• Home
 • »
 • News
 • »
 • vijayapura
 • »
 • Amogha Siddeshwara Fair: ನೂರಾರು ಪಲ್ಲಕ್ಕಿಗಳ ಮುಖಾಮುಖಿ! ಇದು ಭಂಡಾರದೊಡೆಯ ಅಮೋಘ ಸಿದ್ದೇಶ್ವರ ಜಾತ್ರಾ ವೈಭವ

Amogha Siddeshwara Fair: ನೂರಾರು ಪಲ್ಲಕ್ಕಿಗಳ ಮುಖಾಮುಖಿ! ಇದು ಭಂಡಾರದೊಡೆಯ ಅಮೋಘ ಸಿದ್ದೇಶ್ವರ ಜಾತ್ರಾ ವೈಭವ

ಜಾತ್ರೆಯ ವೈಭವ ನೋಡಿ

"ಜಾತ್ರೆಯ ವೈಭವ ನೋಡಿ"

ಕೈಲಾಸವಾಸಿಯಾಗಿದ್ದ ಅಮೋಘ ಸಿದ್ದೇಶ್ವರ, ಶಿವ ಪಾರ್ವತಿಯರ ಸೇವಕರಾಗಿದ್ರು. ಅಮೋಘ ಸಿದ್ದೇಶ್ವರನ ಸೇವೆಗೆ ಶಿವ ಪಾರ್ವತಿ ಮೆಚ್ಚುಗೆ ವ್ಯಕ್ತಪಡಿಸಿ, ವಿಶೇಷ ಶಕ್ತಿ ಕರುಣಿಸಿ ಭೂಲೋಕದಲ್ಲಿ ಸೇವೆ ಮಾಡುವಂತೆ ಹೇಳಿದ್ರಂತೆ.

 • Share this:

  ವಿಜಯಪುರ: ಅಬ್ಬಬ್ಬ! ಅದೇನ್ ಜನ ಅಂತೀರಾ! ಅದೇನು ಸಂಭ್ರಮ ಅಂತೀರಾ!  ವಿಜಯಪುರದ ಭಂಡಾರದ ಮನೆಯ ಅಮೋಘ ಸಿದ್ದೇಶ್ವರನ ಜಾತ್ರೆ ಅಂದ್ರೇನೆ ಹೀಗೆ, ಅಲ್ಲಿ ಸಂಭ್ರಮ ಸಡಗರದ ಜೊತೆಗೆ ಭಕ್ತಿ ಮೇಳೈಸುತ್ತೆ. ದೇವರ ದರ್ಶನ ಪಡೆದು ಆಶೀರ್ವಾದ ಪಡೆಯೋಕೆ ವಿವಿಧ ರೀತಿಯಲ್ಲಿ ಭಕ್ತರು ಮೊರೆಯಿಡ್ತಾರೆ. ವಿಜಯಪುರ ಜಿಲ್ಲೆಯಲ್ಲಿನ (Vijayapura News) ಅರಕೇರಿ ಜಾಲಗೇರಿ ಭಾಗದ ಮುಮ್ಮುಟ್ಟಿಗುಡ್ಡದ ಅಮೋಘ ಸಿದ್ದೇಶ್ವರನ (Amogha Siddeshwara Fair)ಜಾತ್ರೆಗೆ ಏನಿಲ್ಲ ಅಂದ್ರೂ ಲಕ್ಷಾಂತರ ಮಂದಿ ಸೇರ್ತಾರೆ.


  ಉತ್ತರ ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ ಸೇರಿದಂತೆ ಹೊರರಾಜ್ಯಗಳಿಂದಲೂ ಭಕ್ತರು ಆಗಮಿಸಿ ಭಕ್ತಿಭಾವದಲ್ಲಿ ಮಿಂದೇಳ್ತಾರೆ. ಈ ಜಾತ್ರೆಯನ್ನ ಭಂಡಾರದೊಡೆಯನ ಜಾತ್ರೆ ಎಂದೇ ಕರೆಯಲಾಗುತ್ತೆ.


  ಅಮೋಘ ಸಿದ್ದೇಶ್ವರನ ಸೇವೆಗೆ ಶಿವ ಪಾರ್ವತಿ ಮೆಚ್ಚುಗೆ
  ಕೈಲಾಸವಾಸಿಯಾಗಿದ್ದ ಅಮೋಘ ಸಿದ್ದೇಶ್ವರ, ಶಿವ ಪಾರ್ವತಿಯರ ಸೇವಕರಾಗಿದ್ರು. ಅಮೋಘ ಸಿದ್ದೇಶ್ವರನ ಸೇವೆಗೆ ಶಿವ ಪಾರ್ವತಿ ಮೆಚ್ಚುಗೆ ವ್ಯಕ್ತಪಡಿಸಿ, ವಿಶೇಷ ಶಕ್ತಿ ಕರುಣಿಸಿ ಭೂಲೋಕದಲ್ಲಿ ಸೇವೆ ಮಾಡುವಂತೆ ಹೇಳಿದ್ರಂತೆ.


  ಲೋಕ ಕಲ್ಯಾಣಕ್ಕಾಗಿ ಭೂಲೋಕಕ್ಕೆ
  ಆಗ ಅಮೋಘ ಸಿದ್ದೇಶ್ವರ ನಾನು ಭೂಲೋಕಕ್ಕೆ ಹೋಗೋದಿಲ್ಲ, ನಿಮ್ಮ ಸೇವೆಯನ್ನೇ ಮಾಡ್ತೀನಿ ಅಂದ್ರಂತೆ. ಕೊನೆಗೆ ಒಪ್ಪಿ ಭೂಲೋಕಕ್ಕೆ ಬಂದ ಅಮೋಘ ಸಿದ್ದೇಶ್ವರ ಲೋಕ ಕಲ್ಯಾಣಕ್ಕಾಗಿ ಶ್ರಮಿಸಿದ್ರಂತೆ.


  ಹಲವು ಪವಾಡಗಳ ನಂಬಿಕೆ
  ಸಾವಿರಾರು ವರ್ಷಗಳ ಹಿಂದೆ ವಿಜಯಪುರ ಜಿಲ್ಲೆಯ ಅರಕೇರಿ ಜಾಲಗೇರಿ ಗ್ರಾಮದ ಮಧ್ಯೆದ ಮುಮ್ಮಟ್ಟಿಗುಡ್ಡದಲ್ಲಿ ನೆಲೆಸಿರೋ ಅಮೋಘ ಸಿದ್ದೇಶ್ವರ ಹಲವು ಪವಾಡಗಳ ಮೂಲಕ ಭಕ್ತರ ಉದ್ಧಾರ ಮಾಡಿ, ಲಕ್ಷಾಂತರ ಭಕ್ತರನ್ನು ಹೊಂದಿರೋ ಪ್ರತೀತಿ ಇದೆ. ಈ ಎಲ್ಲಾ ನೆನಪುಗಳು ಜಾತ್ರೆ ಮೂಲಕ ಪ್ರತಿಧ್ವನಿಸುತ್ತೆ.


  ಇದನ್ನೂ ಓದಿ: Vijayapura: ಬಾಲಕನ ನೆರವಿಗೆ ನಿಂತ ಅಪ್ಪು ಫ್ಯಾನ್ಸ್; ಇವರು ಭೀಮಾತೀರದ ಹೃದಯವಂತರು!


  ಪ್ರತಿವರ್ಷ ಚೆಟ್ಟಿ ಅಮಾವಾಸ್ಯೆಯಂದು ಅಮೋಘ ಸಿದ್ದೇಶ್ವರ ಜಾತ್ರೆ ಮೂರು ದಿನಗಳ ಕಾಲ ನಡೆಯುತ್ತೆ. ಅಮೋಘ ಸಿದ್ದೇಶ್ವರ ಮಕ್ಕಳು, ಮೊಮ್ಮಕ್ಕಳು ಪಲ್ಲಕ್ಕಿ ರೂಪದಲ್ಲಿ 1700 ಪಲ್ಲಕ್ಕಿಗಳು ವಿವಿಧ ಗ್ರಾಮಗಳಿಂದ ಇಲ್ಲಿಗೆ ಆಗಮಿಸುತ್ತವೆ. ಜಾತ್ರೆಯಂದು ಆಗಮಿಸೋ ಪಲ್ಲಕ್ಕಿ ಭಂಡಾರಮಯವಾಗಿ ಭಕ್ತರ ಹರ್ಷೋದ್ಗಾರ ಮಧ್ಯೆ ಅಮೋಘ ಸಿದ್ದೇಶ್ವರ ಗದ್ದುಗೆ ದರ್ಶನ ಪಡೆಯುತ್ತಾರೆ.


  ನೂರಾರು ಪಲ್ಲಕ್ಕಿಗಳ ಮುಖಾಮುಖಿ
  ದೇಗುಲದ ಮುಂಭಾಗದಲ್ಲಿ ನೂರಾರು ಪಲ್ಲಕ್ಕಿಗಳು ಮುಖಾಮುಖಿ ಆಗಿ, ಭಕ್ತಿಭಾವದಿಂದ ನೃತ್ಯ ಮಾಡುತ್ತವೆ. ಜೊತೆಗೆ ಭಂಡಾರವನ್ನು ಎರಚಿ ಭಕ್ತರು ಸಂಭ್ರಮಿಸುತ್ತಾರೆ. ಈ ಎಲ್ಲ ಸಂಭ್ರಮ ನೋಡುವುದೇ ಕಣ್ಣಿಗೆ ಹಬ್ಬದಂತೆ ಭಾಸವಾಗುತ್ತೆ.


  ಇದನ್ನೂ ಓದಿ: Vijayapura: ನಷ್ಟವಾಯ್ತೆಂದು ಎದೆಗುಂದಲಿಲ್ಲ ಈ ರೈತ, ಚೆಂಡು ಹೂವಿನಿಂದ ಗೊಬ್ಬರ!


  ಜಾತಿ, ಮತ, ಪಂಥ ಯಾವ ಭೇದಭಾವ ಇಲ್ಲದೇ ಎಲ್ಲರೂ ಭಾಗಿಯಾಗೋದು ಈ ಜಾತ್ರೆಯ ವಿಶೇಷ. ಕಳೆದ ಮೂರು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಅದ್ದೂರಿ ಜಾತ್ರೆ ನಡೆದಿರ್ಲಿಲ್ಲ. ಇದೀಗ ಮೂರು ದಿನಗಳ ಕಾಲ ಲಕ್ಷಾಂತರ ಭಕ್ತರು ಭಕ್ತಿ ಪರಾಕಾಷ್ಟೆಯಲ್ಲಿ ಮಿಂದೆದ್ರು. ದರ್ಶನ ಪಡೆದು ಪುನೀತರಾದರು.


  ವರದಿ: ಪ್ರಶಾಂತ ಹೂಗಾರ, ನ್ಯೂಸ್18 ಕನ್ನಡ ವಿಜಯಪುರ

  Published by:ಗುರುಗಣೇಶ ಡಬ್ಗುಳಿ
  First published: