ವರ್ಷದ ಕೊನೇ ವೀಕೆಂಡ್, ಟೂರಿಗೆ ಸರಿಯಾದ ಟೈಮ್ ಬೇರೆ! ಇಂತಾ ಸಮಯದಲ್ಲಿ ಜಾಕ್ಪಾಟ್ ಥರಾ ಒಂದು ಜಾಲಿರೈಡನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KSRTC Year End Travel Package) ತನ್ನ ಪ್ರಯಾಣಿಕರಿಗೆ ಹಾಗೂ ಇಲ್ಲಿ ಬರುವ ಪ್ರವಾಸಿಗರಿಗೆ (Travellers) ನೀಡಿದೆ! ಹಾಗಾದರೆ ಏನದು ವಿಶೇಷ? ಇಲ್ಲಿದೆ ನೋಡಿ ಸಮಗ್ರ ಮಾಹಿತಿ!
ಉತ್ತರ ಕನ್ನಡ ಜಿಲ್ಲೆಯ ಕುಮಟಾದ ವಾತಾವರಣ ಎಷ್ಟು ಜನರಿಗೆ ಇಷ್ಟ ಇಲ್ಲ ಹೇಳಿ? ಗಗನ ಚುಂಬಿ ಸಹ್ಯಾದ್ರಿ, ಕೆಳಗೆ ಭೋರ್ಗರೆವ ಕಡಲು, ಸುತ್ತಲೂ ಹಲವು ಪ್ರಸಿದ್ಧ ದೇವಸ್ಥಾನಗಳು, ಪ್ರೇಕ್ಷಣಿಯ ಸ್ಥಳಗಳು, ಅಬ್ಬಬ್ಬಾ ಕುಮಟಾದಿಂದ ಮುರ್ಡೇಶ್ವರದ ಬಗ್ಗೆ ವರ್ಣಿಸಬೇಕೆಂದರೆ
ಒಂದೇ ಉಸಿರಲ್ಲಿ ಇಡೀ ದಿನ ಮಾತಾಡಬೇಕು!
ಕುಮಟಾದಿಂದ ಶುರುವಾಗಲಿದೆ ಈ ಪ್ರವಾಸ
ಉತ್ತರ ಕನ್ನಡ ಜಿಲ್ಲೆಯ ಕುಮಟಾದಿಂದ ಮುರ್ಡೇಶ್ವರದ ಟೂರ್ ಪ್ಯಾಕೇಜ್ ಒಂದನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಾರಾಂತ್ಯದ ಪ್ರವಾಸಕ್ಕೆ ಆರಂಭಿಸಿದೆ. ಆ ಟೂರಿಂಗ್ ಪ್ಯಾಕೇಜ್ನ ವಿವರ ಇಲ್ಲಿದೆ ನೋಡಿ.
ಪ್ರತಿ ಶನಿವಾರ ಮತ್ತು ಭಾನುವಾರ ಇರುತ್ತೆ
ಪ್ರತಿ ಶನಿವಾರ ಹಾಗೂ ಭಾನುವಾರದಂದು ಈ ಟೂರ್ ಇರುತ್ತದೆ.
ಪ್ರಾರಂಭದ ಸ್ಥಳ ಕುಮಟಾ, ಕುಮಟಾದಿಂದ ಬೆಳಿಗ್ಗೆ 7:30 ಕ್ಕೆ ಬಸ್ ಹೊರಟರೆ ಮೊದಲು 8: 15ಕ್ಕೆ ಗೋಕರ್ಣ ಮಹಾಗಣಪತಿ ದೇವಸ್ಥಾನದ ದರ್ಶನದಿಂದ ಪ್ರಯಾಣ ಆರಂಭವಾಗುತ್ತದೆ.
ನಂತರ ಗೋಕರ್ಣ ಸುತ್ತಿಕೊಂಡು 9:45 ಕ್ಕೆ ಪುನಃ ಮಿರ್ಜಾನ್ ಕೋಟೆಗೆ ಬಸ್ ತಲುಪಲಿದೆ. ಅಲ್ಲಿಂದ 11:15ಕ್ಕೆ ಅಪ್ಸರಕೊಂಡಕ್ಕೆ ಬಸ್ ತೆರಳಲಿದೆ. ನಂತರದಲ್ಲಿ 12: 30 ಕ್ಕೆ ಇಡಗುಂಜಿ ಮಹಾಗಣಪತಿ ಸನ್ನಿಧಾನವನ್ನು ತಲುಪಿ ಅದಾದ ಮೇಲೆ ಮುರ್ಡೇಶ್ವರಕ್ಕೆ ಮಧ್ಯಾಹ್ನ 2 ಘಂಟೆಗೆ ಸೇರಲಿದೆ.
ಇದನ್ನೂ ಓದಿ: Success Story: ಬಸಳೆ ಬೆಳೆದು ತಿಂಗಳಿಗೆ 40 ಸಾವಿರ ಆದಾಯ ಗಳಿಸ್ತಿರೋ ಕರಾವಳಿ ಕೃಷಿಕ!
ಅಲ್ಲಿಂದ ಪುನಃ ಸಂಜೆ 4 ಗಂಟೆಗೆ ಕಾಸರಕೋಡು ಇಕೋ ಬೀಚ್ ಹಾಗೂ ಶರಾವತಿ ಕಾಂಡ್ಲಾ ವನದ ಸವಾರಿ ಪೂರ್ಣಗೊಳಿಸಿ ಸಂಜೆ 7 ಘಂಟೆಗೆ ಗೋಕರ್ಣ ತಲುಪುವ ಮೂಲಕ ಈ ಭರ್ಜರಿ ಪ್ರವಾಸಿ ಮುಕ್ತಾಯವಾಗಲಿದೆ.
ಈ ಪ್ರವಾಸದ ದರ ಮಾಹಿತಿ ಇಲ್ಲಿದೆ ನೋಡಿ
ವಯಸ್ಕರಿಗೆ 300 ರೂಪಾಯಿ ಹಾಗೂ ಮಕ್ಕಳಿಗೆ 250 ರೂಪಾಯಿ ದರವನ್ನು ನಿಗದಿಪಡಿಸಲಾಗಿದೆ ನೀವು ಕೆಎಸ್ಆರ್ಟಿಸಿ ವೆಬ್ಸೈಟ್ನಲ್ಲಿ ಈ ಪ್ರವಾಸವನ್ನು ಮುಂಗಡ ಬುಕ್ಕಿಂಗ್ ಮಾಡಬಹುದಾಗಿದೆ. ಬುಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Success Story: ಮಹಿಳೆಯೇ ಇಲ್ಲಿ ಮೇಸ್ತ್ರಿ, ಪುರುಷರನ್ನು ಮೀರಿಸಿದ ಧೀರೆ!
ಹೆಚ್ಚಿನ ಸಂಪರ್ಕಕ್ಕಾಗಿ 7760991726,9482629870 ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ