರ್ಶನವನ್ನು (Direct Interview) ಆಯೋಜಿಸಲಾಗಿದೆ.
ಕೆಲಸದ ಹೆಸರು | ಬೋಧಕ ಹುದ್ದೆಗಳಿಗೆ ಮತ್ತು ಬೋಧಕೇತರ ಹುದ್ದೆಗಳು |
ಸಂದರ್ಶನದ ವಿಧಾನ | ನೇರ ಸಂದರ್ಶನ |
ಸಂದರ್ಶನ ನಡೆಯುವ ದಿನಾಂಕ | ಮಾರ್ಚ್ 4 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆವರೆಗೆ |
ಸಂಬಳ | ಆಯ್ಕೆಯಾದ ನಂತರ ಮಾಹಿತಿ |
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ | 9448118593 ಹಾಗೂ 9945000793 |
ನೇರ ಸಂದರ್ಶನದಲ್ಲಿ ಭಾಗವಹಿಸಲು ಅವಕಾಶ
ಬೋಧಕ ಹುದ್ದೆಗಳಿಗೆ ಎಂಎ, ಎಂ.ಎಸ್ಸಿ, ಎಂಎಡ್, ಎಂಪಿಎಡ್, ಬಿಎ, ಬಿಎಸ್ಸಿ, ಬಿಎಡ್, ಬಿಪಿಎಡ್ ವಿದ್ಯಾರ್ಹತೆಯುಳ್ಳ ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಬೋಧಕ ಹುದ್ದೆಗಳಿಗೆ ಹೆಚ್ಚಿನ ಅನುಭವವುಳ್ಳವರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವದು ಎಂದು ತಿಳಿಸಲಾಗಿದೆ.
ಇದನ್ನೂ ಓದಿ: Vijayapura: ವಿಜಯಪುರದ ಕೃಷಿಕರಿಗೆ ಮಹಾರಾಷ್ಟ್ರ ಕಾರ್ಮಿಕರ ನೆರವು!
ವಿಜಯಪುರ ಜಿಲ್ಲೆಯ ಉದ್ಯೋಗಾಂಕಾಕ್ಷಿಗಳಿಗೆ ಸುವರ್ಣಾವಕಾಶ
ವಿಜಯಪುರ ಜಿಲ್ಲೆಯ ನಿರುದ್ಯೋಗ ಯುವಕ ಮತ್ತು ಯುವತಿಯರಿಗೆ ಹಾಗೂ ವಿದ್ಯಾವಂತ ಮಹಿಳೆ, ಪುರುಷರು ಈ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಆಯ್ಕೆಯಾದ ಬಳಿಕ ಸಂಬಳದ ಕುರಿತು ಮಾಹಿತಿ ನೀಡಲಾಗುತ್ತದೆ.
ಇದನ್ನೂ ಓದಿ: Vijayapura: ಇಂಡಿಗೆ ಬಂತು ರಾಷ್ಟ್ರೀಯ ಹೆದ್ದಾರಿ, ಎಲ್ಲಿಂದ ಎಲ್ಲಿಗೆ ಸಂಪರ್ಕ ಕಲ್ಪಿಸುತ್ತೆ ಈ ನ್ಯಾಷನಲ್ ಹೈವೇ?
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ವಿಜಯಪುರ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಅಥವಾ ಮೊಬೈಲ್ ಸಂಖ್ಯೆ - 9448118593 ಹಾಗೂ 9945000793 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.
ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ಡಿಜಿಟಲ್ ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ