ಬಾಗಲಕೋಟೆ: ಎಲ್ಲಿ ನೋಡಿದರಲ್ಲಿ ಕಂಗೊಳಿಸೋ ಕಾವಿ. ಶರಣ ಸಾಹಿತ್ಯದ (Sharana Sahitya) ಮೂಲಕ ಭಕ್ತರಿಂದ ದೇವರ ಮೊರೆ. ತ್ರಿವೇಣಿ ಸಂಗಮವೀಗ ಆಗಿದೆ ನೋಡಿ ಕೇಸರಿಮಯ. ಹಾಗಿದ್ರೆ ಶರಣರ ನಾಡಲ್ಲಿ ಇದೇನು ಸಂಭ್ರಮ (Sharana Mela) ಅಂತೀರಾ? ಆ ಸಂಭ್ರಮ ಕುರಿತ ಮಾಹಿತಿ ನಾವ್ ನೀಡ್ತೀವಿ ಬನ್ನಿ.
ಹೌದು, ಶರಣರ ನಾಡು ಬಾಗಲಕೋಟೆಯ ಕೂಡಲ ಸಂಗಮ ಈಗ 36ನೇ ಶರಣ ಮೇಳಕ್ಕೆ ವೇದಿಕೆಯಾಗಿದೆ. ಹೀಗಾಗಿ ಇಡೀ ಊರೇ ಕಾವಿಗಳಿಂದ ಆವರಿಸಿಕೊಂಡಿದೆ. ಕ್ಷೇತ್ರಕ್ಕೆ ಬರುವ ಭಕ್ತರೂ ಕೂಡಾ ಕೇಸರಿ ವಸ್ತ್ರ ತೊಟ್ಟುಕೊಂಡೇ ಇಲ್ಲಿಗೆ ಆಗಮಿಸುತ್ತಿದ್ದಾರೆ. ಶನಿವಾರ ಸಂಕ್ರಾಂತಿ ಆಗಿದ್ರಿಂದ ಭಕ್ತರ ಸಂಖ್ಯೆಯೂ ಹೆಚ್ಚಿದೆ.
ಅದ್ದೂರಿ ಶರಣ ಮೇಳ
ಪ್ರತಿ ವರ್ಷ ಶರಣ ಮೇಳ ನಡೆದುಕೊಂಡು ಬಂದಿದ್ದು, ಕಳೆದ ಕೋವಿಡ್ ಅವಧಿಯಲ್ಲಿ ಸರಳ ರೀತಿಯಲ್ಲಿ ಆಚರಿಸಲಾಗಿತ್ತು. ಈ ಬಾರಿ ಅಂತ ಯಾವುದೇ ಆತಂಕವಿಲ್ಲದೇ ಹೋಗಿದ್ರಿಂದ ಅದ್ಧೂರಿಯಾಗಿ ಶರಣ ಮೇಳ ನಡೆಯುತ್ತಿದೆ.
ಇದನ್ನೂ ಓದಿ: Bagalkot: ತೆರಬಂಡಿ ಸ್ಪರ್ಧೆಯಲ್ಲಿ ಗೆದ್ದರೆ ಕಾರ್, ಬೈಕ್ ಬಹುಮಾನ!
ಸಾವಿರಾರು ಭಕ್ತರ ಸಮ್ಮಿಲನ
ಶರಣ ಮೇಳದಲ್ಲಿ ಭಾಗವಹಿಸಲು ರಾಜ್ಯದ ಹಲವಾರು ಜಿಲ್ಲೆಯ ಹೆಸರಾಂತ ಸ್ವಾಮೀಜಿಗಳು ಈ ಸಂಗಮ ಕ್ಷೇತ್ರದಲ್ಲಿ ಒಟ್ಟುಗೂಡಿದ್ದಾರೆ. ಜೊತೆಗೆ ಸಾವಿರಾರು ಭಕ್ತರು ತ್ರಿವೇಣಿ ಸಂಗಮ ಕ್ಷೇತ್ರದಲ್ಲಿ ಸಮ್ಮಿಲನವಾಗಿದ್ದಾರೆ.
ಇದನ್ನೂ ಓದಿ: Sankranthi 2023: ಕಾಲೇಜ್ ಕ್ಯಾಂಪಸ್ನಲ್ಲಿ ಸಂಕ್ರಾಂತಿ ಸಡಗರ! ಹೀಗಿತ್ತು ನೋಡಿ ವಿದ್ಯಾರ್ಥಿಗಳ ಬೆರಗು ಬಿನ್ನಾಣ
ಈ ವರ್ಷ ಶರಣ ಮೇಳದಲ್ಲಿ ಯೋಗ ಶಿಬಿರ, ಲಿಂಗಾಂಗ ಯೋಗ, ಸಾಮೂಹಿಕ ಇಷ್ಟಲಿಂಗಾರ್ಚನೆ, ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜೊತೆಗೆ ಕೂಡಲಸಂಗಮದ ಸನ್ನಿಧಾನದಲ್ಲಿ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ. ಸಂಗೀತ ಕಾರ್ಯಕ್ರಮದ ಮೂಲಕ ಶರಣ ಸಾಹಿತ್ಯದ ಇಂಪು ಕೇಳಬಹುದಾಗಿದೆ. ಹೀಗೆ ಶರಣ ಮೇಳ ಶರಣರ ನಾಡು ಕೂಡಲಸಂಗಮದಲ್ಲಿ ಆಧ್ಯಾತ್ಮಿಕತೆಯ ಸೆಳೆ ಕಳೆಗಟ್ಟುವಂತೆ ಮಾಡಿದೆ.
ವರದಿ : ಪ್ರಶಾಂತ ಹೂಗಾರ, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ