ಈ ವಿಡಿಯೋ ನೋಡಿದ್ರೆ ನೀವು ಗೋಲ್‍ಗೊಪ್ಪ ತಿನ್ನೋದೇ ಇಲ್ಲ..!

Viral Video: ಆಘಾತಕಾರಿ ವೈರಲ್ ವಿಡಿಯೋ ಈಗಲೂ ಅಂತರ್ಜಾಲದಲ್ಲಿ ಹರಿದಾಡುತ್ತಿದೆ ಮತ್ತು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಇದನ್ನು ಹಂಚಿಕೊಳ್ಳುತ್ತಿದ್ದಾರೆ ಮತ್ತು ಜನರು ಇಂತಹ ಘಟನೆಗಳ ಬಗ್ಗೆ ಜಾಗರೂಕರಾಗಿರಬೇಕು

ಪಾನಿಪುರಿ ವ್ಯಾಪಾರಿ

ಪಾನಿಪುರಿ ವ್ಯಾಪಾರಿ

  • Share this:

ಸಾಮಾನ್ಯವಾಗಿ ಫಾಸ್ಟ್ ಫುಡ್ ಪ್ರಿಯರ ಪಟ್ಟಿಯಲ್ಲಿ ಪಾನಿಪೂರಿ, ಗೋಲ್‍ಗೊಪ್ಪ ಇದ್ದೇ ಇರುತ್ತದೆ. ಈ ಎರಡನ್ನು ಸಾಕಷ್ಟು ಜನರು ಜನರು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಗೋಲ್‍ಗೊಪ್ಪದ ಈ ವಿಡಿಯೋ ನೋಡಿದರೆ ಜನರು ಪಾನಿಪೂರಿ ತಿನ್ನೋದು ಬಿಟ್ರೂ ಆಶ್ಚರ್ಯವೇನಿಲ್ಲ.ಹೌದು ಬೀದಿ ಬದಿಯಲ್ಲಿ ಗೋಲ್‍ಗೊಪ್ಪ ಮಾಡುವ ವ್ಯಕ್ರಿಯೊಬ್ಬ ಪ್ಲಾಸ್ಟಿಕ್ ಮಗ್‍ನಲ್ಲಿ ಮೂತ್ರ ವಿಸರ್ಜನೆ ಮಾಡಿ ಅದನ್ನು ಗೋಲ್‍ಗೊಪ್ಪ ಮಾಡುವ ನೀರಿಗೆ ಹಾಕಿ ಅದರಿಂದ ಗೋಲ್‍ಗೊಪ್ಪದ ಪಾನಿಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಈ ಘಟನೆ ಅಸ್ಸಾಮಿನ ಗುವಾಹಟಿಯಲ್ಲಿನ ಅತ್ಗುವಾನ್ ಎಂಬ ಪ್ರದೇಶದಲ್ಲಿ ನಡೆದಿದೆ. ಈ ವ್ಯಾಪಾರಿಯ ವರ್ತನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.


ಆಘಾತಕಾರಿ ವೈರಲ್ ವಿಡಿಯೋ ಈಗಲೂ ಅಂತರ್ಜಾಲದಲ್ಲಿ ಹರಿದಾಡುತ್ತಿದೆ ಮತ್ತು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಇದನ್ನು ಹಂಚಿಕೊಳ್ಳುತ್ತಿದ್ದಾರೆ ಮತ್ತು ಜನರು ಇಂತಹ ಘಟನೆಗಳ ಬಗ್ಗೆ ಜಾಗರೂಕರಾಗಿರಬೇಕು ಮತ್ತು ಬೀದಿ ಆಹಾರ ಮಾರಾಟಗಾರರು ನಿರ್ವಹಿಸುವ ನೈರ್ಮಲ್ಯದ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ.


ಸ್ಥಳೀಯ ಸುದ್ದಿ ವರದಿಗಳ ಪ್ರಕಾರ, ಬೀದಿ ಆಹಾರ ಮಾರಾಟಗಾರನ ಗುರುತನ್ನು ಪೊಲೀಸರು ಇದುವರೆಗೆ ಬಹಿರಂಗಪಡಿಸಿಲ್ಲ, ಪ್ರಸ್ತುತ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.


"ಇಲ್ಲಿಯವರೆಗೆ, ಆ ವ್ಯಕ್ತಿಯ ಗುರುತು ಮತ್ತು ವಿಳಾಸವನ್ನು ಬಹಿರಂಗಪಡಿಸಿಲ್ಲ. ನಾವು ಈ ಘಟನೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದು, ಸಮಸ್ಯೆ ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದರು.


ಇದನ್ನೂ ಓದಿ: ಕಲ್ಯಾಣ ಮಂಟಪಕ್ಕೆ ವಧು ಪ್ರವೇಶಿಸಿದ್ದು ಹೀಗೆ: ವೈರಲ್ ವಿಡಿಯೋ ನೋಡಿ..

ಮಮೂನ್ ಖಾನ್ ಎಂಬುವರು ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಪ್ಲಾಸ್ಟಿಕ್ ಮಗ್‍ನಲ್ಲಿ ಮೂತ್ರ ವಿಸರ್ಜನೆ ಮಾಡಿ ಅದನ್ನು ಗೋಲ್‍ಗೊಪ್ಪ ಮಾಡುವ ನೀರಿಗೆ ಹಾಕಿ ಅದರಿಂದ ಗೋಲ್‍ಗೊಪ್ಪದ ಪಾನಿಮಾಡುವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.


ಈ ವಿಡಿಯೋವನ್ನು 13 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ನೂರಾರು ಮಂದಿ ಕಮೆಂಟ್ ಮಾಡಿ ತಮ್ಮ ಕೋಪವನ್ನು ಹೊರಹಾಕಿದ್ದಾರೆ. ಜೊತೆಗೆ ಬೀದಿಬದಿ ಆಹಾರದ ಗುಣಮಟ್ಟ ಪ್ರಶ್ನಿಸಿದ್ದಾರೆ.


ಈ ಬಗ್ಗೆ ವ್ಯಕ್ತಿಯೊಬ್ಬರು ಕಮೆಂಟ್ ಮಾಡಿ, ಈ ಕೃತ್ಯವು ತುಂಬಾ ಅಮಾನವೀಯ ಮತ್ತು ಆತನ ಕೊಳಕು ಮನಸ್ಸನ್ನು ಸೂಚಿಸುತ್ತದೆ. ಇದು ತುಂಬಾ ಅಸಹ್ಯಕರವಾಗಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು ಆ ವ್ಯಕ್ತಿಯನ್ನು ಕಠಿಣವಾಗಿ ಶಿಕ್ಷಿಸಬೇಕು ಮತ್ತು ವ್ಯಾಪಾರವನ್ನು ನಡೆಸಲು ಎಂದಿಗೂ ಅನುಮತಿ ನೀಡಬಾರದು.. ಹೀಗೆ ಹತ್ತು ಹಲವಾರು ಮಂದಿ ಹೇಳಿದ್ದಾರೆ.


ವಿಡಿಯೋದಲ್ಲಿ ಏನಿದೆ?
ವೈರಲ್ ಆದ ವಿಡಿಯೋದಲ್ಲಿ ಸುಮ್ಮನೆ ಗೋಲ್‍ಗೊಪ್ಪದ ಗಾಡಿ ಮುಂದೆ ವ್ಯಕ್ತಿಯು ನಿಂತಿರುತ್ತಾನೆ. ಅದೇ ಸಮಯದಲ್ಲಿ ಆ ವ್ತಕ್ತಿಯ ಪಕ್ಕದಲ್ಲಿ ಮತ್ತೊಬ್ಬ ಹುಡುಗ ಹಾದುಹೋಗುತ್ತಾನೆ. ಆ ವೇಳೆ ಆತ ಕೆಳಗಡೆಯಿಂದ ಮೂತ್ರ ವಿಸರ್ಜನೆ ಮಾಡಿದ ಮಗ್ ತೆಗೆದು ಗಾಡಿಯಲ್ಲಿದ್ದ ನೀರಿನ ಬಕೆಟ್‍ಗೆ ಹಾಕಿ ಸುಮ್ಮನೆ ನಿಲ್ಲುತ್ತಾನೆ.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: