• Home
  • »
  • News
  • »
  • uttara-kannada
  • »
  • Uttara Kannada: ಮಹಿಳೆಯರಿಂದ ರುದ್ರ ಪಠಣ! ಮಂತ್ರಘೋಷದ ಝೇಂಕಾರ

Uttara Kannada: ಮಹಿಳೆಯರಿಂದ ರುದ್ರ ಪಠಣ! ಮಂತ್ರಘೋಷದ ಝೇಂಕಾರ

ಇಲ್ಲಿ ನೋಡಿ ಮಂತ್ರಘೋಷ!

"ಇಲ್ಲಿ ನೋಡಿ ಮಂತ್ರಘೋಷ!"

ರುದ್ರ, ಚತುರ್ವೇದಗಳನ್ನು ಜಾತಿ, ಮತ ಬೇಧವಿಲ್ಲದೇ ಎಲ್ಲರಿಗೂ ತಲುಪಿಸುವ ಉದ್ದೇಶ ಹೊಂದಿರೋ ಸತ್ಯಸಾಯಿ ಸಮೀತಿ ಈ ಅಪರೂಪದ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಮಹಿಳೆಯರ ಮಂತ್ರಘೋಷವನ್ನು ನೀವು ಇಲ್ಲಿ ನೋಡಿ.

  • Share this:

    ಕಾರವಾರ: ಶ್ರದ್ಧಾ ಭಕ್ತಿಯಿಂದ ರುದ್ರ ಪಠಣ (Rudra Mantra) ನಡೆಸುತ್ತಿರೋ ಮಹಿಳೆಯರು, ಸಾಧು ಸಂತರು. ನಿರಂತರ ರುದ್ರವಾಕ್ಕುಗಳನ್ನು ಪಠಿಸುತ್ತಾ ದೇವರನ್ನು ಸ್ತುತಿಸುತ್ತಿರೋ ಭಕ್ತರು. ರುದ್ರ ಪಠಣವನ್ನ (Rudra Mantra Chanting) ಸಾಮಾನ್ಯವಾಗಿ ವೈದಿಕರು, ಸಿದ್ಧ ಪುರುಷರು ಮಾತ್ರ ಪಠಿಸುತ್ತಾರೆ. ಆದ್ರೆ ಇಲ್ಲಿ ಎಲ್ಲರೂ ಜೊತೆಗೂಡಿ ಪಾರಾಯಣ ಮಾಡ್ತಿದ್ರು. ಉತ್ತರ ಕನ್ನಡ ಜಿಲ್ಲೆಯ (Uttara Kannada) ಸಿದ್ದಾಪುರ ತಾಲೂಕಿನಲ್ಲಿ ಇಂತಹದೊಂದು ವಿಶೇಷ ನಡೆಯಿತು.


    ಸಿದ್ದಾಪುರದ ಸತ್ಯಸಾಯಿ ಸೇವಾ ಸಮೀತಿಯ ವತಿಯಿಂದ ಸುಮಾರು 100 ಆಸ್ತಿಕರು ಏಕಾದಶ ರುದ್ರ ಪಠಣ ಮಾಡಿದರು‌. ಸುಮಾರು 30 ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಗಮನಸೆಳೆಯಿತು.


    ಇದನ್ನೂ ಓದಿ: Uttara Kannada: ಕಾಂತಾರದಲ್ಲೂ ಇರದ ದೈವ, ಉತ್ತರ ಕನ್ನಡದಲ್ಲಿ ಕ್ಷೇತ್ರಪಾಲ ಜಟಿಗನ ಆರಾಧನೆ
    ಬೆಳಗ್ಗೆ 9 ರಿಂದ 1 ಗಂಟೆಯ ತನಕ ನಿರಂತರ ಹಾಗೂ ನಿರರ್ಗಳವಾಗಿ ರುದ್ರವಾಕ್ಕುಗಳು ಸತ್ಯಸಾಯಿ ದೇವಾಲಯದಲ್ಲಿ ಅನುರಣಿಸಿದವು. 


    ನೀವೂ ರುದ್ರ ಮಂತ್ರಗಳನ್ನು ಕಲಿಯಬೇಕೆಂದರೆ ಸಂಪರ್ಕ ಸಂಖ್ಯೆ ವೆಂಕಟೇಶ್ ಬಡಿಗೇರ್ : 95385 75799


    ಇದನ್ನೂ ಓದಿ: Kamakshi Temple: ಕುದಿಯುವ ಎಣ್ಣೆಯಿಂದ ವಡೆ ತೆಗೆಯೋ ಉತ್ತರ ಕನ್ನಡದ ಭಕ್ತರು!


    ನೀವೂ ವೇದಗಳನ್ನು ಕಲಿಯಬಹುದು!
    ರುದ್ರ, ಚತುರ್ವೇದಗಳನ್ನು ಜಾತಿ, ಮತ ಬೇಧವಿಲ್ಲದೇ ಎಲ್ಲರಿಗೂ ತಲುಪಿಸುವ ಉದ್ದೇಶ ಹೊಂದಿರೋ ಸತ್ಯಸಾಯಿ ಸಮೀತಿಯ ಕಾರ್ಯಕ್ರಮಕ್ಕೆ ಉತ್ತರ ಕನ್ನಡದ ನಾನಾ ಕಡೆಯಿಂದ ಆಸ್ತಿಕರು ಆಗಮಿಸಿದ್ದರು‌. ನಿಮಗೂ ವೇದಗಳನ್ನ ಕಲಿಯುವ ಆಸಕ್ತಿ, ಅಧ್ಯಾತ್ಮ ಸಾಧನೆ ಮಾಡುವ ಮನಸ್ಸಿದ್ದರೆ ಸಮೀತಿಯನ್ನು ಸಂಪರ್ಕಿಸುವಂತೆ ತಿಳಿಸಲಾಯ್ತು. ಒಟ್ಟಾರೆ ಒಂದಿಡೀ ದಿನ ಸಿದ್ದಾಪುರದಲ್ಲಿ ಮಂತ್ರಘೋಷಗಳ ನಾದ ಝೇಂಕರಿಸಿತು.


    ವರದಿ: ಎ.ಬಿ.ನಿಖಿಲ್, ಮುಂಡಗೋಡು

    Published by:ಗುರುಗಣೇಶ ಡಬ್ಗುಳಿ
    First published: