• Home
  • »
  • News
  • »
  • vijayapura
  • »
  • Vijayapura: ಮಣ್ಣು ಉಳಿಸೋಕೆ ಕಾಶ್ಮೀರದಿಂದ ಕನ್ಯಾಕುಮಾರಿಗೆ ಕಾಲ್ನಡಿಗೆ ಹೊರಟ ಯುವಕ!

Vijayapura: ಮಣ್ಣು ಉಳಿಸೋಕೆ ಕಾಶ್ಮೀರದಿಂದ ಕನ್ಯಾಕುಮಾರಿಗೆ ಕಾಲ್ನಡಿಗೆ ಹೊರಟ ಯುವಕ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಮುಂದಿನ ಪೀಳಿಗೆಗೆ ಫಲವತ್ತಾದ ಮಣ್ಣು ನೋಡಲೂ ಸಿಗದಿರಬಹುದು ಎಂಬ ಆತಂಕ ಅವರಲ್ಲಿತ್ತು. ಹೀಗಾಗಿ ದೃಢನಿರ್ಧಾರಕ್ಕೆ ಬಂದ ಪವನ್ ಕುಮಾರ್ ಮಣ್ಣಿನ ಸಂರಕ್ಷಣೆ ಜಾಗೃತಿಗಾಗಿ ಕಾಶ್ಮೀರದಿಂದ ಕನ್ಯಾಕುಮಾರಿಗೆ ತಾನೊಬ್ಬನೇ ಪಾದಯಾತ್ರೆ ಹೊರಟಿದ್ದಾರೆ.

  • News18 Kannada
  • Last Updated :
  • Bijapur, India
  • Share this:

    ವಿಜಯಪುರ: ಕಾಲ್ನಡಿಗೆಯಲ್ಲಿ ಸಾಗಿರುವ ಯುವಕ. ಕೈಯಲ್ಲೊಂದು ಸೇವ್ ಸಾಯಿಲ್ ಅನ್ನೋ ಭಿತ್ತಿ ಪತ್ರ. ಹೀಗೆ ಮಣ್ಣಿನ ಸಂರಕ್ಷಣೆಗೆ (Soil Protection) ಮುಂದಾದ ಈ ಯುವಕನದ್ದು ದೇಶ ಪರ್ಯಟನೆಯ ಪಾದಯಾತ್ರೆ(Padyatra) . ಹಾಗಿದ್ರೆ ಈ ಯುವಕ ಹೊರಟಿದ್ದು ಎಲ್ಲಿಂದ? ತಲುಪಬೇಕಾಗಿದ್ದಾದರೂ ಎಲ್ಲಿಗೆ ಅನ್ನೋ ಮಾಹಿತಿ ನಾವ್ ಕೊಡ್ತೀವಿ ನೋಡಿ.


    ಹೌದು, ಇಂಥಹದ್ದೊಂದು ಅಮೂಲ್ಯ ಸಂದೇಶದೊಂದಿಗೆ ಪಾದಯಾತ್ರೆ ಆರಂಭಿಸಿರುವ ಯುವಕನ ಹೆಸರು ಪವನ್ ಕುಮಾರ್. ಇವರು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪೆನಕೊಂಡ ತಾಲೂಕಿನ ಪೈಡೇಟಿ ಗ್ರಾಮದವರು. ರೈತ ಕುಟುಂಬದಲ್ಲಿ ಜನಿಸಿದ ಇವರು ಹೊಲದಲ್ಲಿ ದುಡಿಯಬೇಕಾದರೆ ಮಣ್ಣಿನ ಮಹತ್ವವನ್ನು ಕಣ್ಣಾರೆ ಕಂಡು ಅನುಭವಿಸಿದವರು. ಆ ಸಮಯದಲ್ಲಿ ಮಣ್ಣಿನ ಮೇಲೆ ವಿಪರೀತ ರಾಸಾಯನಿಕಗಳಿಂದ ಆಗುತ್ತಿರುವ ಹಾನಿಯನ್ನು ಗಮನಿಸಿದರು.


    ಕಾಶ್ಮೀರದಿಂದ ಕನ್ಯಾಕುಮಾರಿಗೆ ಪಾದಯಾತ್ರೆ
    ಹೀಗೇ ಆದ್ರೆ ಮುಂದಿನ ಪೀಳಿಗೆಗೆ ಫಲವತ್ತಾದ ಮಣ್ಣು ನೋಡಲೂ ಸಿಗದಿರಬಹುದು ಎಂಬ ಆತಂಕ ಅವರಲ್ಲಿತ್ತು. ಹೀಗಾಗಿ ದೃಢನಿರ್ಧಾರಕ್ಕೆ ಬಂದ ಪವನ್ ಕುಮಾರ್ ಮಣ್ಣಿನ ಸಂರಕ್ಷಣೆ ಜಾಗೃತಿಗಾಗಿ ಕಾಶ್ಮೀರದಿಂದ ಕನ್ಯಾಕುಮಾರಿಗೆ ತಾನೊಬ್ಬನೇ ಪಾದಯಾತ್ರೆ ಹೊರಟಿದ್ದಾರೆ.




    ಮತ್ತೆ ಉದ್ಯೋಗ ಮಾಡುವ ಹಂಬಲ
    27ರ ಹರೆಯದ ಪವನ್ ಕುಮಾರ್ ಏರ್ಲೈನ್ಸ್ ಟೂರಿಸಂ ಮತ್ತು ಹಾಸ್ಪಿಟ್ಯಾಲಿಟಿ ಬಿ.ಎಸ್​ಸಿ ಪದವಿ ಪಡೆದಿದ್ದು, ಕೆಲವು ವರ್ಷ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಮನೆಯವರ ಒಪ್ಪಿಗೆ ಪಡೆದು ಪಾದಯಾತ್ರೆ ಆರಂಭಿಸಿರುವ ಅವರು ಕನ್ಯಾಕುಮಾರಿ ತಲುಪಿ ಯಾತ್ರೆ ಮುಗಿಸಿದ ನಂತರ ಮತ್ತೆ ಉದ್ಯೋಗದಲ್ಲಿ ತೊಡಗುತ್ತೇನೆ ಎನ್ನುತ್ತಾರೆ.


    ಇದನ್ನೂ ಓದಿ: Siddeshwar Swamiji: ದಾಸೋಹಿಗೆ ಅಕ್ಕಿಯ ನಮನ! ಇಲ್ಲಿದೆ ನೋಡಿ ಭಾವನಾತ್ಮಕ ವಿಡಿಯೋ


    2022 ಆಗಸ್ಟ್ 17ರಂದು ಜಮ್ಮುವಿನಿಂದ ಯಾತ್ರೆ ಆರಂಭಿಸಿರುವ ಪವನ್ ಕುಮಾರ್, ಪಂಜಾಬ್, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ ರಾಜ್ಯಗಳಲ್ಲಿ ಸಂಚರಿಸಿ ಸದ್ಯ ವಿಜಯಪುರ ಜಿಲ್ಲೆಗೆ ಆಗಮಿಸಿದ್ದಾರೆ. ಇಲ್ಲಿನ ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ ಅವರನ್ನ ಭೇಟಿಯಾಗಿ ಅವರಿಗೆ ಪಾದಯಾತ್ರೆ ಉದ್ದೇಶ ತಿಳಿಸಿ ಒಂದು ಪತ್ರ ಪಡೆದಿದ್ದಾರೆ.


    ಜಿಲ್ಲಾಧಿಕಾರಿಗಳ ಸಹಾಯ ಪಡೆಯುತ್ತಾರೆ
    ಪವನ್ ಕುಮಾರ್ ದೇಶದ ಯಾವುದೇ ರಾಜ್ಯಕ್ಕೆ ಹೋದರು ಕೂಡಾ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನ ಭೇಟಿಯಾಗಿ ಮಣ್ಣು ರಕ್ಷಣೆ ಬಗ್ಗೆ ಮಾತಾಡುತ್ತಾರೆ. ಕರ್ನಾಟಕದಲ್ಲಂತೂ ಪವನ್ ಕುಮಾರ್ ಪಾದಯಾತ್ರೆಗೆ ಜನ ಉತ್ತಮವಾಗಿ ಸ್ಪಂದಿಸಿದ್ದಾರೆ.
    ಅನ್ನ, ನೀರಿನ ಜೊತೆಗೆ ಗೌರವಿಸಿ ಅವರಿಗೆ ಶುಭ ಹಾರೈಸಿದ್ದಾರೆ.


    ಇದನ್ನೂ ಓದಿ: ಬನದ ಹುಣ್ಣಿಮೆ ಸಂಭ್ರಮದಲ್ಲಿ ಯಲ್ಲಮ್ಮ ತಾಯಿಗೆ ಉಧೋ.. ಉಧೋ..!


    ಒಟ್ಟಿನಲ್ಲಿ ಕಾಶ್ಮೀರದಿಂದ 4000 ಕಿಲೋ ಮೀಟರ್ ದೂರದ ಕನ್ಯಾಕುಮಾರಿಗೆ ಹೊರಟಿರುವ ಪವನ್ ಕುಮಾರ್, ಇನ್ನೇನು 1200 ಕಿಲೋ ಮೀಟರ್ ಕ್ರಮಿಸಬೇಕಿದೆ. ಈ ಮೂಲಕ ಯುವಕನೊಬ್ಬ ಮಣ್ಣಿನ ಸಂರಕ್ಷಣೆಗೆ ಪ್ರಯತ್ನಿಸುತ್ತಿರುವುದು ನಿಜಕ್ಕೂ ಅಭಿನಂದನೀಯ ವಿಚಾರವೇ ಸರಿ.


    ವರದಿ: ಪ್ರಶಾಂತ ಹೂಗಾರ,  ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: