• Home
 • »
 • News
 • »
 • vijayapura
 • »
 • Positive Story: 12 ವರ್ಷಗಳಿಂದ ಸೈಕಲ್ಲೇ ಇವರ ವಾಹನ! ಪಾಕಿಸ್ತಾನಕ್ಕೂ ಭೇಟಿ ನೀಡುವ ಆಸೆ

Positive Story: 12 ವರ್ಷಗಳಿಂದ ಸೈಕಲ್ಲೇ ಇವರ ವಾಹನ! ಪಾಕಿಸ್ತಾನಕ್ಕೂ ಭೇಟಿ ನೀಡುವ ಆಸೆ

X
ಸೈಕಲ್ ಸವಾರಿ!

"ಸೈಕಲ್ ಸವಾರಿ!"

ಅನ್ಬು ಚಾರ್ಲ್ಸ್ ಸೈಕಲ್ ಜಾಥಾ ಮಾತ್ರವಲ್ಲದೇ ದಾರಿಮಧ್ಯೆ ಸಿಗುವ ಶಿಕ್ಷಣ ಸಂಸ್ಥೆ, ಸರ್ಕಾರಿ ಕಛೇರಿ, ಬಸ್ ನಿಲ್ದಾಣದಲ್ಲಿ ಪರಿಸರದ ಕುರಿತಾಗಿ ಶೈಕ್ಷಣಿಕ ಉಪನ್ಯಾಸವನ್ನು ನೀಡ್ತಾರೆ.

 • Share this:

  ವಿಜಯಪುರ: ಸೈಕಲ್ ಹಿಂದೊಂದು ಲಗೇಜ್. ಮುಂದೆ ಜಾಗೃತಿ ಮೂಡಿಸೋ ಭಿತ್ತಿಪತ್ರ. ಹೀಗೆ ತುಳಿಯುತ್ತಾ ಸಾಗಿದ್ದು ಗೊತ್ತಿಲ್ಲದ ಊರಿಗೆ. ಆದರೆ ಇವ್ರು ಹೋದಲೆಲ್ಲ ಜನರೇ ಇವರನ್ನ (Positive Story) ಸ್ವಾಗತಿಸ್ತಾರೆ, ಪ್ರೀತಿಯಿಂದ ಬರಮಾಡಿಕೊಳ್ತಾರೆ. ಒಂದೇ ಸೈಕಲ್​ನಲ್ಲಿ (Cycling)  10 ವರ್ಷಕ್ಕಿಂತಲೂ ಹೆಚ್ಚು ಕಾಲ ಪಯಣಿಸುತ್ತಿರುವ ಇವರ ವಿಶಿಷ್ಟ ಸೇವೆಗೆ ಜನ ತಲೆದೂಗ್ತಾರೆ. ಸೈಕಲ್ ಓಡ್ಸುತ್ತಾ ಪರಿಸರ ಕುರಿತ ಜಾಗೃತಿ ಮೂಡಿಸುತ್ತಿರೋ ಇವರ ಹೆಸರು ಅನ್ಬು ಚಾರ್ಲ್ಸ್ ಅಂತ. ಮೂಲತಃ ತಮಿಳುನಾಡಿನ (Tamil Nadu) ಪುದುಪಟ್ಟಿಯ ಚಾರ್ಲ್ಸ್ ವೃತ್ತಿಯಲ್ಲಿ ಶಿಕ್ಷಕ.


  ಇವರು ಪ್ರಕೃತಿ ವಿಕೋಪಕ್ಕೆ ಮರುಗಿ ಪರಿಸರ ಜಾಗೃತಿಗಾಗಿ ಸೈಕಲ್ ಯಾತ್ರೆಯಲ್ಲಿ ಊರೂರು ಅಲೆದಾಡುತ್ತಾ ಜಾಗೃತಿ ಮೂಡಿಸ್ತಿದ್ದಾರೆ. ಇವರ ಜಾಥಾಕ್ಕೆ ಇಂತಿಷ್ಟೇ ದೂರ ಅಂತೇನೂ ಇಲ್ಲ. ಬದಲಿಗೆ ಜನವಸತಿ, ಆಶ್ರಯ ಸಿಗುವ ತನಕ ಪ್ರತಿದಿನವೂ ಸೈಕಲ್ ಪ್ರಯಾಣ ಮಾಡ್ತಾರೆ.


  ರಾಷ್ಟ್ರದ ಹಿತಕ್ಕಾಗಿ ಸೈಕಲ್
  2005 ರಲ್ಲಿ ಅಪ್ಪಳಿಸಿದ ಸುನಾಮಿ ತಮಿಳುನಾಡಿನಲ್ಲೂ ತನ್ನ ರೌದ್ರ ನರ್ತನ ತೋರಿತ್ತು. ಅಂದು ಸಾವಿರಾರು ಕುಟುಂಬಗಳ ಜೀವನ ಸಮುದ್ರ ನುಂಗಿ ನೀರು ಕುಡಿದಿತ್ತು. ಅವರಲ್ಲಿ ಮಾನಸಿಕ ಧೈರ್ಯ ತುಂಬಲು, ಪರಿಸರದ ಕುರಿತು ಜಾಗೃತಿ ಮೂಡಿಸಲು ಕಳೆದ 12 ವರ್ಷಗಳಿಂದ ಚಾರ್ಲ್ಸ್ ಸೈಕಲ್ ಓಡಿಸ್ತಾನೇ ಇದ್ದಾರೆ. ಅನ್ಬು ಚಾರ್ಲ್ಸ್ ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾನಿಲಯದಲ್ಲಿ ಸಮಾಜಶಾಸ್ತ್ರ ಸ್ನಾತಕೋತ್ತರ ಪದವಿ ಪಡೆದಿದ್ದರು. ಈಗ ಪರಿಸರದ ಮೇಲಿನ ಕಾಳಜಿಯಿಂದಾಗಿ ಎಲ್ಲವನ್ನೂ ತ್ಯಜಿಸಿ, ರಾಷ್ಟ್ರದ ಹಿತಕ್ಕಾಗಿ ಸೈಕಲ್ ತುಳಿಯುತ್ತಾ ಜಾಗೃತಿ ಮೂಡಿಸುತ್ತಿದ್ದಾರೆ.


  ಇದನ್ನೂ ಓದಿ: Communal Harmony: ಹನುಮ ಮಾಲಾಧಾರಿ ಸ್ವಾಮಿ ಜಾಫರ್! ಮುಸ್ಲಿಂ ವ್ಯಕ್ತಿಯ ಭಾವೈಕ್ಯತೆಯ ಮಂತ್ರ


  ದೆಹಲಿಗೆ ತೆರಳುವ ಬಯಕೆ
  ಈಗಾಗಲೇ ಒಂದು ಸುತ್ತು ಸೈಕಲ್ ಯಾತ್ರೆ ಮುಗಿಸಿದರೋ ಚಾರ್ಲ್ಸ್ ಎರಡನೇ ಸುತ್ತಿನಲ್ಲಿ ದೆಹಲಿಗೆ ಪಯಣಿಸುತ್ತಿದ್ದಾರೆ. ಮೊದಲ ಸುತ್ತಿನಲ್ಲಿ ಆಂಧ್ರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಒರಿಸ್ಸಾ, ಪಾಂಡಿಚೇರಿ, ಪಶ್ಚಿಮ ಬಂಗಾಳ, ಗುಜರಾತ್, ರಾಜಸ್ಥಾನ, ಉತ್ತರಪ್ರದೇಶ, ಪಂಜಾಬ್, ಹರಿಯಾಣ, ಛತ್ತೀಸಗಡ್, ಜಾರ್ಖಂಡ್, ಬಿಹಾರ, ದಿಯು ದಮನ್ ಸೇರಿದಂತೆ 20 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಸಂಚರಿಸಿದ್ದಾರೆ.


  ಭೂತಾನ್​, ಪಾಕಿಸ್ತಾನಕ್ಕೂ ಹೋಗುವ ಆಸೆ
  ಇದೀಗ ಎರಡನೇ ಸುತ್ತಿನಲ್ಲಿ ಚಾರ್ಲ್ಸ್ ಕರ್ನಾಟಕ ತಲುಪಿದ್ದು, ಪ್ರಯಾಣ ಮುಂದುವರಿಸಿದ್ದಾರೆ. ಮುಂದೆ ಗೋವಾ, ಮಹಾರಾಷ್ಟ್ರ ಮೂಲಕವಾಗಿ ರಾಷ್ಟ್ರ ರಾಜಧಾನಿ ದೆಹಲಿಗೆ ತೆರಳಲಿರುವ ಅವರು ಅಲ್ಲಿಂದ ಭೂತಾನ್​ಗೆ ತೆರಳಲು ಯೋಚಿಸಿದ್ದಾರೆ. ಸರ್ಕಾರ ಒಪ್ಪಿದರೆ ಪಾಕಿಸ್ತಾನಕ್ಕೂ ತೆರಳಬೇಕೆಂಬ ಇಚ್ಚೆ ಹೊಂದಿದ್ದಾರೆ.


  ಇದನ್ನೂ ಓದಿ: Special Ghee: ಈ ತುಪ್ಪಕ್ಕೆ ಕೆಜಿಗೆ 2,500 ರೂಪಾಯಿ! ಖರೀದಿಸುವ ಮುನ್ನ ಜೇಬು ನೋಡ್ಕೊಳ್ಳಿ


  ಅನ್ಬು ಚಾರ್ಲ್ಸ್ ಸೈಕಲ್ ಜಾಥಾ ಮಾತ್ರವಲ್ಲದೇ ದಾರಿಮಧ್ಯೆ ಸಿಗುವ ಶಿಕ್ಷಣ ಸಂಸ್ಥೆ, ಸರ್ಕಾರಿ ಕಛೇರಿ, ಬಸ್ ನಿಲ್ದಾಣದಲ್ಲಿ ಪರಿಸರದ ಕುರಿತಾಗಿ ಶೈಕ್ಷಣಿಕ ಉಪನ್ಯಾಸವನ್ನು ನೀಡ್ತಾರೆ. ಹೀಗೆ 20 ಸಾವಿರಕ್ಕೂ ಅಧಿಕ ಉಪನ್ಯಾಸವನ್ನೂ ನೀಡಿದ್ದಾರೆ. ಹೀಗೆ ಇಡೀ ಜೀವನವನ್ನು ಸೈಕಲ್ ಮೇಲೆ ಭಾರ ಹಾಕಿ ಪರಿಸರ ಕುರಿತ ಜಾಗೃತಿ ಮೂಡಿಸುತ್ತಿರೋ ಇವರ ಈ ಕಾಯಕ ನಿಜಕ್ಕೂ ಶ್ಲಾಘನೀಯ.


  ವರದಿ: ಪ್ರಶಾಂತ್ ಹೂಗಾರ, ವಿಜಯಪುರ

  Published by:ಗುರುಗಣೇಶ ಡಬ್ಗುಳಿ
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು