ವಿಜಯಪುರ : ವಿಜಯಪುರ ಜಿಲ್ಲೆಯ (Vijayapura News) ಗೃಹರಕ್ಷಕದಳದ ಘಟಕದಲ್ಲಿ ಖಾಲಿ ಇರುವ “ನಿಷ್ಕಾಮ ಸೇವೆ” ತತ್ವದ ಅಡಿಯಲ್ಲಿ ಸ್ವಯಂ ಸೇವೆ ಸಲ್ಲಿಸಲು ತಯಾರಿರುವ ಅಭ್ಯರ್ಥಿಗಳನ್ನು ಗೃಹರಕ್ಷಕ ಸದಸ್ಯರನ್ನಾಗಿ (Home Guards) ನೋಂದಣಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅರ್ಹ 19 ರಿಂದ 40 ವರ್ಷ ವಯೋಮಾನದ 10 ನೇ ತರಗತಿ ಪಾಸಾದ ಅರ್ಹ ಪುರುಷ ಅಭ್ಯರ್ಥಿಗಳಿಂದ ನಿಗದಿತ ನಮೂನೆಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಿದವರನ್ನು ದೈಹಿಕ, ವೈದ್ಯಕೀಯ ಪರೀಕ್ಷೆ ಮತ್ತು ಪೊಲೀಸ್ ಅಧೀಕ್ಷಕರಿಂದ ಗುಣ ನಡತೆ ಪರಿಶೀಲನೆ ನಂತರ ಗೃಹರಕ್ಷಕ ಸದಸ್ಯರನ್ನಾಗಿ ನೋಂದಣಿ ಮಾಡಿಕೊಳ್ಳಲಾಗುವುದು.
ಹುದ್ದೆಯ ಹೆಸರು | ಗೃಹರಕ್ಷಕ ಸದಸ್ಯರು |
ಸಂಬಳ | ಕರ್ತವ್ಯ ನಿರ್ವಹಿಸಿದ ದಿನಗಳಿಗೆ ಗೌರವ ಧನ |
ಸೇವಾವಧಿ | 3 ವರ್ಷ |
ಅರ್ಜಿ ಎಲ್ಲಿ ಸಿಗುತ್ತೆ? | ವಿಜಯಪುರ ಜಿಲ್ಲಾ ಗೃಹರಕ್ಷಕ ದಳ |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | ಡಿಸೆಂಬರ್ 12 |
ಸಂಪರ್ಕ ಸಂಖ್ಯೆ | 9845250288 |
ಯಾವುದೇ ಸಂಬಳ ಇರದು, ಗೌರವ ಧನ ಮಾತ್ರ
ಇದು ಸಂಪೂರ್ಣ ನಿಷ್ಕಾಮ ಸೇವಾ ಸಂಸ್ಥೆಯಾಗಿದ್ದು ಯಾವುದೇ ಸಂಬಳ ಇರುವುದಿಲ್ಲ. ಗೃಹರಕ್ಷಕ ಸದಸ್ಯರಾಗಿ ನೋಂದಣಿಯಾದ ಸದಸ್ಯರ ಕಾಲಾವಧಿ ಮೂರು ವರ್ಷದ್ದಾಗಿರುತ್ತದೆ.
ಅರ್ಜಿ ಉಚಿತ, ಈ ದಾಖಲೆಗಳ ಅಗತ್ಯವೂ ಇದೆ
ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾ ಗೃಹರಕ್ಷಕ ದಳ ಕಚೇರಿಯಲ್ಲಿ ಉಚಿತವಾಗಿ ಪಡೆಯಬಹುದಾಗಿದೆ. ಎಸ್.ಎಸ್.ಎಲ್.ಸಿ. ಮೇಲ್ಪಟ್ಟ ವರ್ಗಾವಣೆ ಪ್ರಮಾಣಪತ್ರ, ಎಸ್.ಎಸ್.ಎಲ್.ಸಿ.ಮೇಲ್ಪಟ್ಟ ಅಂಕಪಟ್ಟಿ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಸರ್ಕಾರಿ ವೈದ್ಯಾಧಿಕಾರಿಗಳಿಂದ ಪಡೆದ ವೈದ್ಯಕೀಯ ಪ್ರಮಾಣ ಪತ್ರದ ಮೂಲ ಪ್ರತಿ, ಇತ್ತೀಚಿನ 02 ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಅರ್ಜಿ ಸಲ್ಲಿಸಬೇಕಿದೆ.
ಅರ್ಜಿ ಹಾಕಲು ಕೊನೆಯ ದಿನ
ಗೃಹರಕ್ಷಕ ಸದಸ್ಯರಾಗಿ ನೋಂದಣಿ ಮಾಡಿಕೊಳ್ಳಲು ಡಿಸೆಂಬರ್ 12, 2022ರೊಳಗೆ ಅರ್ಜಿ ಸಲ್ಲಿಸಬೇಕಿದೆ. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಎಂ.ಎಂ.ಪೂಜಾರ ಅವರ ಮೊಬೈಲ್ ನಂಬರ್ 9845250288 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ವರದಿ : ಪ್ರಶಾಂತ ಹೂಗಾರ ನ್ಯೂಸ್ 18 ಕನ್ನಡ ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ