• Home
  • »
  • News
  • »
  • vijayapura
  • »
  • Good News: ಕೆಲಸ ಹುಡುಕುತ್ತಿರುವವರಿಗೆ ಸುವರ್ಣಾವಕಾಶ; ಮಹಿಳಾ ವಿವಿಯಲ್ಲಿ ಉದ್ಯೋಗ ಮೇಳ

Good News: ಕೆಲಸ ಹುಡುಕುತ್ತಿರುವವರಿಗೆ ಸುವರ್ಣಾವಕಾಶ; ಮಹಿಳಾ ವಿವಿಯಲ್ಲಿ ಉದ್ಯೋಗ ಮೇಳ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಂಗಳೂರು ಹಾಗೂ ಧಾರವಾಡಗಳಿಂದ ತಲಾ 2, ಕಲಬುರಗಿಯಿಂದ 1, ಹಾಗೂ ವಿಜಯಪುರದಿಂದ ಹಲವು ಸೇರಿ ಒಟ್ಟು 25ಕ್ಕೂ ಹೆಚ್ಚು ಕಂಪನಿಗಳು ಮೇಳದಲ್ಲಿ ಭಾಗವಹಿಸಲಿವೆ.

  • Share this:

    ವಿಜಯಪುರ: ನಗರದ ಹೊರಭಾಗದಲ್ಲಿರುವ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದಲ್ಲಿ (Akkamahadevi Women's University ) ಇದೇ ಮೊದಲ ಬಾರಿಗೆ ಉದ್ಯೋಗ ಮೇಳ ನಡೆಯಲಿದೆ. ದಿನಾಂಕ 25 ಶುಕ್ರವಾರದಂದು ಬೆಳಗ್ಗೆ 9.30ರಿಂದ ಸಂಜೆ 4.30ರವರೆಗೆ ಉದ್ಯೋಗ ಈ ಮೇಳ ನಡೆಯಲಿದೆ. ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾ ಕೌಶಲ ಮಿಷನ್ ಹಾಗೂ ಸಹಯೋಗದಲ್ಲಿ ರಾಷ್ಟ್ರೀಯ ವೃತ್ತಿ ಸೇವಾ ಯೋಜನೆ (ಎನ್‌ಸಿಎಸ್‌ಪಿ)ಯಡಿ ಮಹಿಳಾ ವಿವಿಯ ಡಾ. ಅಂಬೇಡ್ಕರ್ ಭವನದಲ್ಲಿ ವಿವಿಯಲ್ಲಿ ಉದ್ಯೋಗ ಮೇಳ (Job Fair In Vijayapura) ಆಯೋಜಿಸಲಾಗಿದೆ.


    25 ಕ್ಕೂ ಹೆಚ್ಚು ಕಂಪನಿಗಳು ಬರುವ ನಿರೀಕ್ಷೆ
    ಬೆಂಗಳೂರು ಹಾಗೂ ಧಾರವಾಡಗಳಿಂದ ತಲಾ 2, ಕಲಬುರಗಿಯಿಂದ 1, ಹಾಗೂ ವಿಜಯಪುರದಿಂದ ಹಲವು ಸೇರಿ ಒಟ್ಟು 25ಕ್ಕೂ ಹೆಚ್ಚು ಕಂಪನಿಗಳು ಮೇಳದಲ್ಲಿ ಭಾಗವಹಿಸಲಿವೆ. 18 ವರ್ಷ ಮೇಲ್ಪಟ್ಟ ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ ಯುವಕ ಯುವತಿಯರು ಮೇಳದಲ್ಲಿ ಭಾಗವಹಿಸಬಹುದಾಗಿದ್ದು, ಮಾಹಿತಿಗೆ ದೂರವಾಣಿ ಸಂಖ್ಯೆ 08352-250383, ಮೊ. 9945000793 ಈ ನಂಬರಗೆ ಕರೆಮಾಡಿ ಸಂಪರ್ಕಿಸಬಹುದಾಗಿದೆ.


    ಇಂದೇ ಹೆಸರು ನೋಂದಾಯಿಸಿ
    ಉದ್ಯೋಗ ಆಕಾಂಕ್ಷಿಗಳು ವೆಬ್​ಸೈಟ್ ಮೂಲಕ ಮೂಲಕ ಆನ್‌ಲೈನ್‌ನಲ್ಲಿ ತಮ್ಮ ಹೆಸರನ್ನ ನೋಂದಾಯಿಸಿಕೊಳ್ಳಬಹುದು. ವೆಬ್​ಸೈಟ್​ನಲ್ಲಿ ನೋಂದಣಿ ಮಾಡಲು ಇಲ್ಲಿ ಕ್ಲಿಕ್ ಮಾಡಿ. ಪ್ರವೇಶ ಉಚಿತವಾಗಿದ್ದು, ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ ಸ್ಥಳದಲ್ಲೇ ನೇಮಕಾತಿ ಪತ್ರ ವಿತರಿಸಲಾಗುತ್ತದೆ ಎಂದು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿ ಕುಲಪತಿ ಫ್ರೊ. ಬಿ. ಕೆ.ತುಳಸಿಮಾಲಾ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.


    ವರದಿ: ಪ್ರಶಾಂತ ಹೂಗಾರ ನ್ಯೂಸ್18 ಕನ್ನಡ ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: