Pink Auto: ಮಹಿಳೆಯರೇ ಗಮನಿಸಿ, ಪಿಂಕ್ ಆಟೋ ಚಾಲಕರಾಗಲು ಹೀಗೆ ಅರ್ಜಿ ಹಾಕಿ

ಪಿಂಕ್ ಆಟೋ (ಸಾಂದರ್ಭಿಕ ಚಿತ್ರ)

ಪಿಂಕ್ ಆಟೋ (ಸಾಂದರ್ಭಿಕ ಚಿತ್ರ)

18 ರಿಂದ 35 ವರ್ಷದವರಿಗೆ ಮಾತ್ರ ಆದ್ಯತೆ ನೀಡಲಾಗಿದೆ. ಆಯ್ಕೆಯಾದ ಅರ್ಹ ಫಲಾನುಭವಿ ಮಹಿಳೆಯರಿಗೆ ಸಂಪೂರ್ಣವಾಗಿ ಉಚಿತ ತರಬೇತಿ ನೀಡಲಾಗುತ್ತದೆ.

  • Share this:

    ವಿಜಯಪುರ: ಮಹಾನಗರ ಪಾಲಿಕೆ ವತಿಯಿಂದ ಮಹಿಳಾ ಸ್ವಸಹಾಯ ಸಂಘದ ಸದಸ್ಯರ ಸಬಲೀಕರಣ ಉದ್ದೇಶದಿಂದ ಪಿಂಕ್ ಆಟೋ (Pink Auto)  ಓಡಿಸಲು ಅರ್ಹ ಮತ್ತು ಆಸಕ್ತ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.


    18 ರಿಂದ 35 ವರ್ಷದ ಎಸ್.ಎಸ್.ಎಲ್.ಸಿ. ಉತ್ತೀರ್ಣರಾದ ಅಭ್ಯರ್ಥಿಗಳು ಮಹಾನಗರ ಪಾಲಿಕೆ ಡೇ-ನಲ್ಮ್ ಯೋಜನೆಯಡಿ ರಚನೆಯಾದ ಸ್ವ ಸಹಾಯ ಸಂಘದ ಸದಸ್ಯರಾಗಿರಬೇಕು. ಆಯ್ಕೆಯಾದ ಸದಸ್ಯರು ವಾಹನ ಚಾಲನಾ ತರಬೇತಿ ಪಡೆದು ಆಟೋ ಓಡಿಸಲು ತಯಾರಿರಬೇಕು. ಈಗಾಗಲೇ ದ್ವಿಚಕ್ರ ವಾಹನ ಚಾಲನಾ ಪ್ರಮಾಣ ಪತ್ರ ಪಡೆದವರಿಗೆ ಆದ್ಯತೆ ನೀಡಲಾಗುತ್ತದೆ.


    ಆಯ್ಕೆಯಾದ ಮಹಿಳೆಯರಿಗೆ ಉಚಿತ ತರಬೇತಿ
    ಹೌದು, ಈ ಯೋಜನೆಗೆ SSLC ಉತ್ತೀರ್ಣರಾದ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. 18 ರಿಂದ 35 ವರ್ಷದವರಿಗೆ ಮಾತ್ರ ಆದ್ಯತೆ ನೀಡಲಾಗಿದೆ. ಆಯ್ಕೆಯಾದ ಅರ್ಹ ಫಲಾನುಭವಿ ಮಹಿಳೆಯರಿಗೆ ಸಂಪೂರ್ಣವಾಗಿ ಉಚಿತ ತರಬೇತಿ ನೀಡಲಾಗುತ್ತದೆ. ದ್ವಿಚಕ್ರ ವಾಹನ ಚಾಲನಾ ಪ್ರಮಾಣ ಪತ್ರ ಪಡೆದವರಿಗೆ ಆದ್ಯತೆಯನ್ನು ನೀಡಲಾಗಿದೆ. ವಿಜಯಪುರ ನಗರ ಮತ್ತು ಎಲ್ಲಾ ತಾಲೂಕಿನ ಅರ್ಹ ಮಹಿಳಾ ಅಭ್ಯರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.


    ಇದನ್ನೂ ಓದಿ: Vijayapura Grapes: ಕಂಡು ಕೇಳರಿಯದ ಹಲವು ಬಗೆಯ ದ್ರಾಕ್ಷಿ, ಇಷ್ಟು ಕಡಿಮೆ ಬೆಲೆಗೆ ಸಿಕ್ಕಿತು ನೋಡಿ!




    ಇಲ್ಲಿದೆ ಸಂಪರ್ಕ ವಿವರ
    ತರಬೇತಿ ನಂತರ ಪಿಂಕ್ ಆಟೋ ತೆಗೆದುಕೊಳ್ಳುವ ಸಂದರ್ಭದಲ್ಲಿ ಫಲಾನುಭವಿ ವಂತಿಕೆ ಹಣ ಯೋಜನಾ ವೆಚ್ಚದ ಶೇ.25 ರಷ್ಟು ಭರಿಸಲು ಸಿದ್ದರಿರುವ ಆಸಕ್ತರು ಮಹಾನಗರ ಪಾಲಿಕೆಯ ಡೇ-ನಲ್ಮ್ ವಿಭಾಗಕ್ಕೆ ಭೇಟಿ ನೀಡಿ ಅರ್ಜಿ ನಮೂನೆ ಪಡೆಯಬಹುದಾಗಿದೆ. ಅರ್ಹ ಮಹಿಳೆಯರು ಅರ್ಜಿ ಅಲ್ಲಿಸಬೇಕಿದೆ. ಭರ್ತಿ ಮಾಡಿದ ಅರ್ಜಿಯನ್ನ ದಿನಾಂಕ 24-02-2023 ರೊಳಗೆ ಸಲ್ಲಿಸಬೇಕಿದೆ.


    ಇದನ್ನೂ ಓದಿ: Vijayapura Viral News: 21 ರ ಹರೆಯದ ಮೊಮ್ಮಗನಿಗೆ ಕಿಡ್ನಿ ದಾನ ಮಾಡಿದ 73 ವರ್ಷದ ಅಜ್ಜಿ!


    ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಮಹಾನಗರ ಪಾಲಿಕೆಯ ಡೇ-ನಲ್ಮ್ ವಿಭಾಗಕ್ಕೆ ಸಂಪರ್ಕಿಸುವಂತೆ ಆಯುಕ್ತರು ಮಾಹಿತಿ ನೀಡಿದ್ದಾರೆ.


    ವರದಿ : ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು