ಸಾಗರದ ಜಗತ್ತು ಸಾಮಾನ್ಯ ಪ್ರಪಂಚಕ್ಕಿಂತ ಬಹಳ ಭಿನ್ನವಾಗಿದೆ. ಅಲ್ಲಿನ ತಾಪಮಾನ, ಸಸ್ಯಗಳು, ಕೀಟಗಳು, ಪ್ರಾಣಿಗಳು ಎಲ್ಲವೂ ನೆಲದ ಮೇಲಿನ ಪ್ರಪಂಚಕ್ಕಿಂತ ವಿಭಿನ್ನವಾಗೇ ಇರುತ್ತದೆ. ಸಾಗರ ನಿಗೂಢ ರಹಸ್ಯಗಳ ಆಗರವನ್ನೇ ತುಂಬಿಕೊಂಡಿದ್ದು, ಇನ್ನೂ ಆನೇಕ ಪ್ರಭೇದಗಳ ಸಸ್ಯ, ಪ್ರಾಣಿಗಳು ಜನರ ಕಣ್ಣಿಗೆ ಪತ್ತೆಯಾಗದೆ ಉಳಿದಿವೆ. ಇದೇ ರೀತಿ, ಇತ್ತೀಚಿನ ಬೆಳವಣಿಗೆಯಲ್ಲಿ, ಗುಲಾಬಿ ಅಥವಾ ಪಿಂಕ್ ಬಣ್ಣದ ಡಾಲ್ಫಿನ್ ಅನ್ನು ಕ್ಯಾಮರಾದಲ್ಲಿ ರೆಕಾರ್ಡ್ ಮಾಡಲಾಗಿದೆ ಮತ್ತು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ವಿಡಿಯೋವನ್ನು ಅನೇಕರು ಶೇರ್ ಮಾಡಿಕೊಂಡಿದ್ದಾರೆ.
ಸಮುದ್ರದಲ್ಲಿ ಕಾಣಿಸಿಕೊಂಡ ಗುಲಾಬಿ ಡಾಲ್ಫಿನ್..!
ನಾವೆಲ್ಲರೂ ಡಾಲ್ಫಿನ್ ವಿಡಿಯೋಗಳನ್ನು ಸಾಮಾನ್ಯವಾಗಿ ನೋಡಿರುತ್ತೇವೆ. ಈ ಬುದ್ಧಿವಂತ ಪ್ರಾಣಿಗಳು ಜೀವಗಳನ್ನು ಉಳಿಸುವ ಅಥವಾ ತುಂಬಾ ತಮಾಷೆಯಾಗಿರುವ ವೈರಲ್ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಲಭ್ಯವಿದೆ. ಆದರೆ, ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಇತ್ತೀಚೆಗೆ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಡಾಲ್ಫಿನ್ನ ವಿಡಿಯೋವನ್ನು ಹಂಚಿಕೊಂಡಿದ್ದು, ಇದು ಸಾಮಾನ್ಯ ನೀಲಿ ಅಥವಾ ಕಪ್ಪು ಡಾಲ್ಫಿನ್ಗಳಲ್ಲ, ಬದಲಾಗಿ ಈ ವಿಡಿಯೋದಲ್ಲಿ ಕಾಣುವುದು ಪಿಂಕ್ ಅಥವಾ ಗುಲಾಬಿ ಬಣ್ಣದ ಡಾಲ್ಫಿನ್. ಇದು ಅಪರೂಪದ ದೃಶ್ಯವೇ ಸರಿ. ಅಲ್ಲದೆ, ''ನೀವು ಇದುವರೆಗೆ ಪಿಂಕ್ ಡಾಲ್ಫಿನ್ ಅನ್ನು ನೋಡಿಲ್ಲದಿದ್ದರೆ'' ಎಂಬ ಕ್ಯಾಪ್ಷನ್ ಅನ್ನೂ ಸುಶಾಂತ್ ನಂದಾ ತಮ್ಮ ಫಾಲೋವರ್ಸ್ಗಳಿಗೆ ಪಿಂಕ್ ಡಾಲ್ಫಿನ್ ವಿಡಿಯೋ ಶೇರ್ ಮಾಡಿದ್ದಾರೆ.
ಡಾಲ್ಫಿನ್ಗಳನ್ನು ಅತ್ಯಂತ ಸ್ನೇಹಪರ ಪ್ರಾಣಿಗಳೆಂದು ಪರಿಗಣಿಸಲಾಗಿದ್ದು, ಈ ವಿಡಿಯೋದಲ್ಲೂ ಪಿಂಕ್ ಡಾಲ್ಫಿನ್ ನೀರಿನಲ್ಲಿ ಮಕ್ಕಳಂತೆ ಆಟವಾಡುತ್ತಿರುವುದು ಕಂಡುಬರುತ್ತದೆ. ಈ ವೈರಲ್ ವಿಡಿಯೋವನ್ನು 72 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, 5 ಸಾವಿರಕ್ಕೂ ಹೆಚ್ಚು ನೆಟ್ಟಿಗರು ಈ ಟ್ವೀಟ್ಗೆ ಲೈಕ್ ಮಾಡಿದ್ದಾರೆ. ಇನ್ನು, ನೂರಾರು ಜನರು ಈ ವಿಡಿಯೋಗೆ ಕಮೆಂಟ್ ಮಾಡಿದ್ದು, ಇದುವರೆಗೆ ಗುಲಾಬಿ ಬಣ್ಣದ ಡಾಲ್ಫಿನ್ ನೋಡಿರಲಿಲ್ಲ ಎಂದು ಹೇಳಿದ್ದು, ಹಲವರು ಈ ಅಪರೂಪದ ಡಾಲ್ಫಿನ್ ಬಗ್ಗೆ ಆಶ್ಚರ್ಯವನ್ನೂ ವ್ಯಕ್ತಪಡಿಸಿದ್ದಾರೆ. 900 ಕ್ಕೂ ಹೆಚ್ಚು ನೆಟ್ಟಿಗರು ಈ ವಿಡಿಯೋವನ್ನು ರೀಟ್ವೀಟ್ ಮಾಡಿದ್ದು, ಕಮೆಂಟ್ಗಳ ಮೂಲಕ ಈ ಡಾಲ್ಫಿನ್ಗೆ ಗುಲಾಬಿ ಬಣ್ಣಕ್ಕೆ ಕಾರಣ ಏನಿರಬಹುದೆಂದು ಚರ್ಚೆ ನಡೆಸುತ್ತಿದ್ದಾರೆ. ಅಲ್ಲದೆ, ಈ ಪಿಂಕ್ ಡಾಲ್ಫಿನ್ ಬಗ್ಗೆ ಬಹುತೇಕರು ತಮ್ಮ ಕುತೂಹಲ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕಲ್ಯಾಣ ಮಂಟಪಕ್ಕೆ ವಧು ಪ್ರವೇಶಿಸಿದ್ದು ಹೀಗೆ: ವೈರಲ್ ವಿಡಿಯೋ ನೋಡಿ.
ಇನ್ನು, ಈ ವಿಡಿಯೋವನ್ನು ಸೋಲೋ ಪ್ಯಾರಾ ಕ್ಯೂರಿಯೋಸಿಸ್ ಎಂಬ ಟ್ವಿಟ್ಟರ್ ಬಳಕೆದಾರ ಮೊದಲ ಬಾರಿಗೆ ಈ ಪಿಂಕ್ ಡಾಲ್ಫಿನ್ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋಗೆ ಅವರದೇ ಕ್ರೆಡಿಟ್ ಅನ್ನು ಕೊಟ್ಟುಕೊಂಡಿದ್ದಾರೆ. ಈ ಹಿನ್ನೆಲೆ ಈ ವಿಡಿಯೋ ಅವರೇ ತೆಗೆದಿರಬಹುದು ಎಂದು ಊಹಿಸಲಾಗಿದೆ. ನಂತರ ಈ ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಹಂಚಿಕೊಂಡಿದ್ದಾರೆ.
ಸೋಲೋ ಪ್ಯಾರಾ ಕ್ಯೂರಿಯೋಸಿಸ್ ಶೇರ್ ಮಾಡಿದ ವಿಡಿಯೋವನ್ನು ಸುಮಾರು 1 ಲಕ್ಷದ 68 ಸಾವಿರ ಜನರು ವೀಕ್ಷಿಸಿದ್ದು, 200ಕ್ಕೂ ಹೆಚ್ಚು ಜನ ರೀಟ್ವೀಟ್ ಮಾಡಿದ್ದಾರೆ. ಅಲ್ಲದೆ, 700ಕ್ಕೂ ಹೆಚ್ಚು ನೆಟ್ಟಿಗರು ಲೈಕ್ ಮಾಡಿದ್ದು, ಹಲವರು ಕಮೆಂಟ್ಗಳನ್ನೂ ಮಾಡಿದ್ದಾರೆ.
ವಿವಿಧ ವರದಿಗಳ ಪ್ರಕಾರ, ಗುಲಾಬಿ ಬಣ್ಣದ ಡಾಲ್ಫಿನ್ ಪ್ರಭೇದವನ್ನು ''ದುರ್ಬಲ'' ಎಂದು "ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್" ವರ್ಗೀಕರಿಸಿದೆ. ಮತ್ತು ಮಾಲಿನ್ಯ, ಹವಾಮಾನ ಬದಲಾವಣೆ, ಹಡಗಿನ ಘರ್ಷಣೆ, ಅತಿಯಾದ ಮೀನುಗಾರಿಕೆ ಮತ್ತು ನೀರೊಳಗಿನ ಶಬ್ದ ಮಾಲಿನ್ಯದಿಂದ ಅದರ ಜನಸಂಖ್ಯೆಯು ಅಪಾಯದಲ್ಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ