ವಿಜಯಪುರ : ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ರುಡ್ಸೆಟ್ ಹಾಗೂ ಜೆಸಿಬಿ ಇಂಡಿಯಾ ಇವರ ಸಹಯೋಗದಲ್ಲಿ 18 ರಿಂದ 45 ವರ್ಷ ವಯೋಮಾನದ ಯುವಕರಿಗೆ (Free Training) ಉಚಿತವಾಗಿ 30 ದಿನಗಳ ಉಚಿತ ಎಲೆಕ್ಟ್ರಿಕ್ ಮೋಟಾರ್ ವೈಡಿಂಗ್ ತರಬೇತಿ ಮತ್ತು ರಿಪೇರಿ ಹಾಗೂ ರೆಫ್ರಿಜರೇಶನ್ & ಏರ್ ಕಂಡಿಶನ್ ರಿಪೇರಿ ತರಬೇತಿಯನ್ನ ಉತ್ಸಾಹಿ ಯುವಕರಿಗಾಗಿ (Skill Development) ಆಯೋಜಿಸಲಾಗಿದೆ.
ನೀವು ಭಾಗವಹಿಸಬಹುದು
ವಿಜಯಪುರ ಜಿಲ್ಲೆಯ ಅರ್ಹ ಆಸಕ್ತರು ತಮ್ಮ ಹೆಸರು, ಹುಟ್ಟಿದ ದಿನಾಂಕ, ಪೂರ್ಣ ವಿಳಾಸ, ಹಾಗೂ ತಮ್ಮ ಮೊಬೈಲ್ ಸಂಖ್ಯೆ, ವಿದ್ಯಾರ್ಹತೆಗಳನ್ನೊಳಗೊಂಡ ಸ್ವವಿವರವುಳ್ಳ ಅರ್ಜಿಯನ್ನು ಸಲ್ಲಿಸಬಹುದು. ಡಿಸೆಂಬರ್ 31ರ ಒಳಗೆ ಅಂಚೆ ಮೂಲಕ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್, ವಿಸ್ತರಣಾ ಕೇಂದ್ರ ಹಸನಮಾಳ್, ದಾಂಡೇಲಿ-581325 ಈ ವಿಳಾಸಕ್ಕೆ ಸಲ್ಲಿಸಬೇಕು.
ಇದನ್ನೂ ಓದಿ: Vijayapura: ಬಬಲಾದಿ ಮಠದ ಕೊರೊನಾ ಭವಿಷ್ಯ!
ಅಂಚೆ ಮೂಲಕ ಅರ್ಜಿ ಸಲ್ಲಿಸಲು ಆಗದವರು ವ್ಯಾಟ್ಸಾಪ್ ಮೂಲಕವು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ತಮ್ಮ ಹೆಸರನ್ನ ನೋಂದಣಿ ಮಾಡಿಕೊಳ್ಳಬಹುದು. ವ್ಯಾಟ್ಸಪ್ ಸಂಖ್ಯೆ 8050741744 ಸಲ್ಲಿಸಿ ಈ ನಂಬರ್ ಮೂಲಕ ಹೆಸರು ನೊಂದಾಯಿಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ: Almatti: ಲಕಲಕ ಹೊಳೆಯುತ್ತಿರುವ ಆಲಮಟ್ಟಿ ನೋಡಿ!
ಆಯ್ಕೆಯಾದವರಿಗೆ ವಸತಿ, ಊಟ ಸಂಪೂರ್ಣ ಉಚಿತ
ಅರ್ಜಿ ಸಲ್ಲಿಸಿ ಒಂದು ತಿಂಗಳ ತರಬೇತಿಗೆ ಆಯ್ಕೆಯಾದವರಿಗೆ ಊಟೋಪಚಾರ ಹಾಗೂ ವಸತಿ ವ್ಯವಸ್ಥೆ ಸಂಪೂರ್ಣ ಉಚಿತವಾಗಿರುತ್ತದೆ. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9632143217 ಅಥವಾ 9449782425 ಸಂಖ್ಯೆಗಳಿಗೆ ಸಂಪರ್ಕಿಸಲು ಪ್ರಕಟಣೆ ತಿಳಿಸಲಾಗಿದೆ.
ವರದಿ: ಪ್ರಶಾಂತ ಹೂಗಾರ, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ