ಕಾರವಾರ: ಕಣ್ಣು ಹಾಯಿಸಿದಷ್ಟೂ ದೂರ ಕಡಲ ಕಿನಾರೆ, ಆಗಾಗ ಭೋರ್ಗರೆವ ಅಲೆಗಳ ಅಬ್ಬರ, ಮರಳಲ್ಲಿ ಉರುಳಾಡಿಬಿಡಬೇಕು ಅನ್ನೋ ಫೀಲ್, ಭೂಕೈಲಾಸ ಎಂದೇ ಫೇಮಸ್ ಆಗಿರೋ ಭಕ್ತಿ ಭಾವಗಳಿಗೆ ಹೆಸರಾದ ತಾಣ ಗೋಕರ್ಣದ ಕಡಲು (Gokarna Beaches) ಈ ವರ್ಷಾಂತ್ಯಕ್ಕೆ ಪ್ರವಾಸಿಗರನ್ನ ಕೈಬೀಸಿ (Year End Travel Plan) ಕರೆಯುತ್ತಿದೆ. ಗೋಕರ್ಣ ಅತ್ಯಂತ ಸುರಕ್ಷಿತ ಬೀಚ್ಗಳಲ್ಲಿ ಒಂದು. ಹೀಗಾಗಿಯೇ ನೀರಲ್ಲಿ ಆಟವಾಡೋಕೆ (Beaches In Gokarna) ಪ್ರವಾಸಿಗರು ಹೆಚ್ಚಾಗಿ ಇಲ್ಲಿಗೆ ಆಗಮಿಸ್ತಾರೆ ಜೊತೆಗೆ ಗೋಕರ್ಣ ಆರಾಧನೆಗೂ ಹೇಳಿದ ತಾಣ. ಹೀಗಾಗಿ ಸಮುದ್ರದ ಅಲೆಗಳು ಅಬ್ಬರಿಸುತ್ತಿದ್ರೂ ಮನಸ್ಸು ಶಾಂತಚಿತ್ತವಾಗಿರುತ್ತೆ.
ಒಂಟೆ ಸವಾರಿ, ಬೋಟಿಂಗ್ ಪ್ರವಾಸಿಗರ ಮನಸ್ಸು ಗೆಲ್ತಿದೆ. ಕೊರೊನಾ ಬಳಿಕ ಎರಡು ವರ್ಷಗಳಿಂದ ಕಡಿಮೆಯಾಗಿದ್ದ ಪ್ರವಾಸಿಗರ ಸಂಖ್ಯೆ ಈಗ ಏರಿಕೆ ಕಂಡಿದೆ. ದಿನವೊಂದಕ್ಕೆ ಸಾವಿರಾರು ಪ್ರವಾಸಿಗರು ಇಲ್ಲಿಗೆ ಆಗಮಿಸಿದ ಕಾಲ ಕಳೆಯುತ್ತಿದ್ದಾರೆ.
ಇದನ್ನೂ ಓದಿ: Rani Mahal: ಇದು ಕರುನಾಡಿನ ಮೊಟ್ಟ ಮೊದಲ ರಾಜಮನೆತನದ ರಾಣಿ ನಿವಾಸ
ಗೋವಾಕ್ಕೆ ಸಖತ್ ಪೈಪೋಟಿ
ಗೋವಾ ಬೀಚ್ಗೆ ಪೈಪೋಟಿ ಅನ್ನೋ ರೀತಿಲಿ ಗೋಕರ್ಣ ಬೀಚ್ ಕೂಡಾ ಬೆಳೆಯುತ್ತಿದೆ. ಲೋಕಲ್ ಬ್ಯುಸಿನೆಸ್ ಗರಿಗೆದರುತ್ತಿದೆ. ಬೇರೆ ಬೇರೆ ರಾಜ್ಯಗಳಿಂದ ಇಲ್ಲಿಗೆ ಆಗಮಿಸಿ ನೀರಿನಲ್ಲಿ ಆಟವಾಡುತ್ತಾ, ಪಡುವಣದಲ್ಲಿ ಸೂರ್ಯ ಮುಳುಗುವವರೆಗೆ ಇದ್ದು ಎಂಜಾಯ್ ಮಾಡ್ತಿದ್ದಾರೆ.
ಇದನ್ನೂ ಓದಿ: Freedom Fighter: 117 ವರ್ಷದ ಈ ಸ್ವಾತಂತ್ರ್ಯ ಹೋರಾಟಗಾರ ಕೇವಲ ಗಡ್ಡೆಗೆಣಸು ತಿಂದು ಬದುಕುತ್ತಿದ್ದಾರೆ!
ಚೀಪ್ ಆ್ಯಂಡ್ ಬೆಸ್ಟ್ ಎರಡೂ ಹೌದು!
ಗೋವಾಕ್ಕೆ ಹೋಲಿಸಿದ್ರೆ ಗೋಕರ್ಣ ಚೀಪ್ ಆ್ಯಂಡ್ ಬೆಸ್ಟ್ ಪ್ಲೇಸ್. ಪ್ರವಾಸೋದ್ಯಮ ಇಲಾಖೆ ಇನ್ನಷ್ಟು ಸೌಕರ್ಯ ಕಲ್ಪಿಸಿದಲ್ಲಿ ಗೋವಾವನ್ನೂ ಮೀರಿಸೋ ಎಲ್ಲಾ ಲಕ್ಷಣಗಳೂ ಗೋಕರ್ಣದಲ್ಲಿ ಕಾಣ್ತಿವೆ. ಅಲ್ಲದೇ ಮಾದಕದ್ರವ್ಯ ಮತ್ತಿತರ ಅಪರಾಧ ಕೃತ್ಯಗಳನ್ನೂ ತಡೆಯುವ ಸವಾಲು ಪೊಲೀಸರ ಮುಂದಿದೆ. ಇನ್ನೇಕೆ ತಡ, ಈ ವರ್ಷಾಂತ್ಯಕ್ಕೆ ಟ್ರಿಪ್ ಪ್ಲಾನ್ ಮಾಡ್ತಿದ್ರೆ ಗೋಕರ್ಣದತ್ತ ಹೆಜ್ಜೆಹಾಕೋಕೆ ಪ್ಲಾನ್ ಮಾಡಬಹುದು ನೋಡಿ.
ವರದಿ: ಎ.ಬಿ.ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ