ಹೊತ್ತು ಮುಳುಗುತ್ತಿದ್ದಂತೆ ಲೈಟಿಂಗ್ ಕಲರವ. ಬಣ್ಣಬಣ್ಣದ ದೀಪಗಳ ಝಗಮಗ. ಪ್ರವಾಸಿಗರ ಕಣ್ಮನ ಸೆಳೆಯುತ್ತೆ ನೋಡಿ 3ಡಿ ಕಲಾಕೃತಿಗಳು ಚಿತ್ತಾರ. ಆಲಮಟ್ಟಿಗೆ ಆಗಮಿಸಿದ ಪ್ರವಾಸಿಗರು ಸ್ವಾಗತಿಸ್ತಿದೆ ಈ ವಿಶೇಷ ಸಂಭ್ರಮ. ಆಲಮಟ್ಟಿಯ (Almatti) 77 ಎಕರೆ ಉದ್ಯಾನದ ಪ್ರವೇಶ ದ್ವಾರವಾದ ಎಂಟ್ರನ್ಸ್ ಪ್ಲಾಜಾ ಕಟ್ಟಡದ ಕಲಾಕೃತಿಗೆ 3ಡಿ ಪ್ರೊಜೆಕ್ಷನ್ ಮ್ಯಾಪಿಂಗ್ (3D Projection Mapping) ಬೆಳಕಿನ ವ್ಯವಸ್ಥೆಯನ್ನ ಕಲ್ಪಿಸಲಾಗಿದೆ. ಕರ್ನಾಟಕದಲ್ಲೇ (Karnataka) ಇದು ಮೊದಲ ಪ್ರಯೋಗವಾಗಿರೋ ಕಾರಣ ಪ್ರವಾಸಿಗರು ನಾಮುಂದು ತಾಮುಂದು ಎಂದು ಆಗಮಿಸ್ತಿದ್ದಾರೆ.
60 ಮೀಟರ್ ಅಗಲ ಹಾಗೂ 16 ಮೀಟರ್ ಎತ್ತರದವರೆಗೆ ಈ 3ಡಿ ಪ್ರೊಜೆಕ್ಷನ್ ಮ್ಯಾಪಿಂಗ್ ಮಾಡಲಾಗಿದೆ. ಕತ್ತಲಾಗ್ತಿದ್ದಂತೆ 3ಡಿ ಪ್ರಾಜೆಕ್ಷನ್ ಮ್ಯಾಪಿಂಗ್ ಬೆಳಕು ಎಲ್ಲರ ಕಣ್ಣು ಕೋರೈಸದೇ ಬಿಡದು. ಅತ್ಯದ್ಭುತ ನಿರೂಪಣೆ ಇರೋದ್ರಿಂದ ನೈಜ ದೃಶ್ಯಾವಳಿಗಳು ತೆರೆಯ ಮೇಲೆ ಕಾಣುವಂತೆ ಭಾಸವಾಗುತ್ತದೆ.
ಇದನ್ನೂ ಓದಿ: Free Bus Pass: 45 ಕಿಲೋ ಮೀಟರ್ವರೆಗೆ ಉಚಿತ ಬಸ್ ಪ್ರಯಾಣ ಮಾಡೋಕೆ ಹೀಗೆ ಮಾಡಿ
ಪರಿಣಾಮಕಾರಿಯಾಗಿ ಕಾಣೋಕೆ ಇಲ್ಲಿದೆ ಕಾರಣ!
ಪ್ರವೇಶ ದ್ವಾರದ ಬೃಹತ್ ಗೋಡೆಯ ಮೇಲೆ ನೃತ್ಯ ಮಾಡುವ ಚಿಟ್ಟೆಗಳು, ನೈಜ ಜೀವನದ ಡೈನೋಸಾರ್ಗಳು, ಬೃಹತ್ ಕಲಾಕೃತಿಗಳು, ಕಾರಿಗೆ ಬೆಂಕಿ ಬಿದ್ದಾಗ ಉಂಟಾಗುವ ಸ್ಥಿತಿ, ಕಟ್ಟಡ ಬೀಳುವ, ಕಟ್ಟಡ ಕಟ್ಟುವ ಹೀಗೆ ಈ ರೀತಿಯ ವಿವಿಧ ವಿಷಯಗಳನ್ನೊಳಗೊಂಡ ನೈಜ ಚಿತ್ರಗಳು ಇಲ್ಲಿ ಪ್ರದರ್ಶಿಸಲಾಗುತ್ತೆ. ಆ ಚಿತ್ರಕ್ಕೆ ತಕ್ಕಂತೆ ತಾಂತ್ರಿಕ ರೀತಿಯ ಡಾಲ್ಬಿ ಧ್ವನಿಯನ್ನು ಅಳವಡಿಸಲಾಗಿದ್ದು, ಇನ್ನಷ್ಟು ಪರಿಣಾಮಕಾರಿಯಾಗಿ ಮೂಡಿ ಬರುವಂತೆ ಮಾಡಿದೆ.
ಇದನ್ನೂ ಓದಿ: Vijayapura: ಮನೆಯ ಹಿರಿಯರಿಗೆ ಜೀವ ತರಿಸುವ ಬೆಚ್ಚಗಿನ ಕೌದಿ! ಚಳಿಗಾಲದಲ್ಲಿ ಇದು ಬಾರೀ ಬೆಸ್ಟ್
ಪ್ರವಾಸಿಗರಿಗೆ ಬೋನಸ್ ಗಿಫ್ಟ್
ಪ್ರಾಜೆಕ್ಷನ್ ಮೂಲಕ 10 ಬಗೆಯ 8 ರಿಂದ 10 ನಿಮಿಷದ ಒಂದೊಂದು ಥೀಮ್ಗಳನ್ನು ಪ್ರಸಾರ ಮಾಡಲಾಗ್ತಿದೆ. ಈ ಮೂಲಕ ಆಲಮಟ್ಟಿಗೆ ಬರೋ ಪ್ರವಾಸಿಗರಿಗೆ ಈ 3ಡಿ ಪ್ರಾಜೆಕ್ಷನ್ ಮ್ಯಾಪಿಂಗ್ ಬೋನಸ್ ಗಿಫ್ಟ್ನಂತೆ ಸ್ವಾಗತ ಕೋರುತ್ತಿದೆ.
ವರದಿ: ಪ್ರಶಾಂತ ಹೂಗಾರ್, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ