Yellapur Jatra 2023: ದೇವಮ್ಮ ದುರ್ಗಮ್ಮರ ಪುರಪ್ರವೇಶ, ಶುರುವಾಯ್ತು ಅದ್ದೂರಿ ಯಲ್ಲಾಪುರ ಜಾತ್ರೆ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಒಂಭತ್ತು ದಿನಗಳ ಕಾಲ ನಡೆಯುವ ದೇವಮ್ಮ ದುರ್ಗಮ ದೇವಿಯಂದಿರ ಜಾತ್ರೆ ದಕ್ಷಿಣ ಭಾರತದ ಸುಪ್ರಸಿದ್ಧ ಜಾತ್ರೆಗಳಲ್ಲೊಂದು. ಕೋವಿಡ್-19ರ ಕಾರಣದಿಂದ ಐದು ವರ್ಷದ ಬಳಿಕ ಈ ವರ್ಷ ಜಾತ್ರೆ ನಡೆಯುತ್ತಿದೆ.

  • Share this:

    ಉತ್ತರ ಕನ್ನಡ: ಮುಗಿಲು ಸೀಳುವ ಘೋಷಣೆಗಳು, ಭೂಮಿ ಬಿರಿಯುವಂತೆ ಮೊಳಗುವ ಮಂಗಳವಾದ್ಯ! ಯಾವತ್ತೂ ಪ್ರಶಾಂತವಾಗಿರ್ತಿದ್ದ ಯಲ್ಲಾಪುರ ಪೇಟೆಯಲ್ಲಿ (Yellapur Jatra 2023)  ಹಬ್ಬ! ಒಬ್ಬಳು ಸಿಂಹವಾಹಿನಿ ದುರ್ಗೆ, ಇನ್ನೊಬ್ಬಳು ಮಹಿಷಮರ್ದಿನಿ ಕಾಳಿ! ಇವರಿಬ್ಬರ ಆಗಮನಕ್ಕೆ ಅಪಾರ ಭಕ್ತವೃಂದ!


    ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ದೇವಮ್ಮ-ದುರ್ಗಮ್ಮ ಜಾತ್ರೆ ಉತ್ಸವ ಅಧಿಕೃತವಾಗಿ ಆರಂಭವಾಗಿದೆ. ಒಂಭತ್ತು ದಿನಗಳ ಕಾಲ ನಡೆಯುವ ದೇವಮ್ಮ ದುರ್ಗಮ ದೇವಿಯಂದಿರ ಜಾತ್ರೆ ದಕ್ಷಿಣ ಭಾರತದ ಸುಪ್ರಸಿದ್ಧ ಜಾತ್ರೆಗಳಲ್ಲೊಂದು. ಕೋವಿಡ್-19ರ ಕಾರಣದಿಂದ ಐದು ವರ್ಷದ ಬಳಿಕ ಈ ವರ್ಷ ಜಾತ್ರೆ ನಡೆಯುತ್ತಿದೆ.




    ಇದನ್ನೂ ಓದಿ: Uttara Kannada: ಈ ಹಳ್ಳಿ ಮಕ್ಕಳು ತಾವೇ ಡ್ರೋನ್ ಮಾಡಿ ಹಾರಿಸ್ತಿದ್ದಾರೆ ನೋಡಿ!


    ರಸ್ತೆಯುದ್ದಕ್ಕೂ ಹೂವಿನ ಸುರಿಮಳೆ
    ಮೂಲ ದೇವಸ್ಥಾನದಿಂದ ದೇವಮ್ಮ ದುರ್ಗಮ್ಮ ದೇವಿಯರು ಶೋಭಾಯಾತ್ರೆ ಮೂಲಕ ಜಾತ್ರಾ ಗದ್ದುಗೆಗೆ ಬಂದು ವಿರಾಜಮಾನಳಾದ್ದಾರೆ. ಲಕ್ಷಾಂತರ ಭಕ್ತಸಾಗರ ದೇವಿಯರ ಆಗಮನ ಕಣ್ತುಂಬಿಕೊಂಡರು. ಭಕ್ತರು ರಸ್ತೆಯುದ್ದಕ್ಕೂ ದೇವಿಯರಿಗೆ ಭಕ್ತರ ಹೂವಿನ ಸುರಿಮಳೆಗೈದು ಭಕ್ತಿ ಪರಾಕಾಷ್ಠೆ ಮೆರೆದಿದ್ದಾರೆ.






    ಇದನ್ನೂ ಓದಿ: Uttara Kannada: ಹವ್ಯಾಸದಿಂದಲೇ ಹಣ-ಹೆಸರು ಎರಡನ್ನೂ ಗಳಿಸಿದ ಗ್ರಾಮೀಣ ಮಹಿಳೆ!


    ಒಂಭತ್ತು ದಿನಗಳ ಕಾಲ ದರ್ಶನ ಭಾಗ್ಯ
    ಒಟ್ಟಾರೆ ಒಂಬತ್ತು ದಿನಗಳ ಕಾಲ ದೇವಿಯರು ಜಾತ್ರಾ ಗದ್ದುಗೆಯಲ್ಲಿ ಭಕ್ತರಿಗೆ ದರ್ಶನ ನೀಡಲಿದ್ದಾರೆ. ಒಂಭತ್ತು ದಿನಗಳ ಬಳಿಕ ಕೆರೆಯಲ್ಲಿ ದೇವಿ ವಿಸರ್ಜಿಸಿ ಜಾತ್ರೆಗೆ ತೆರೆ ಬೀಳಲಿದೆ.

    Published by:ಗುರುಗಣೇಶ ಡಬ್ಗುಳಿ
    First published: