• Home
  • »
  • News
  • »
  • vijayapura
  • »
  • African Tulip Flowers: ಚಂದ ಚಂದದ ಹೂ ಹೊದ್ದು ನಿಂತ ಬೆಂಕಿ ಮರಗಳು!

African Tulip Flowers: ಚಂದ ಚಂದದ ಹೂ ಹೊದ್ದು ನಿಂತ ಬೆಂಕಿ ಮರಗಳು!

X
ಹೂಗಳ ಸೌಂದರ್ಯ ಸವಿಯಿರಿ!

"ಹೂಗಳ ಸೌಂದರ್ಯ ಸವಿಯಿರಿ!"

ಮೂಲತಃ ದಕ್ಷಿಣ ಆಫ್ರಿಕಾ ದೇಶದ ಹೂಗಳಾಗಿರುವುದರಿಂದ, ಆಫ್ರಿಕನ್ ಟುಲಿಪ್ ಎಂದು ಕರೆಯಲಾಗುತ್ತೆ. ಆದ್ರೆ ಹಳ್ಳಿ ಭಾಷೆಯಲ್ಲಿ ನೀರುಕಾಯಿ ಮರ, ಬೆಂಕಿ ಮರ ಎಂದು ಹೇಳಲಾಗುತ್ತೆ.

  • Share this:

    ವಿಜಯಪುರ: ಮರದ ತುಂಬಾ ದಾಸವಾಳದಂಥಾ ಹೂಗಳು! (Flowers In Tree) ಚಳಿಗಾಲದಲ್ಲಿ ನಳನಳಿಸುವ ಬಣ್ಣಬಣ್ಣದ ಪುಷ್ಪಗಳು. ಮರಗಳಿಗೆ ನವವಧುವಿನ ಅಲಂಕಾರದ ಲುಕ್ ನೀಡಿರೋ ಈ ಹೂಗಳು ವಿಜಯಪುರದ (Vijayapura News) ವಾಹನ ಸವಾರರನ್ನು ಒಂದು ಕ್ಷಣ ನಿಂತು ನೋಡುವಂತೆ ಆಕರ್ಷಿಸುತ್ತಿವೆ. ವಿಜಯಪುರದ ನಿಡಗುಂದಿ ತಾಲೂಕಿನ ಹಲವೆಡೆ ಈ ಹೂಗಳದ್ದೇ ಕಾರುಬಾರು. ಮಳೆಗಾಲ (Karnataka Rains) ಮುಗಿದು ಚಳಿಗಾಲ ಆರಂಭವಾಗುತ್ತಿದ್ದಂತೆ ಮರಗಳು ಕೆಂಬಣ್ಣದ ಹೂ (African Tulip Flowers)ಬಿಟ್ಟಿದ್ದು ಆಯಸ್ಕಾಂತಕ್ಕಿಂತ ಬಲವಾಗಿ ಆಕರ್ಷಿಸುತ್ತಿವೆ!


    ಆಲಮಟ್ಟಿಯ ಕೃಷ್ಣಾ ಭಾಗ್ಯ ಜಲನಿಗಮದ ಅರಣ್ಯ ಇಲಾಖೆಯಿಂದ ಹಲವು ವರ್ಷಗಳ ಹಿಂದೆ ಇಲ್ಲಿನ ರಾಕ್ ಗಾರ್ಡನ್, ಸೇರಿದಂತೆ ಉದ್ಯಾನವನದ ರಸ್ತೆಯ ಎರಡು ಬದಿಗಳಲ್ಲಿ ಈ ಮರಗಳು ನೆಡಲಾಗಿತ್ತು.


    ಇದನ್ನೂ ಓದಿ: Jod Gumbaz: ಹರಕೆ ಈಡೇರಲು ಬೀಗ ಲಾಕ್! ಇಷ್ಟಾರ್ಥ ಈಡೇರಿದ್ರೆ ಮಾತ್ರ ಅನ್​ಲಾಕ್


    ಮೂಲತಃ ದಕ್ಷಿಣ ಆಫ್ರಿಕಾದ ಹೂಗಳು!
    ಈಗ ಆ ಮರಗಳು ಹೂಗಳಿಂದ ಕಂಗೊಳಿಸುತ್ತಿದೆ. ಇದು ಮೂಲತಃ ದಕ್ಷಿಣ ಆಫ್ರಿಕಾ ದೇಶದ ಹೂಗಳಾಗಿರುವುದರಿಂದ, ಆಫ್ರಿಕನ್ ಟುಲಿಪ್ ಎಂದು ಕರೆಯಲಾಗುತ್ತೆ. ಆದ್ರೆ ಹಳ್ಳಿ ಭಾಷೆಯಲ್ಲಿ ನೀರುಕಾಯಿ ಮರ, ಬೆಂಕಿ ಮರ ಎಂದು ಹೇಳಲಾಗುತ್ತೆ.


    ಇದನ್ನೂ ಓದಿ: Viral Fair: ವಿಜಯಪುರದಲ್ಲಿ ಭಕ್ತರು ಕಲ್ಲಿಗೆ ತಲೆಗೆ ಜಜ್ಜಿಕೊಳ್ಳುವ ಜಾತ್ರೆ!


    ಉತ್ತರ ಕರ್ನಾಟಕಕ್ಕೆ ಅಷ್ಟು ಪರಿಚಿತವಲ್ಲ!
    ಜಗತ್ತಿನ ಬಹುತೇಕ ದೇಶಗಳಲ್ಲಿ ಈ ಮರದ ಹೂಗಳನ್ನು ಅಲಂಕಾರಕ್ಕೆಂದೇ ಬೆಳೆಯಲಾಗುತ್ತದೆಯಂತೆ. ರಾಜ್ಯದ ಹಲವೆಡೆ ಈ ಮರಗಳು ಕಂಡು ಬಂದ್ರೂ ಉತ್ತರ ಕರ್ನಾಟಕದ ಜನತೆಗೆ ಈ ಮರವೇ ಅಪರೂಪ. ಹಾಗಾಗಿ ಅರಣ್ಯ ಇಲಾಖೆ ಹೂಗಳನ್ನು ವಿಜಯಪುರಕ್ಕೆ ಪರಿಚಯಿಸುವ ಮೂಲಕ, ನಗರದ ಸೌಂದರ್ಯವನ್ನೂ ಹೆಚ್ಚಿಸಿದೆ.


    ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು